Asianet Suvarna News Asianet Suvarna News

Haveri: ಸರ್ಕಾರಿ ಶಾಲೆ ಕಟ್ಟಿಸೋಕೆ ಲಕ್ಷಾಂತರ ರೂ ಮೌಲ್ಯದ ಜಮೀನನ್ನೇ ದಾನ ಮಾಡಿದ್ದ ದಿವಂಗತ ಸಿಪಿಐ ರವಿ ಉಕ್ಕುಂದ

ಕೆಲ ದಿನಗಳ ಹಿಂದಷ್ಟೇ ಅಪಘಾತದಲ್ಲಿ ಮೃತ ಪಟ್ಟಿದ್ದ ಸಿಪಿ ಐ ರವಿ ಉಕ್ಕುಂದ ಪರೋಪಕಾರಿಯಾಗಿದ್ರು. ನೋಡೊಕೆ ಸ್ಟ್ರೀಕ್ಟ್ ಪೋಲಿಸ್ ಆಫೀಸರ್ ಆದರೂ ಮಾಡಿರುವ ಕೆಲಸಗಳು ಮಾತ್ರ ದೇವರು ಮೆಚ್ಚುವಂತದ್ದೇ ಆಗಿತ್ತು. ತಾವು ಹುಟ್ಟಿ ಬೆಳೆದ ಊರಿನಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡೋಕೆ ಅಂತಾನೇ 30 ಲಕ್ಷ ಬೆಲೆಬಾಳುವ 1 ಎಕರೆ ಜಮೀನು ದಾನ ಮಾಡಿದ್ರು.

Late CPI Ravi Ukkunda  donated land to build a government school in Haveri gow
Author
First Published Dec 11, 2022, 5:29 PM IST

ಹಾವೇರಿ (ಡಿ.11): ಕೆಲ ದಿನಗಳ ಹಿಂದಷ್ಟೇ ಅಪಘಾತದಲ್ಲಿ ಮೃತ ಪಟ್ಟಿದ್ದ ಸಿಪಿ ಐ ರವಿ ಉಕ್ಕುಂದ ಪರೋಪಕಾರಿಯಾಗಿದ್ರು. ನಟ ಅಪ್ಪುವಿನಂತೆಯೇ ಸಮಾಜ ಸೇವೆಗೂ ಜೀವನ ಮುಡಿಪಾಗಿಟ್ಟಿದ್ರು. ನೋಡೊಕೆ ಸ್ಟ್ರೀಕ್ಟ್ ಪೋಲಿಸ್ ಆಫೀಸರ್ ಆದರೂ ಮಾಡಿರುವ ಕೆಲಸಗಳು ಮಾತ್ರ ದೇವರು ಮೆಚ್ಚುವಂತದ್ದೇ ಆಗಿತ್ತು. ತಾವು ಹುಟ್ಟಿ ಬೆಳೆದ ಊರಿನಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡೋಕೆ ಅಂತಾನೇ 30 ಲಕ್ಷ ಬೆಲೆಬಾಳುವ 1 ಎಕರೆ ಜಮೀನು ದಾನ ಮಾಡಿದ್ರು. ಹುಟ್ಟೂರು ಹಿರೆಕೇರೂರು ತಾಲೂಕಿನ ಅರಳೀಕಟ್ಟಿ ಗ್ರಾಮದಲ್ಲಿ ಸಮಾಜಸೇವೆ ಮಾಡೋ ಮೂಲಕವೂ ಸೈ ಎನಿಸಿಕೊಂಡಿದ್ರು.ಅದೇ ಊರಿನಲ್ಲಿ ಅಂಗನವಾಡಿಗೆ ಅಂತ 4 ಗುಂಟೆ, ಪಶು ಆಸ್ಪತ್ರೆಗೆ ಅಂತಾ 2 ಗುಂಟೆ ಜಾಗ ಉಚಿತವಾಗಿ ದಾನ ಮಾಡಿದ್ರು.

ಅಲ್ಲದೆ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ಗೋಪುರ ನಿರ್ಮಾಣ ಮಾಡಿಸಿದ್ರು. ರವಿ ಉಕ್ಕುಂದ ನಿಧನವಾದ ಬಳಿಕ ಹಿರೆಕೇರೂರು ತಾಲೂಕಿನ ಜನ ಇವರ ಸಾಧನೆ ಕೊಂಡಾಡ್ತಿದ್ದಾರೆ. ಕೊಪ್ಪಳ,ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವು ಕಡೆ ಜನ ಸೋಷಿಯಲ್‌ ಮೀಡಿಯಾದಲ್ಲಿ  ರವಿ ಉಕ್ಕುಂದ ಸಮಾಜ ಸೇವೆ ನೆನೆದು ಕಂಬನಿ ಮಿಡಿಯುತ್ತಿದ್ದಾರೆ. ಕಳೆದ ಡಿಸೆಂಬರ್ 7 ರಂದು ಜೇವರ್ಗಿ ತಾಲೂಕಿನ ಸೊನ್ನ ಬಳಿ ರಸ್ತೆ ಅಪಘಾತದಲ್ಲಿ ಸಿಪಿಐ ರವಿ ಹಾಗೂ ಪತ್ನಿ ಮಧು ಸಾವನ್ನಪ್ಪಿದ್ದರು. ನೆಲೋಗಿ ಕ್ರಾಸ್‌ ಬಳಿ ನಿಂತಿದ್ದ ಕಂಟೇನರ್‌ಗೆ ಮಾರುತಿ ಸ್ವಿಫ್ಟ್‌ ಡಿಸೈರ್‌ ಕಾರು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದ ಸ್ಥಳದಲ್ಲೇ ಸಿಪಿಐ ರವಿ ಉಕ್ಕುಂದ ಹಾಗೂ ಪತ್ನಿ ಮಧು ಸಾವಿಗೀಡಾಗಿದ್ದರು. ಸರ್ಕಲ್‌ ಇನ್ಸಪೆಕ್ಟರ್‌ ರವಿ ತಮ್ಮ ಪತ್ನಿ ಮದು ಸಮೇತ ಆಸ್ಪತ್ರೆಗೆಂದು ಕಲಬುರಗಿಗೆ ಹೊರಟಿದ್ದರು. ಸಿಂದಗಿಯಿಂದ ಕಲಬುರಗಿ ನಗರಕ್ಕೆ ಹೊರಟಿದ್ದಾಗ ಇವರ ಕಾರು ದಾರಿಯಲ್ಲಿ ಕಂಟೇನರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸಿಪಿಐ ರವಿ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಸ್ನೇಹಿತನ ಪೋಸ್ಟ್‌ಮಾರ್ಟಮ್‌ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ

ಜಯಕರ್ನಾಟಕ ಸಂಘಟನೆ ವತಿಯಿಂದ ಸಿಪಿಐ ರವಿಗೆ ಶ್ರದ್ಧಾಂಜಲಿ
ದೇವರಹಿಪ್ಪರಗಿ: ಪಟ್ಟಣದ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಸಿಂದಗಿ ಸಿಪಿಐ ರವಿ ಉಕ್ಕುಂದ ಅಕಾಲಿಕ ಮರಣ ಹೊಂದಿದ ಕಾರಣ ಮೌನಚರಣೆ ಮಾಡಿ ಶ್ರದ್ಧಾಂಜಲಿ ಕಾರ್ಯಕ್ರಮ ಶುಕ್ರವಾರದಂದು ನಡೆಯಿತು. ಜಯಕರ್ನಾಟಕ ಸಂಘಟನೆ ತಾಲೂಕು ಘಟಕದ ಅಧ್ಯಕ್ಷರಾದ ರಹಿಮಾನ್‌ ಕಣಕಲ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಂದಗಿ ವ್ಯಾಪ್ತಿಯಲ್ಲಿ ಬರುವ ಸಿಪಿಐ ರವಿ ಉಕ್ಕುಂದ ಅವರು ದಕ್ಷ ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ಆಗಿದ್ದರು. ಅವರ ಸೇವೆಯಿಂದ ಜನಸಾಮಾನ್ಯರಿಗೆ ಹತ್ತಿರವಾಗಿದ್ದರು. ಜೇವರ್ಗಿ ತಾಲೂಕಿನ ಸೋನ್‌್ನ ಕ್ರಾಸ್‌ ಹತ್ತಿರ ನಡೆದ ದುರ್ಘಟನೆಯಲ್ಲಿ ಅವರು ಅವರ ಧರ್ಮಪತ್ನಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಕಾರಣ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬ ಸದಸ್ಯರಿಗೂ ಹಾಗೂ ಅವರ ಮಕ್ಕಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಾಲೂಕು ಘಟಕದ ವತಿಯಿಂದ ಪ್ರಾರ್ಥಿಸಿದರು.

 

Haveri: ಹುಟ್ಟೂರು ಅರಳಿಕಟ್ಟಿಯಲ್ಲಿ ನಡೆದ ಸಿಪಿಐ ರವಿ ಉಕ್ಕುಂದ ಅಂತ್ಯಕ್ರಿಯೆ, ನೆರೆದಿದ್ದ ಜನರ ಕಂಬನಿ

ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಉಪಾಧ್ಯಕ್ಷರಾದ ಸಿದ್ದರಾಮಪ್ಪ ಅವಟಿ, ಪ್ರ ಕಾ ಪ್ರವೀಣ ಪವಾರ, ರೈತ ಘಟಕದ ಅಧ್ಯಕ್ಷರಾದ ಹಾಜಿಲಾಲ ಚಾಂದಕೋಟಿ, ಬಾಷಸಾಬ್‌ ಹಳ್ಳಿ, ಇಬ್ರಾಹಿಂ ಕರರ್ನಾಚಿ, ಮಲ್ಲಪ್ಪ ಅವಟಿ, ಶಾಂತಪ್ಪ ಹಳ್ಳಿ, ಶರಣಪ್ಪ ಡಾಲೇರ, ಅಬ್ಬಾಸಾಲಿ ಬಾಗವಾನ, ಆಸ್ಪಾಕ್‌ ಕೊಡಚಿ, ಅನಸ್‌ ಹಳ್ಳಿ ಸೇರಿದಂತೆ ತಾಲೂಕು ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios