Asianet Suvarna News Asianet Suvarna News

ಕಲಿಕೆ ಅನ್ನುವುದು ವಿದ್ಯಾರ್ಥಿಗಳಿಗೆ ಅಂಗೈಯಲ್ಲಿ ಶಿಕ್ಷಣ ದೊರಕುವಂತಾಗಿದೆ : ಡಾ.ಜಯಕುಮಾರ್

ಜ್ಞಾನದ ಸಂಪನ್ಮೂಲಗಳು ಮುಕ್ತವಾಗಿ ದೊರಕುವ ಮೂಲಕ ಕಲಿಕೆ ಅನ್ನುವುದು ವಿದ್ಯಾರ್ಥಿಗಳಿಗೆ ಅಂಗೈಯಲ್ಲಿ ಶಿಕ್ಷಣ ದೊರಕುವಂತಾಗಿದೆ ಎಂದು ಹುಲ್ಲಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಜಯಕುಮಾರ್ ಅಭಿಪ್ರಾಯಪಟ್ಟರು.

Learning means getting education in the palm of students' hands : Dr. Jayakumar snr
Author
First Published Feb 24, 2024, 10:51 AM IST

 ಹುಣಸೂರು :  ಜ್ಞಾನದ ಸಂಪನ್ಮೂಲಗಳು ಮುಕ್ತವಾಗಿ ದೊರಕುವ ಮೂಲಕ ಕಲಿಕೆ ಅನ್ನುವುದು ವಿದ್ಯಾರ್ಥಿಗಳಿಗೆ ಅಂಗೈಯಲ್ಲಿ ಶಿಕ್ಷಣ ದೊರಕುವಂತಾಗಿದೆ ಎಂದು ಹುಲ್ಲಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಜಯಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಎನ್‌.ಲಿಸ್ಟ್ ಅಂಡ್ ಒಪನ್ ಎಜುಕೇಷನಲ್ ರಿಸೋಸರಸ್‌ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕಾಲೇಜಿನ ಗ್ರಂಥಾಲಯದಲ್ಲಿ ಎನ್-ಲಿಸ್ಟ್ ಬಳಕೆಯಿಂದ ಒಂದು ಲಕ್ಷಕ್ಕೂ ಅಧಿಕ ಇ-ಬುಕ್ಸ್, 5 ಸಾವಿರಕ್ಕೂ ಹೆಚ್ಚು ಇ-ಜರ್ನಲ್ಸ್ ಲಭ್ಯವಿದ್ದು, ಇದನ್ನು ವಿದ್ಯಾರ್ಥಿನಿಯರು ಮುಕ್ತವಾಗಿ ಬಳಸಲು ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯ. ಜ್ಞಾನ ಪಡೆಯಲು ಮುಕ್ತವಾಗಿ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕಷ್ಟೆ. ಆಧುನಿಕ ತಂತ್ರಜ್ಞಾನದ ಡಿಜಿಟಲ್ ಗ್ರಂಥಾಲಯ, ಇ- ಜ್ಞಾನಕೋಶ, ಪಿಜಿ ಪಾಠಶಾಲ ಮುಂತಾದ ಹಲವು ಡೇಟಾಬೇಸ್ ಆಧಾರಿತ ಶಿಕ್ಷಣ ಮುಕ್ತವಾಗಿ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಪ್ರಾಂಶುಪಾಲ ಪ್ರೊ.ಟಿ.ಕೆ. ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದ ಸಂಚಾಲಕ ಮತ್ತು ಗ್ರಂಥಪಾಲಕ ಡಾ.ಎನ್. ಕರುಣಾಕರ್ ಆಶಯ ನುಡಿಗಳನ್ನಾಡಿದರು. ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಪ್ರತಿಭಾ ಜೆನ್ನಿಫರ್ ಅಂದ್ರಾದೆ, ಡಾ.ಎಚ್.ಆರ್. ವಿಶ್ವನಾಥ್, ಹನುಮಂತಪ್ಪ ಡಾ.ಬಿ. ನಂಜುಡಸ್ವಾಮಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Follow Us:
Download App:
  • android
  • ios