Haveri: ಹುಟ್ಟೂರು ಅರಳಿಕಟ್ಟಿಯಲ್ಲಿ ನಡೆದ ಸಿಪಿಐ ರವಿ ಉಕ್ಕುಂದ ಅಂತ್ಯಕ್ರಿಯೆ, ನೆರೆದಿದ್ದ ಜನರ ಕಂಬನಿ
ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸಿಂದಗಿ ಪೊಲೀಸ್ ಠಾಣೆ ಸಿಪಿಐ ರವಿ ಉಕ್ಕುಂದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅರಳೀಕಟ್ಟಿ ಗ್ರಾಮದಲ್ಲಿ ನಡೆಯಿತು. ಸಿಪಿಐ ರವಿ ಸಾವಿಗೆ ಅರಳೀಕಟ್ಟಿ, ಕೊಪ್ಪಳ, ವಿಜಯಪುರ ಜಿಲ್ಲೆಯ ಜನರು ಕಂಬನಿ ಮಿಡಿದಿದ್ದಾರೆ.
ಹಾವೇರಿ( ಡಿ.8): ವಿಜಯಪುರ ಜಿಲ್ಲೆ ಸಿಂದಗಿ ಪೊಲೀಸ್ ಠಾಣೆ ಸಿಪಿಐ ರವಿ ಉಕ್ಕುಂದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅರಳೀಕಟ್ಟಿ ಗ್ರಾಮದಲ್ಲಿ ನಡೆಯಿತು. ನಿನ್ನೆ ಕಾರಿನಲ್ಲಿ ಸಿಂದಗಿಯಿಂದ ಪತ್ನಿಯೊಂದಿಗೆ ಕಲಬುರಗಿಗೆ ಹೊರಟಿದ್ದರು. ಈ ವೇಳೆ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಬುಧವಾರ ಸಂಭವಿಸಿರುವ ಭೀಕರ ರಸ್ತೆ ದುರಂತದಲ್ಲಿ ವಿಜಯಪುರ ಜಿಲ್ಲೆಯ ಸಿಪಿಐ ರವಿ ಉಕ್ಕುಂದ (43), ಅವರ ಪತ್ನಿ ಮಧು (40) ದಾರುಣ ಸಾವನ್ನಪ್ಪಿದ್ದರು. ನೆಲೋಗಿ ಕ್ರಾಸ್ ಬಳಿ ನಿಂತಿದ್ದ ಕಂಟೇನರ್‌ಗೆ ಮಾರುತಿ ಸ್ವಿಪ್ಟ್‌ಡಿಸೈರ್ ಕಾರು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದ ಸ್ಥಳದಲ್ಲೇ ಸಿಪಿಐ ರವಿ ಉಕ್ಕುಂದ ಹಾಗೂ ಪತ್ನಿ ಮಧು ಸಾವಿಗೀಡಾಗಿದ್ದರು. ಸುಮಾರು 6 ವರ್ಷಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸಿಪಿಐ ಆಗಿ ಕೆಲಸ ನಿರ್ವಹಿಸಿ ಪ್ರಸ್ತುತ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಯ ಸಿಪಿಐ ಆಗಿ ರವಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಿಪಿಐ ರವಿ ಸಾವಿಗೆ ಅರಳೀಕಟ್ಟಿ, ಕೊಪ್ಪಳ, ವಿಜಯಪುರ ಜಿಲ್ಲೆಯ ಜನರು ಕಂಬನಿ ಮಿಡಿದಿದ್ದಾರೆ. ಮೃತ ದಂಪತಿಯ ಅಂತ್ಯಕ್ರಿಯೆ ಅರಳೀಕಟ್ಟಿ ಗ್ರಾಮದಲ್ಲಿ ನಡೆಯಿತು. ಮೃತ ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ. ಇನ್ನೂ ಚಿಕ್ಕ ವಯಸ್ಸಿನಲ್ಲಿರುವ ಇಬ್ಬರು ಮಕ್ಕಳನ್ನು ಬಿಟ್ಟು ಸಿಪಿಐ ರವಿ ಮತ್ತು ಅವರ ಪತ್ನಿ ಮಧು ಬಾರದ ಲೋಕಕ್ಕೆ ತೆರಳಿದ್ದಕ್ಕೆ ನೆರೆದಿದ್ದ ಜನ ಕಂಬನಿ ಮಿಡಿದರು.
ವೃತ್ತಿಯ ಬದುಕಿನ ಆಚೆಗೂ ಎಲ್ಲ ವರ್ಗದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದರು. ಕೋವಿಡ್ ವೇಳೆ ಇಡೀ ದೇಶವೇ ಲಾಕ್‌ಡೌನ್ ಆಗಿದ್ದ ವೇಳೆ ಕೊಪ್ಪಳ ನಗರದ ಜನರಿಗೆ ಸಮಸ್ಯೆಯಾಗುವುದನ್ನು ಗಮನಿಸಿ ಅವರಿಗೆ ಕೆಲವೊಂದು ಸಂದರ್ಭದಲ್ಲಿ ನೆರವಾಗಿದ್ದರು. ಸಹಾಯಸ್ತವನ್ನೂ ಚಾಚಿದ್ದರು. ಅಂತಹ ಸಹೃದಯಿ ಮನಸ್ಸಿನ ವ್ಯಕ್ತಿತ್ವದ ಸಿಪಿಐ ರವಿ ಉಕ್ಕುಂದ ಅವರು ಜಿಲ್ಲೆಯಿಂದ ವಿಜಯಪುರಕ್ಕೆ ಕಳೆದ ವರ್ಷವಷ್ಟೇ ವರ್ಗಾವಣೆಯಾಗಿ ಸಿಂದಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸ್ನೇಹಿತನ ಪೋಸ್ಟ್‌ಮಾರ್ಟಮ್ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ ಬಿರಾದಾರ್
ಭೀಕರ ರಸ್ತೆ ದುರಂತದಲ್ಲಿ ದಾರುಣ ಸಾವನ್ನಪ್ಪಿರುವ ಸಿಂದಗಿ ಸಿಪಿಐ ರವಿ ಉಕ್ಕುಂದಿ ಇವರನ್ನು ನೆನೆದು ಜೇವರ್ಗಿ ಸಿಪಿಐ ಭೀಮಣ್ಣ ಬಿರಾದಾರ್ ಕಣ್ಣೀರು ಹಾಕಿದ್ದಾರೆ. ಸ್ನೇಹಿತನ ಶವ ಪರೀಕ್ಷೆಯನ್ನು ತಾನೇ ಮುಂದೆ ನಿಂತು ಮಾಡಿಸುವಂತಾಯ್ತಲ್ಲ ಎಂದು ವಿಧಿಯನ್ನು ಹಳಿಯುತ್ತಿದ್ದಾರೆ.
ಭೀಮಣ್ಣ ಜೇವರ್ಗಿ ಸಿಪಿಐ ಎಂದು ವರ್ಗವಾಗಿ ಬಂದು 4 ದಿನವಾಯ್ತಷ್ಟೆ, ತಮ್ಮ ಸ್ನೇಹಿತ ಸಿಪಿಐ ರವಿ ಉಕ್ಕುಂದಿ ದಂಪತಿ ಸಾವಿನ ಘೋರ ರಸ್ತೆ ದುರಂತದೊಂದಿಗೇ ಜೇವರ್ಗಿ ಕೆಲಸ ಶುರು ಮಾಡುವಂತಾಯ್ತಲ್ಲ ಎಂದು ಭೀಮಣ್ಣ ಬಿಕ್ಕುತ್ತಿದ್ದಾರೆ. 2 ದಿನದ ಹಿಂದಷ್ಟೆ ರವಿಗೆ ಫೋನ್ ಕರೆ ಮಾಡಿ ಮಾತನಾಡಿದ್ದೆ. ಇಷ್ಟು ಬೇಗ ಆತನ ಸಾವಿನ ಸುದ್ದಿ ಕೇಳಬೇಕಾಗಿ ಬರುತ್ತದೆ ಅಂದು ಕೊಂಡಿರಲಿಲ್ಲ ಎಂದು ಅವರು ವಿಧಿಯ ಅಟ್ಟಹಾಸವನ್ನು ಶಪಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಹಾವು ತಪ್ಪಿಸಲು ಹೋಗಿ ಟ್ರಕ್ ಚಾಲಕ ಎಡವಟ್ಟು, ಸರಣಿ ಅಪಘಾತ
ಕನ್ನಡಪ್ರಭ ಜೊತೆ ಮಾತನಾಡಿದ ಸಿಪಿಐ ಭೀಮಣ್ಣ ಬೆಳಗ್ಗೆ ಎದ್ದು ತಮ್ಮ ವಾಕಿಯಾಕಿಯಲ್ಲಿ ಬಂದ ರಸ್ತೆ ದುರಂತ, ಅದರಲ್ಲಿ ಮಿದಾತ ತಮ್ಮ ಸ್ನೇಹಿತ ಎಂಬುದನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ ಎಂದು ಕಂಬನಿ ಮಿಡಿದರು. ರವಿ ತುಂಬ ಮಾನವೀಯತೆ ಮೌಲ್ಯಗಳಿರುವ ವ್ಯಕ್ತಿ. 6 ಹಾಗೂ 9 ವರ್ಷದ ಹೆಣ್ಣು, ಗಂಡು ಮಕ್ಕಳಿದ್ದಾರೆ. ತುಂಬು ಸಂಸಾರ ಅವರದ್ದಾಗಿತ್ತು. ಸೇವಾ ಹಿರಿತನದಲ್ಲಿ ರವಿ ತಮಗಿಂತ ಜಯೂನಿಯರ್. ಆದಾಗ್ಯೂ ಸ್ನೇಹಕ್ಕೆ ತುಂಬ ಬೆಲೆ ಕೊಉತ್ತಿದ್ದ ಎಂದು ಭೀಮಣ್ಣ ಅಗಲಿದ ರವಿಯನನು ನೆನೆದು ಕಣ್ಣೀರಿಟ್ಟರು.
ಮಸ್ಕಿ: ಗುಡದೂರು ಬಳಿ ರಸ್ತೆ ಅಪಘಾತ, ಮೂವರ ದುರ್ಮರಣ
ಹಾವೇರಿ ಜಿಲ್ಲೆಯ ಹಿರೆಕೋರೂರ್ ತಾಲೂಕು ಅರಳಿಕಟ್ಟೆಯ ರವಿ ಉಕ್ಕುಂದಿ ಕೊಪ್ಪಳದಲ್ಲಿ 7 ವರ್ಷ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿ ಅಲ್ಲಿಂದ ಸಿಂದಗಿಗೆ ಬಂದವರು. ಅಲ್ಲಿಗೆ ಬಂದು ಒಂದೂವರೆ ವರ್ಷವಾಗಿತ್ತು. ಆಗ ಇಂಡಿಯಲ್ಲಿ ಭೀಮಣ್ಣ ಸಿಪಿಐ ಆಗಿದ್ದರು. ರವಿ ಹಾಗೂ ಪತ್ನಿ ಮಧು ತುಂಬ ದೈವಭಕ್ತೆ. ವಾರದ ಹಿಂದಷ್ಟೆಮಂತ್ರಾಲಯತ್ತೆ ಹೋಗಿ ರಾಯರ ರುಶನ ಪಡೆದು ಬಂದವರು. ಮದು ತಂದೆ ಹನುಮಂತಪ್ಪ ಓಲೆಕಾರ್ ಇವರು ಸಿಡಿಪಿಎ ಆಗಿ ನಿವೃತ್ತರಾಗಿದ್ದರು. ಇವರ ದುರಂತದ ಸಾವು ನಮಗೆಲ್ಲರಿಗೂ ಉಃಖ ತಂದಿದೆ ಎಂದು ಕೊಪ್ಪಳದ ಇವರ ಆಪ್ತರಾದ ರಮೇಶ ಕುಲಕರ್ಣಿ ದುಃಖಿಸಿದರು.