ಮಲೆನಾಡಿನಲ್ಲೀ ಭಾರೀ ಭೂ ಕುಸಿತ; ಬೆಚ್ಚಿಬಿದ್ದ ಕಾಫಿನಾಡಿನ ಜನ
ಕೊಪ್ಪ ತಾಲೂಕಿನ ಭೂತನಕಾಡು ಗ್ರಾಮದ ಮೈಸೂರು ಪ್ಲಾಂಟೇಷನ್’ನಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು ಒಂದು ಎಕರೆ ಇರುವ ತೋಟದಲ್ಲಿ 40 ಅಡಿ ಆಳಕ್ಕೆ ಭೂಮಿ ಕುಸಿದಿದೆ. ಒಂದು ಎಕರೆ ಪ್ರದೇಶದಲ್ಲಿದ್ದ ಕಾಫಿ, ಟೀ ಬೆಳೆಗಳು ನಾಶವಾಗಿವೆ.
ಚಿಕ್ಕಮಗಳೂರು[ಆ.21]: ಮಲೆನಾಡಿನಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಕೊಡಗಿನಲ್ಲಿ ಭೀಕರ ಪ್ರವಾಹದ ಬಳಿಕ ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಭೂ ಕುಸಿತ ಮುಂದುವರೆದಿದೆ.
ಕೊಪ್ಪ ತಾಲೂಕಿನ ಭೂತನಕಾಡು ಗ್ರಾಮದ ಮೈಸೂರು ಪ್ಲಾಂಟೇಷನ್’ನಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು ಒಂದು ಎಕರೆ ಇರುವ ತೋಟದಲ್ಲಿ 40 ಅಡಿ ಆಳಕ್ಕೆ ಭೂಮಿ ಕುಸಿದಿದೆ. ಒಂದು ಎಕರೆ ಪ್ರದೇಶದಲ್ಲಿದ್ದ ಕಾಫಿ, ಟೀ ಬೆಳೆಗಳು ನಾಶವಾಗಿವೆ.
ಇದೀಗ ಮಲೆನಾಡಿನಲ್ಲಿ ಮಳೆ ನಿಂತರೂ ಕುಸಿದು ಬಿಳುತ್ತಿರುವ ಗುಡ್ಡ, ಕಾಫಿ ತೋಟಗಳನ್ನು ನೋಡಿದ ಜನತೆಯ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ಮಳೆ ನಿಂತರೂ ಜನರ ಆತಂಕ ಮಾತ್ರ ತಪ್ಪಿಲ್ಲ.