Asianet Suvarna News Asianet Suvarna News

ತುಮಕೂರು: 18 ಅಕ್ರಮ ಕಟ್ಟಡ, ಕಲಾಪ ಬಹಿಷ್ಕಾರ

ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುವುದನ್ನು ವಿರೋಧಿಸಿ ವಕೀಲರು ಕಲಾಪ ಬಹಿಷ್ಕರಿಸಿದರು. ಕುಣಿಗಲ್ ನ್ಯಾಯಾಲಯದ ಪಶ್ಚಿಮ ಗೋಡೆಯ ಪಕ್ಕದಲ್ಲಿ ಅತಿಕ್ರಮವಾಗಿ 18 ಕಟ್ಟಡ ಕಟ್ಟಿದ್ದಾರೆ ಎಂದು ಆರೋಪಿಸಿದ ವಕೀಲರು ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. 

lawyers quit court room opposing illegal construction of buildings in Tumakuru
Author
Bangalore, First Published Aug 20, 2019, 1:58 PM IST

ತುಮಕೂರು(ಆ.20): ಕುಣಿಗಲ್ ನ್ಯಾಯಾಲಯದ ಪಶ್ಚಿಮ ಗೋಡೆಯ ಪಕ್ಕದಲ್ಲಿ ಅತಿಕ್ರಮವಾಗಿ 18 ಕಟ್ಟಡ ಕಟ್ಟಿದ್ದಾರೆ ಎಂದು ಆರೋಪಿಸಿದ ವಕೀಲರು ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಸೋಮವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕಾರ ಮಾಡಿ ಪ್ರತಿಭಟನೆಗೆ ವಕೀಲರು ಮುಂದಾಗುತ್ತಿದ್ದಂತೆ ಹಲವಾರು ಕಕ್ಷಿದಾರರಿಗೆ ಸಮಸ್ಯೆ ಉಂಟಾಯಿತು. ಆದರೆ ಪಟ್ಟು ಸಡಿಲಿಸದ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಕಲಾಪ ಬಹಿಷ್ಕರಿಸಿದ ವಕೀಲರು:

ಭಾನುವಾರ ಪಟ್ಟಣದ ದೊಡ್ಡ ಪೇಟೆಯಲ್ಲಿರುವ ಅಂಗಡಿಯೊಂದರ ಮೇಲ್ಭಾಗದಲ್ಲಿ ಮೊದಲನೇ ಮಹಡಿ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿಯನ್ನು ತಡೆಯಲು ಅಲ್ಲಿಗೆ ಕೆಲ ವಕೀಲರ ಸಂಘದ ಪದಾಧಿಕಾರಿಗಳು ಹೋದಾಗ ವಕೀಲರಿಗೆ ಮತ್ತು ಅಂಗಡಿ ಮಾಲೀಕನಿಗೆ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಕೀಲರು ಸೋಮವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ರಮೇಶ್‌ ಕುಣಿಗಲ್‌, ಪಿಎಸ್‌ಐ ವಿಕಾಸ್‌ ಗೌಡ ಭೇಟಿ ನೀಡಿ ನ್ಯಾಯಾಧೀಶರ ಸಮ್ಮುಖದಲ್ಲಿ ವಕೀಲರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ಒಪ್ಪದ ವಕೀಲರ ಸಂಘದ ಪದಾಧಿಕಾರಿಗಳು ಸಂಬಂಧಪಟ್ಟವರ ವಿರುದ್ದ ಕ್ರಮ ಜರುಗಿಸಿ ನ್ಯಾಯಾಲಯದ ಗೋಡೆಯ ಪಕ್ಕದಲ್ಲಿ ಅನಧಿಕೃತವಾಗಿ ಅಂಗಡಿ ನಿರ್ಮಿಸಿಕೊಂಡಿರುವ ಎಲ್ಲ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರಮೇಶ್‌ ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆಯಂತೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಸರ್ಕಾರಿ ಆಸ್ತಿ ರಕ್ಷಿಸುವುದು ಎಲ್ಲರ ಕರ್ತವ್ಯ:

ವಕೀಲರ ಸಂಘದ ಕಾರ್ಯದರ್ಶಿ ಸಿಂಗಯ್ಯ ನ್ಯಾಯಾಲಯಕ್ಕೆ ಸೇರಿದ ಜಮೀನಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿಕೊಂಡು ವಕೀಲರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸರ್ಕಾರದ ಆಸ್ತಿಯನ್ನು ರಕ್ಷಿಸುವ ಕರ್ತವ್ಯ ಪ್ರತಿಯೊಬ್ಬ ಅಧಿಕಾರಿಗಳ ಮೇಲಿದೆ ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದರು.

ತುಮಕೂರು: 'ಸಿಎಂ ಯಡಿಯೂರಪ್ಪ ಅಭಿವೃದ್ಧಿ ವಿರೋಧಿ'

ವಕೀಲರ ಸಂಘದ ಅಧ್ಯಕ್ಷ ಎಂ. ಹುಚ್ಚೇಗೌಡ, ಖಜಾಂಚಿ ರಮೇಶ್‌, ಮಾಜಿ ಅಧ್ಯಕ್ಷ ಚಂದ್ರೇಗೌಡ ಮತ್ತು ದಯಾನಂದ್‌, ಪ್ರಸಾದ್‌, ಹರ್ಷ, ಸಿಂಗ್ರಿಗೌಡ ಲೋಕೇಶ್‌, ಲಿಂಗರಾಜ್‌, ತಿಮ್ಮಪ್ಪ, ಬಿ.ಆರ್‌. ರಂಗಸ್ವಾಮಿ, ಎ.ಆರ್‌. ರಂಗಸ್ವಾಮಿ, ಚಂದ್ರಶೇಖರ್‌, ರಾಜೇಶ್‌, ವಿಜಯ್‌ ಕುಮಾರ್‌ ಇದ್ದರು.

Follow Us:
Download App:
  • android
  • ios