ಕಲಬುರಗಿ (ಅ.20): ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹೋರಾಟಗಾರ ಮಾರುತಿ ಮಾನ್ಪಡೆ (65) ಮಹಾಮಾರಿಗೆ ಬಲಿಯಾಗಿದ್ದಾರೆ

ಕಮ್ಯುನಿಸ್ಟ್ ಪಾರ್ಟಿ ಮುಖಂಡರು ಆಗಿದ್ದ ಮಾನ್ಪಡೆ ಕಳೆದ ಎರಡು ವಾರದ ಹಿಂದೆ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆ ಫಲಿಸದೆ ಇಂದು ಅವರು ನಿಧನರಾಗಿದ್ದಾರೆ. 

ಕೊರೋನಾ ಪಾಸಿಟಿವ್ ಹಿನ್ನೆಲೆ ಅಕ್ಟೋಬರ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಹಾಮಾರಿ ಕೊರೋನಾದಿಂದ  ನಿಧನರಾಗಿದ್ದು ಪತ್ನಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ

ಫೆಬ್ರವರಿಗೆ ಲಸಿಕೆ ನಿರೀಕ್ಷೆ: ಹಂಚಿಕೆಗೆ ರಾಜ್ಯ ಸಿದ್ಧತೆ! ...

ಇಂದು ಬೆಳಗ್ಗೆ 9.30ಕ್ಕೆ ಮಾರು ಅವರು ನಿಧನರಾಗಿದ್ದು, ಹಲವು ನಾಯಕರು ಕಂಬನಿ ಮಿಡಿದಿದ್ದಾರೆ. 

ಮಾರುತಿ ಅವರ ಅಂತ್ಯಕ್ರಿಯೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಲೆಂಗಟಿ ಗ್ರಾಮದಲ್ಲಿ ನಡೆಯಲಿದೆ.