ಬೆಳಗಾವಿ(ಮಾ.12): ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಚ.ಅಂಗಡಿ(92) ಅವರು ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ (ನಾಗರಹಾಳ) ಗ್ರಾಮದ ಸ್ವಗೃಹದಲ್ಲಿ ನಿಧನರಾದರು.

ಐವರು ಪುತ್ರರು, ಓರ್ವ ಪುತ್ರಿಯನ್ನು ಹೊಂದಿದ್ದ ಸೋಮವ್ವ ಅವರು ಸುರೇಶ ಅಂಗಡಿ ಮೇಲೆ ಅತ್ಯಂತ ಪ್ರೀತಿ ಹೊಂದಿದ್ದರು. ಗುರುವಾರ ಸಂಜೆ ಕೆ.ಕೆ.ಕೊಪ್ಪದಲ್ಲಿ ಅಂತ್ಯಕ್ರಿಯೆ ನೆರವೇರಿತು. ಸಚಿವರಾಗಿದ್ದ ಅಂಗಡಿ ಅವರ ಅಕಾಲಿಕ ನಿಧನದಿಂದ ಸೋಮವ್ವ ಅವರು ಮಾನಸಿಕವಾಗಿ ತೀರಾ ನೊಂದಿದ್ದರು. 

ರಾಜ್ಯ ರಾಜಕಾರಣಿಗಳನ್ನು ದಿಗ್ಬ್ರಮೆಗೊಳಿಸಿದ ಸುರೇಶ್‌ ಅಂಗಡಿ ಹಠಾತ್‌ ನಿಧನ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸುರೇಶ ಅಂಗಡಿ ನಿಧನರಾದ ಆರೇ ತಿಂಗಳಲ್ಲೇ ವಿಧಿವಶರಾಗಿದ್ದಾರೆ.