ಚಿಕ್ಕಬಳ್ಳಾಪುರ : ಅನುದಾನ ಇದ್ದರೂ ಜಿಲ್ಲೆಗಿಲ್ಲ ಗಾಂಧಿ ಭವನ
- ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಹೆಸರಲ್ಲಿ ಭವನ ನಿರ್ಮಾಣಕ್ಕೆ ನಿರ್ಲಕ್ಷ್ಯ
- ಅನುದಾನ ಬಂದರೂ ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ
ವರದಿ : ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಸೆ.02): ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಹೆಸರಲ್ಲಿ ಭವನ ನಿರ್ಮಾಣಕ್ಕೆ ಅನುದಾನ ಬಂದರೂ ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕಟ್ಟಡಕ್ಕೆ ಶಂಕುಸ್ಥಾಪನೆಯಾಗಿ 2 ವರ್ಷ ಕಳೆದರೂ ಜಿಲ್ಲೆಯ ಪಾಲಿಗೆ ಮಹಾತ್ಮನ ಭವನ ನಿರ್ಮಾಣದ ಕನಸು ಮಾತ್ರ ಬರೀ ಕನಸಾಗಿಯೆ ಉಳಿದಿದೆ.
ರಾಜ್ಯದ ಪ್ರತಿ ಜಿಲ್ಲೆಗೊಂದರಂತೆ ಗಾಂಧಿ ಭವನ ನಿರ್ಮಾಣ ಆಗಬೇಕೆಂದು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಧಾರವಾಗಿ ಜಿಲ್ಲೆಗೆ ಅನುದಾನ ಕೂಡ ಮಂಜೂರಾಯಿತು. ಆದರೆ ಗಾಂಧಿ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಸಿಗದ ಕಾರಣಕ್ಕೆ ಕಾಮಗಾರಿ ಆರಂಭಗೊಳ್ಳದೇ ಭವನ ನಿರ್ಮಾಣ ನೆನಗುದಿಗೆ ಬಿದ್ದಿತ್ತು.
2 ವರ್ಷದಿಂದ ಕಾಮಗಾರಿಗೆ ಗ್ರಹಣ
ಆದರೆ ನಗರದ ಕೆಎಸ್‌ಆರ್‌ಟಿಎಸ್ ಬಸ್ ನಿಲ್ದಾಣದ ಸಮೀಪ ಇರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಪಕ್ಕದಲ್ಲಿರುವ ಜಾಗದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಒದಗಿಸುವಲ್ಲಿ ಆಗಿನ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಯಶಸ್ವಿಯಾಗಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಕಾಮಗಾರಿಗೆ ಶಂಕು ಸ್ಥಾಪನೆಗೆ ಚಾಲನೆ ನೀಡಿ 2 ವರ್ಷ ಕಳೆಯುತ್ತಾ ಬಂದಿದೆ.
ಪಿತೃಪಕ್ಷ ಮಾಸಕ್ಕೆ ಮುದುಡಿದ ವ್ಯಾಪಾರ : ತಿಪ್ಪೆ ಸೇರಿದ ರಾಶಿ ರಾಶಿ ಹೂ
ಜಿಲ್ಲೆಯಾಗಿ 15 ನೇ ವರ್ಷಕ್ಕೂ ಕಾಲಿಟ್ಟಿದೆ. ಆದರೆ ರಾಜ್ಯದ ಇತರೇ ಜಿಲ್ಲೆಗಳಲ್ಲಿ ಇರುವ ಜಿಲ್ಲೆಯಲ್ಲಿ ಗಾಂಧಿ ಭವನ ಇಲ್ಲದೇ ಇರುವುದು ಗಾಂಧಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮೊದಲು ನಿರ್ಮಿತಿ ಕೇಂದ್ರಕ್ಕೂ ಕಾಮಗಾರಿ ವಹಿಸಲಾಗಿತ್ತು. ನಿರ್ಮಾಣದ ಸ್ಥಳದಲ್ಲಿ ಅಡಿಪಾಯ ಸಹ ತೆರೆಯಲಾಗಿದೆ. ಆದರೆ ಏಕೋ ಏನು ಕಾಮಗಾರಿ ಮಾತ್ರ ಸ್ಥಗಿತಗೊಂಡಿದೆ.
ನಿವೇಶದಲ್ಲಿ ಕಸದ ರಾಶಿ:
ಇನ್ನೂ ಗಾಂಧಿ ಭವನ ನಿರ್ಮಾಣಕ್ಕೆಂದು ಗುರುತಿಸಿರುವ ನಿವೇಶನದ ಈಗಿನ ದುಸ್ಥಿತಿಗೆ ಅಂತೂ ಸಾರ್ವಜನಿಕರ ಟೀಕೆ, ಆಕ್ರೋಶಕ್ಕೆ ಗುರಿಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಕಾಂಪೌಂಡ್ ಒಡೆದು ಹಾಗೆ ಬಿಟ್ಟಿರುವುದರಿಂದ ನಿವೇಶನದಲ್ಲಿ ಕಸ, ಕಡ್ಡಿಯ ರಾಶಿ ರಾಶಿ ಬಿದ್ದಿದೆ. ಹೋಟೆಲ್‌ಗಳು, ಆಸ್ಪತ್ರೆಗಳು ಘನ ತ್ಯಾಜ್ಯ ಸುರಿಯಲು ಬಳಸಿಕೊಂಡಿವೆ. ಇನ್ನೂ ನಿಲ್ದಾಣಕ್ಕೆ ಹತ್ತಿರ ಇರುವುದರಿಂದ ಪ್ರಯಾಣಿಕರು, ಸಾರ್ವಜನಿಕರು ಅಲ್ಲಿ ಎಗ್ಗಿಲ್ಲದೇ ಮಲ, ಮೂತ್ರ ವಿಸರ್ಜನೆಗೆ ಬಳಸಿಕೊಂಡು ಇಡೀ ಪ್ರದೇಶ ಅನೈರ್ಮಲ್ಯಕ್ಕೆ ಇಡೀಗಾಗಿದ್ದು ಜಿಲ್ಲಾದ್ಯಂತ ಸ್ವಚ್ಛತೆ, ನೈರ್ಮಲ್ಯದ ಪಾಠ ಮಾಡುವ ಅಧಿಕಾರಿಗಳು ಕನಿಷ್ಠ ಗಾಂಧಿ ಭವನ ನಿರ್ಮಾಣದ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಸ್ಥಳೀಯ ನಗರಸಭೆ ಯಾದಿಯಾಗಿ ಸಂಬಂಧಪಟ್ಟವರು ವಿಫಲವಾಗಿರುವುದು ಟೀಕೆಗೆ ಗುರಿಯಾಗಿದೆ.
ವಿಸಿ ಇಲ್ಲದೇ ಅನಾಥವಾದ ಬೆಂ. ಉತ್ತರ ವಿವಿ : ಅರ್ಜಿ ಆಹ್ವಾನಿಸಿ ಸುಮ್ಮನಾದ ಸರ್ಕಾರ
3ಕೋಟಿ ರು. ಅನುದಾನ
ಸಾಮಾನ್ಯವಾಗಿ ಯಾವುದೇ ಸರ್ಕಾರಿ ಕಚೇರಿ, ಕಟ್ಟಡಗಳ ನಿರ್ಮಾಣಕ್ಕೆ ಆರಂಭದಲ್ಲಿ ಅನುದಾನದ ಕೊರತೆ ಇರುವುದು ಸಹಜ. ಅನುದಾನ ಕೊರತೆಯಿಂದ ಅರ್ಧಕ್ಕೆ ಕಾಮಗಾರಿಯು ನಿಲ್ಲಿಸಲಾಗುತ್ತದೆ. ಆದರೆ ಗಾಂಧಿ ಭವನ ನಿರ್ಮಾಣಕ್ಕೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಜಿಲ್ಲಾಡಳಿತಕ್ಕೆ 3 ಕೋಟಿ ಅನುದಾನ ಕಟ್ಟಡ ಕಾಮಗಾರಿ ಶಂಕು ಸ್ಥಾಪನೆಗೂ ಮೊದಲೇ ಬಿಡುಗಡೆ ಆಗಿದೆ. ಆದರೆ ಕಾಮಗಾರಿ ಮಾತ್ರ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರೂ ಆರಂಭಗೊಳ್ಳದಿರುವುದು ಜಿಲ್ಲೆಯ ಆಡಳಿತಶಾಹಿತ ಅಸಡ್ಡೆ ಮನೋಭಾವ, ಬದ್ಧತೆ, ಇಚ್ಚಾಶಕ್ತಿ ಇಲ್ಲದೇ ಇರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.