Asianet Suvarna News Asianet Suvarna News

Bagalkote: ಎಂಎಲ್‌ಸಿ ಚುನಾವಣೆಗೆ ಸಕಲ ಸಿದ್ಧತೆ: ಡಿಸಿ ಸುನೀಲ್‌ ಕುಮಾರ್

ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆಗೆ ಜೂ.13 ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಪದವೀಧರ ಮತಕ್ಷೇತ್ರಕ್ಕೆ 33,651, ಶಿಕ್ಷಕರ ಮತಕ್ಷೇತ್ರಕ್ಕೆ 5,173 ಮತದಾರರು, 38,824 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಹೇಳಿದರು.

legislative council election preparation going on bagalkote gvd
Author
Bangalore, First Published Jun 5, 2022, 10:06 PM IST

ಬಾಗಲಕೋಟೆ (ಜೂ.05): ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆಗೆ ಜೂ.13 ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಪದವೀಧರ ಮತಕ್ಷೇತ್ರಕ್ಕೆ 33,651, ಶಿಕ್ಷಕರ ಮತಕ್ಷೇತ್ರಕ್ಕೆ 5,173 ಮತದಾರರು, 38,824 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ 32, ಗ್ರಾಮೀಣ ಭಾಗದಲ್ಲಿ 16 ಸೇರಿ ಒಟ್ಟು 48 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 

ಪ್ರತಿ ಮತಗಟ್ಟೆಗೆ ಒಬ್ಬರಂತೆ ಮೈಕ್ರೋ ಆಬ್ಜರ್‌ವರ್‌ ನೇಮಿಸಲಾಗಿದೆ. ಮತಗಟ್ಟೆಗೆ ಸಿಬ್ಬಂದಿಯರನ್ನು ಕರೆತರಲು 34 ಜೀಪ್‌, 5 ಕ್ರುಸರ್‌ ಹಾಗೂ 1 ಮಿನಿ ಬಸ್‌ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪದವೀಧರ ಮತಕ್ಷೇತ್ರಕ್ಕೆ ಮೇಜರ್‌ ಮನಿವಣ್ಣನ್‌ ಹಾಗೂ ಶಿಕ್ಷಕರ ಮತಕ್ಷೇತ್ರಕ್ಕೆ ಮುನಿಶ್‌ ಮೌದಗಿಲ್‌ ಅವರನ್ನು ಭಾರತ ಚುನಾವಣಾ ಆಯೋಗ ವೀಕ್ಷಕರನ್ನಾಗಿ ನೇಮಕ ಮಾಡಿದೆ. 

ಜಿಲ್ಲೆಯಲ್ಲಿ 9 ಸೆಕ್ಟರ್‌, 27 ಪ್ಲಾಯಿಂಗ್‌ ಸ್ಕಾವಡ್‌, 18 ವಿಡಿಯೋ ಸರ್ವೆಲನ್ಸ್‌ ತಂಡ ಹಾಗೂ ಒಂದು ದೂರು ನಿರ್ವಹಣಾ ಕೇಂದ್ರ, ಏಕಗವಾಕ್ಷ ಸಮಿತಿ, ಎಂಸಿಎಂಸಿ ಕಮಿಟಿ ಸ್ಥಾಪಿಸಲಾಗಿದೆ. ಇಬ್ಬರು ಪಿಎಸೈ, 5 ಜನ ಎಎಸೈ, 48 ಹೆಡ್‌ ಕಾನ್ಸಟೇಬಲ್‌, 59 ಪೊಲೀಸ್‌ ಕಾನ್ಸಟೇಬಲ್‌ ಸೇರಿ ಒಟ್ಟು 114 ಜನರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘದಡಿ 102 ಐಎಂಎಲ್‌ ಮತ್ತು 20 ಲೀಟರ್‌ ಲಿಕ್ಕರ್‌, 5.026 ಕೆಜಿ ಗಾಂಜಾ ಹಾಗೂ 4 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅಕಾಲಿಕ ಮಳೆಗೆ ಪರಿಹಾರ ವಿತರಣೆ: ಮೇ ಮಾಹೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗ ಜಿಲ್ಲೆಯಲ್ಲಿ 4 ಜನ ಮೃತಪಟ್ಟಿದ್ದು, ತಲಾ .5 ಲಕ್ಷದಂತೆ .20 ಲಕ್ಷ ಪರಿಹಾರ ವಿತರಿಸಲಾಗಿದೆ. 13 ಎಮ್ಮೆ, 21 ಕುರಿ, 1200 ಕೋಳಿಗಳು ಮೃತಪಟ್ಟಿದ್ದು, .4.48 ಲಕ್ಷಗಳ ಪರಿಹಾರ ನೀಡಲಾಗಿದೆ. 4 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 665 ಭಾಗಶಃ ಹಾನಿಗೊಳಗಾಗಿವೆ. ಅದರಲ್ಲಿ 221 ಮನೆಗಳು ತಿರಸ್ಕೃತಗೊಂಡಿದ್ದು, ಉಳಿದವುಗಳಲ್ಲಿ 203ಕ್ಕೆ ಪರಿಹಾರಧನ ಪಾವತಿಸಲಾಗಿದೆ. ಬಾಕಿ 255 ಬಾಕಿ ಉಳಿದಿವೆ. ಮನೆ ಹಾನಿಗೆ ಇಲ್ಲಿಯವರೆಗೆ .11.35 ಲಕ್ಷಗಳ ಪರಿಹಾರ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಬಾಗಲಕೋಟೆಯ ನವನಗರದಲ್ಲಿ ಮುಖ್ಯ ಚರಂಡಿ ಸಮಸ್ಯೆ: ಸಾರ್ವಜನಿಕರಿಂದ ಹಿಡಿಶಾಪ

ತೋಟಗಾರಿಕೆ ಬೆಳೆಗಳ ಕ್ಷೇತ್ರದಲ್ಲಿ 58 ಜನ ರೈತರ 59.4 ಹೆಕ್ಟೇರ್‌ ಪ್ರದೇಶ ಹಾನಿಯಾಗಿದ್ದು, .3.398 ಲಕ್ಷ ಪರಿಹಾರ ನೀಡಲಾಗಿದೆ. ಕೃಷಿಯಲ್ಲಿ 100 ರೈತರ 85 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಪರಿಹಾರ ವಿತರಣೆ ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಹೆಸ್ಕಾಂಗೆ ಸಂಬಂಧಿಸಿದಂತೆ 534 ವಿದ್ಯುತ್‌ ಕಂಬ, 109 ಟ್ರಾನ್ಸಪಾರ್ಮರ್‌, 16.18 ವಿದ್ಯುತ್‌ ಮಾರ್ಗ ಹಾನಿಗೊಳಗಾಗಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.

ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ಸಹ ಅಗತ್ಯ: ಡಿಸಿ ಆಡಳಿತದಲ್ಲಿ ಪಾರದರ್ಶಕತೆ ತರುವ ಮೂಲಕ ಜಿಲ್ಲೆಯ ಜನತೆಗೆ ವಿಶ್ವಾಸ ಮೂಡಿಸುವಂತಹ ಕೆಲಸ ಮಾಡುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ಹೇಳಿದರು. ಜನರಿಂದ ಬಂದಂತಹ ದೂರುಗಳಿಗೆ ಸ್ಪಂದಿಸುವ ಕೆಲಸ ಮಾಡುವುದರ ಜೊತೆಗೆ ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತದಲ್ಲಿ ಪಾರದರ್ಶಕತೆ ತಂದು ಉತ್ತಮ ಕೆಲಸ ಮಾಡಲಾಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ಸಹ ಅಗತ್ಯವಾಗಿದೆ ಎಂದರು.

ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಪಟ್ಟದಕಲ್ಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಟೂರಿಸಂ ಪ್ಲಾಜಾ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂದಿನ 7 ತಿಂಗಳದೊಳಗೆ ಪೂರ್ಣಗೊಳ್ಳಲಿದೆ. ಬಾದಾಮಿ ಗುಹಾಂತರ ದೇವಾಲಯ ಹಾಗೂ ಅಗಸ್ತ್ಯತೀರ್ಥ ಹೊಂಡದ ಬಳಿ ಇರುವ ಮಾನವ ವಿಕಾಸ ಪಾರ್ಕ್ಗೆ ಭೇಟಿ ನೀಡಿದ್ದು, ಅಲ್ಲಿನ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಅಗಸ್ತ್ಯ ತೀರ್ಥಕ್ಕೆ ಹೊಂದಿಕೊಂಡಿರುವ ಮನೆಗಳ ಸ್ಥಳಾಂತರಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಶುರುವಾಯ್ತು ಡ್ರೋನ್​ ಟೆಕ್ನಾಲಜಿ ಮೂಲಕ ಜಮೀನು ಸರ್ವೆ ಕಾರ್ಯ!

ಜಿಲ್ಲೆಯಲ್ಲಿ 9 ಸೆಕ್ಟರ್‌, 27 ಪ್ಲಾಯಿಂಗ್‌ ಸ್ಕಾಡ್‌, 18 ವಿಡಿಯೋ ಸರ್ವೆಲನ್ಸ್‌ ತಂಡ ಹಾಗೂ ಒಂದು ದೂರು ನಿರ್ವಹಣಾ ಕೇಂದ್ರ, ಏಕಗವಾಕ್ಷ ಸಮಿತಿ, ಎಂಸಿಎಂಸಿ ಕಮಿಟಿ ಸ್ಥಾಪಿಸಲಾಗಿದೆ. ಇಬ್ಬರು ಪಿಎಸೈ, 5 ಜನ ಎಎಸೈ, 48 ಹೆಡ್‌ ಕಾನ್ಸಟೇಬಲ್‌, 59 ಪೊಲೀಸ್‌ ಕಾನ್ಸಟೇಬಲ್‌ ಸೇರಿ ಒಟ್ಟು 114 ಜನರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘದಡಿ 102 ಐಎಂಎಲ್‌ ಮತ್ತು 20 ಲೀಟರ್‌ ಲಿಕ್ಕರ್‌, 5.026 ಕೆಜಿ ಗಾಂಜಾ ಹಾಗೂ 4 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
-ಪಿ.ಸುನೀಲ್‌ ಕುಮಾರ ಜಿಲ್ಲಾಧಿಕಾರಿ

Follow Us:
Download App:
  • android
  • ios