ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಎಚ್.ಕೆ. ಪಾಟೀಲ್
* ಸಿಎಂ ಬಸವರಾಜ ಬೊಮ್ಮಾಯಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು
* ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು
* ಕ್ರಿಮಿನಲ್‌ಗಳಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಗೃಹ ಸಚಿವರು
ಹೊಸಪೇಟೆ(ಆ.28): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರು ಯುವತಿ ಆ ಸಮಯದಲ್ಲಿ ಬರಬಾರದಿತ್ತು ಎಂದಿದ್ದು, ಇಂಥ ಹೇಳಿಕೆ ಕೊಡುವ ಮೂಲಕ ಕ್ರಿಮಿನಲ್‌ಗಳಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಖಾರವಾಗಿ ಪ್ರಶ್ನಿಸಿದ್ದಾರೆ.
ನಗರದ ಹೊರವಲಯದ ರೇಸಾರ್ಟ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಧ್ಯರಾತ್ರಿ ಮಹಿಳೆ ಒಬ್ಬಂಟಿಯಾಗಿ ನಡೆದಾಡಿದರೆ, ನಿಜವಾದ ಸ್ವಾತಂತ್ರ್ಯ ಅಂತ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಆದರೆ, ನೀವು ಹೊರಗಡೆ ಬರಬಾರದು ಅಂತೀರಾ, ಇದು ಎಷ್ಟು ಸರಿ? ಎಂದು ಗೃಹ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.
ಮೇಕೆದಾಟು ಸರ್ಕಾರದ ನಿಲುವು, ಬಿಜೆಪಿ ನಿಲುವು ಬೇರೆಯೇ ಆಗಿದೆ: ಎಚ್.ಕೆ.ಪಾಟೀಲ
ಪ್ರಕರಣದ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.