Asianet Suvarna News Asianet Suvarna News

ಬಿಪಿಎಲ್‌ ಸಮುದಾಯದವರಲ್ಲಿ ಹೆಚ್ಚುತ್ತಿದೆ ಮೂತ್ರಪಿಂಡದ ಸಮಸ್ಯೆ?

  • ಬಿಪಿಎಲ್ ಕುಟುಂಬಗಳಲ್ಲಿ ಹೆಚ್ಚಾಗಿರುವ ಕಿಡ್ನಿ ಸಮಸ್ಯೆ
  • ಕಳಪೆ ಸಾಮಾಜಿಕ ಮತ್ತು ಆರ್ಥಿಕ ಅಂಶಗಳಿಗೂ ವಿವಿಧ ರೀತಿಯ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೂ ಸಂಬಂಧ
  • ಕಳೆದ ಹತ್ತು ವರ್ಷಗಳಲ್ಲಿ (2010-2020) ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 28 ಸಾವಿರಕ್ಕಿಂತ ಹೆಚ್ಚಿನ ಮಂದಿ ವಿವಿಧ ಕಿಡ್ನಿ ಕಾಯಿಲೆಗಳಿಗೆ ಚಿಕಿತ್ಸೆ
Last 10 Year More Than 28 Thousand Kidney infection Cases Reported in BPL Families Karnataka snr
Author
Bengaluru, First Published Jun 3, 2021, 10:13 AM IST

ಮೈಸೂರು (ಜೂ.03):  ಕಳಪೆ ಸಾಮಾಜಿಕ ಮತ್ತು ಆರ್ಥಿಕ ಅಂಶಗಳಿಗೂ ವಿವಿಧ ರೀತಿಯ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೂ ಸಂಬಂಧವಿದೆಯೇ? ಹೌದು ಎನ್ನುತ್ತದೆ ಸಂಶೋಧನೆ.

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ ರಾಜ್ಯ ಸರ್ಕಾರದ ಸುವರ್ಣ ಆರೋಗ್ಯ ಟ್ರಸ್ಟ್‌ನಲ್ಲಿ ಸದ್ಯ ಲಭ್ಯವಿರುವ ದತ್ತಾಂಶಗಳನ್ನು ಸಹ ಪ್ರಾಧ್ಯಾಪಕ ಡಾ.ಡಿ.ಸಿ. ನಂಜುಂಡ ಮತ್ತು ಅವರ ತಂಡ ವಿಶ್ಲೇಣೆಗೆ ಒಳಪಡಿಸಿದಾಗ ಬಿಪಿಎಲ್‌ ಸಮುದಾಯಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮೂತ್ರಪಿಂಡದ ಕಲ್ಲುಗಳು ಅಥವಾ ಕಿಡ್ನಿಸ್ಟೋನ್‌ ಪ್ರಕರಣಗಳು ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಾಗಿರುವುದು ಕಂಡು ಬಂದಿದೆ.

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಆಹಾರಕ್ಕೆ ನೋ ಎನ್ನಿ .

ಮೈಸೂರು ವಿವಿಯ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಡಿ.ಸಿ. ನಂಜುಂಡ ತಮ್ಮ ಸಂಶೋಧನಾ ತಂಡದೊಂದಿಗೆ ಕರ್ನಾಟಕ ಕಿಡ್ನಿ ಆರೋಗ್ಯ ಪ್ರತಿಷ್ಠಾನದ ಡಾ. ಶ್ರೀವತ್ಸ ಇವರೊಂದಿಗಿನ ಜಂಟಿ ಅಧ್ಯಯನದಲ್ಲಿ ಬಿಪಿಎಲ್‌ ಸಮುದಾಯಗಳ ಜನರು ಪಡೆದುಕೊಂಡ ವಿವಿಧ ಚಿಕಿತ್ಸೆಯ ಕುರಿತು ಸುವರ್ಣ ಆರೋಗ್ಯ ಟ್ರಸ್ಟ್‌ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಕಳೆದ ಹತ್ತು ವರ್ಷಗಳಲ್ಲಿ (2010-2020) ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 28 ಸಾವಿರಕ್ಕಿಂತ ಹೆಚ್ಚಿನ ಮಂದಿ ವಿವಿಧ ಕಿಡ್ನಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ 20605 ಮಂದಿ ಮೂತ್ರಪಿಂಡ ಕಲ್ಲುಗಳಿಗೆ ಚಿಕಿತ್ಸೆ ಪಡೆದಿರುವುದು ಇರುವುದು ಕಂಡು ಬಂದಿದೆ. ಇವರಲ್ಲಿ ಶೇ.73 ಮಂದಿ ಪುರುಷರಿದ್ದಾರೆ, ಉಳಿದವರು ಮಹಿಳೆಯರು.

ದತ್ತಾಂಶಗಳ ಪ್ರಕಾರ ಮೈಸೂರು ವಿಭಾಗಕ್ಕೆ ಸೇರಿದ ಜಿಲ್ಲೆಗಳಲ್ಲಿನ ಬಿಪಿಎಲ್‌ ಸಮುದಾಯದವರಲ್ಲಿ ಹೆಚ್ಚಿನ ಪ್ರಮಾಣದ ಕಿಡ್ನಿ ಸಂಬಂಧಿತ ಸಮಸ್ಯೆ ಇರುವುದು ಕಂಡು ಬಂದಿದೆ. ಬಿಪಿಎಲ್‌ ಸಮುದಾಯದ 4147 ಮಂದಿಗೆ ಪ್ರಾಸ್ಟೇಟ್‌ ಹಿಗ್ಗುವಿಕೆ, 290 ಕಿಡ್ನಿ ವೈಫಲ್ಯ ಮತ್ತು 1028 ಮಂದಿಯಲ್ಲಿ ಧೀರ್ಘಕಾಲಿಕ ಕಿಡ್ನಿ ವ್ಯಾಧಿಗೆ ಚಿಕಿತ್ಸೆ ಪಡೆದಿರುವುದು ಕಳೆದ ಹತ್ತು ವರ್ಷಗಳಲ್ಲಿ ಕಂಡುಬಂದಿದೆ.

ಸಾಮಾನ್ಯವಾಗಿ ಬಿಪಿಎಲ್‌ ಸಮುದಾಯದ ಹೆಚ್ಚಿನ ಮಂದಿ ಬಡತನ, ಆರೋಗ್ಯ ಅನಕ್ಷರತೆ, ಹೆಚ್ಚಿನ ದೈಹಿಕ ಶ್ರಮದ ಕೆಲಸ ಅವೈಜ್ಞಾನಿಕ ಆರೋಗ್ಯ ವರ್ತನೆಗಳು, ಕಲುಷಿತ ವಾತಾವರಣದಲ್ಲಿ ವಾಸಿಸುವಿಕೆ, ಅಪೌಷ್ಟಿಕತೆ, ಅವೈಜ್ಞಾನಿಕ ನೋವು ನಿವಾರಕ ಮಾತ್ರೆಗಳ ಬಳಕೆ, ಬಡತನ ಸಂಬಂಧಿತ ಅನುವಂಶಿಕ ಕಾರಣಗಳು ಹೊಂದಿರುತ್ತಾರೆ. ಬಿಸಿಲಿನಲ್ಲಿ ಮಾಡುವ ಹೆಚ್ಚಿನ ದೈಹಿಕ ಶ್ರಮದ ಕೆಲಸಗಳು, ಕಳಪೆ ಆಹಾರ ಸೇವನೆ ಸಹ ಬಡ ಜನರಲ್ಲಿ ವಿವಿಧ ರೀತಿಯ ಕಿಡ್ನಿ ಕಾಯಿಲೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಸಂಶೋಧಕರು.

ಈ ವಿಚಾರದಲ್ಲಿ ಜನರಲ್ಲಿ ಅರಿವು ಮೂಡಿಸುವುದು ಮಾಧ್ಯಮಗಳ ಪಾತ್ರ ದೊಡ್ಡದು ಎನ್ನುತ್ತಾರೆ ಜೈನ್‌ ವಿವಿಯ ಡಾ. ಭಾರ್ಗವಿ ಹೆಮ್ಮಿಗೆ. 

ಈ ಅಧ್ಯಯನದಲ್ಲಿ ಆಯುರ್ವೇದ ವೈದ್ಯ ಡಾ.ಕೆ.ಸಿ. ಶ್ರೀವತ್ಸ, ಡಾ.ಪಿ.ಟಿ. ದಿನೇಶ್‌, ಪ್ರೊ. ಲ್ಯಾನ್ಸಿ ಡಿಸೋಜ ಸಹಕರಿಸಿದ್ದಾರೆ.

Follow Us:
Download App:
  • android
  • ios