ಮಹಿಳೆಯರಿಗಾಗಿ ವಿಶೇಷ ಮೊಬೈಲ್‌ ಬಸ್‌ ನಿರ್ಮಾಣ: ಸಚಿವ ಸವದಿ

ಶೌಚಾಲಯ, ಸ್ನಾನ ಗೃಹ,ಶಿಶು ಆರೈಕೆ ಕೊಠಡಿ, ಡ್ರೆಸಿಂಗ್‌ ರೂಮ್‌, ವಾಶ್‌ ರೂಮ್‌ ವ್ಯವಸ್ಥೆ| ಕೊರೋನಾ ಸಮಯದಲ್ಲಿ ಸಾರಿಗೆ ಇಲಾಖೆ ನಷ್ಟದಲ್ಲಿದ್ದರೂ ಸಿಎಂ ಯಡಿಯೂರಪ್ಪನವರ ಜೊತೆಗೆ ಚರ್ಚಿಸಿ 650 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿ ಸಿಬ್ಬಂದಿ ವೇತನ: ಸಾರಿಗೆ ಸಚಿವ ಲಕ್ಷ್ಮಣ ಸವದಿ|  

Laxman Savadi Says Special Mobile Bus Bus for Women grg

ಚಿಕ್ಕೋಡಿ(ಜ.30): ಸುಮಾರು 2000ಕ್ಕೂ ಅಧಿಕ ಹೆಚ್ಚು ಹಳೆ ಬಸುಗಳಿವೆ. ಇವುಗಳ ಉಪಯೋಗ ಮಹಿಳೆಯರಿಗಾಗಿ ವಿಶೇಷ ಮೊಬೈಲ್‌ ಬಸ್‌ ನಿರ್ಮಿಸಲು ಮಾಡಲಾಗುತ್ತಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. 

ನಿಪ್ಪಾಣಿ ತಾಲೂಕಿನ ಗಡಿಯಂಚಿನಲ್ಲಿರುವ ಬೋರಗಾಂವ ಪಟ್ಟಣದಲ್ಲಿ ನಿರ್ಮಾಣವಾದ ಹೈಟಿಕ್‌ ಬಸ್‌ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿ, ಈ ಮೊಬೈಲ್‌ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯ, ಸ್ನಾನಗೃಹ, ಶಿಶು ಆರೈಕೆ ಕೊಠಡಿ, ಡ್ರೆಸ್ಸಿಂಗ್‌ ರೂಮ್‌, ವಾಶ್‌ರೂಮ್‌ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಹೆಚ್ಚಾಗಿ ಸಾರಿಗೆ ಬಸ್‌ಗಳಲ್ಲಿ ಸಂಚರಿಸಿ, ಇಲಾಖೆಗೆ ಸಹಕರಿಸಬೆಕೆಂದು ಮನವಿ ಮಾಡಿದರು.

ಕೊರೋನಾ ಸಮಯದಲ್ಲಿ ಸಾರಿಗೆ ಇಲಾಖೆ ನಷ್ಟದಲ್ಲಿದ್ದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಜೊತೆಗೆ ಚರ್ಚಿಸಿ 650 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿ ಸಿಬ್ಬಂದಿ ವೇತನ ನೀಡಲಾಗಿದೆ ಎಂದ ಅವರು, ನಿಪ್ಪಾಣಿ ತಾಲೂಕಿನಲ್ಲಿ 03 ಕಡೆ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲು ಅನುದಾನ ಬೇಡಿಕೆಯಿದ್ದು ಮಾಚ್‌ರ್‍ ನಂತರದ ಬಜೆಟ್‌ನಲ್ಲಿ ಅನುಮೋದನೆ ಪಡೆದು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಬೆಳಗಾವಿ ಬೈಎಲೆಕ್ಷನ್‌: ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಂದ ದೆಹಲಿಯಲ್ಲಿ ಪರೇಡ್

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ಅನುದಾನ ಮಂಜೂರು ಮಾಡಿಸಲಾಗಿದೆ. ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿ ನಿಪ್ಪಾಣಿಯಲ್ಲಿ 09 ಕೋಟಿ ಹಾಗೂ ಬೋರಗಾಂವನಲ್ಲಿ 2.50 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ತಾಲೂಕಿನ ಅಕ್ಕೋಳ, ಬೇಡಕಿಹಾಳ ಹಾಗೂ ಗಳತಗಾ ಗ್ರಾಮದಲ್ಲಿ ಹೊಸದಾಗಿ ಬಸ್‌ ನಿಲ್ದಾಣ ನಿರ್ಮಿಸಲು ಸಚಿವರಿಗೆ ಮನವಿ ನೀಡಲಾಗಿದೆ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ತಾಪಂ ಅಧ್ಯಕ್ಷೆ ಅನುರಾಧಾ ಚೌಗುಲೆ, ಉಪಾಧ್ಯಕ್ಷೆ ಅನಿತಾ ದೇಸಾಯಿ, ಜ್ಯೋತಿಪ್ರಸಾದ ಜೊಲ್ಲೆ, ಲೋಕೋಪಯೋಗಿ ಇಲಾಖೆ ಅಭಿಯಂತ ಬಿ.ಬಿ.ಬೇಡಕಿಹಾಳೆ, ಹಾಲಶುಗರ ನಿರ್ದೇಶಕ ರಾಮಗೋಂಡಾ ಪಾಟೀಲ,ಹುಬ್ಬಳಿ ವಾ..ಕ.ರ.ಸಾ.ಸಂಸ್ಥೆ ಅಧ್ಯಕ್ಷ ವ್ಹಿ.ಎಸ.ಪಾಟೀಲ,ನಿರ್ದೇಶಕ ಸದಾಶಿವ ತೇಲಿ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ತಾಲೂಕು ನಿಯಂತ್ರಣಾಧಿಕಾರಿ ವ್ಹಿ.ಎಂ.ಶಶಿಧರ, ಅಭಿಯಂತರ ಟಿ.ಕೆ.ನಾಯಕ, ಸುನೀಲ ಪಾಟೀಲ, ಜಯಕುಮಾರ ಖೋತ, ದಾದಾ ಭಾದುಲೆ, ನಿಪ್ಪಾಣಿ ನಗರಾಧ್ಯಕ್ಷ ಜಯವಂತ ಭಾಟಲೆ, ನೀತಾ ಬಾಗಡಿ, ಪಪಂ ಸದಸ್ಯ ಬಿಸಮಿಲ್ಲಾ ಅಫರಾಜ, ಮಿನಾ ಭಾದುಲೆ, ರಾಣಿ ಬೇವಿನಕಟ್ಟಿ, ಬಾಬಾಸಾಹೇಬ ಚೌಗುಲೆ, ವಿಷ್ಣು ತೋಡಕರ, ಮಹಿಪತಿ ಖೋತ, ಅಜೀತ ತೇರದಾಳೆ,ಶಿವಾಜಿ ಭೋರೆ,ಪಂಡಿತ ಹಿರೇಮಣಿ,ಜಮಿಲ ಅತ್ತಾರ,ಶಾಂತಿನಥ ಪತ್ರಾವಳೆ,ಶಿಶು ಐದಮಾಳೆ,ಶ್ರೀಕಾಂತ ಲೋಂಡೆ ಸೇರಿದಂತೆ ನಾಗರಿಕರು,ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios