ಮಳೆಗಾಲಕ್ಕೂ ಮುನ್ನೆವೇ ಕೊಡಗು ಜಿಲ್ಲೆಯಲ್ಲಿ ಮತ್ತೆ ಹಲವೆಡೆ ಭೂ ಕುಸಿತ ಆರಂಭವಾಗಿದೆ. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲ ಎಂಬಲ್ಲಿ ರಸ್ತೆ ಕುಸಿದು ಬಿದ್ದಿದೆ. 

ಮಡಿಕೇರಿ (ಏ.24):  ಮಳೆಗಾಲಕ್ಕೂ ಮುನ್ನವೇ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಶುರುವಾಗಿದೆ. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲ ಎಂಬಲ್ಲಿ ಗುರುವಾರ ರಾತ್ರಿ ರಸ್ತೆ ಕುಸಿದಿದೆ.

2018ರಲ್ಲಿ ಮಳೆಗಾಲದ ಅವಧಿಯಲ್ಲಿ ಇಲ್ಲಿ ರಸ್ತೆ ಬದು ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮರಳು ಚೀಲದ ತಡೆ ನಿರ್ಮಿಸಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಮರಳು ಚೀಲ ಸಮೇತ ಇದೀಗ ಮತ್ತೆ ಅರ್ಧ ರಸ್ತೆ ಕೊಚ್ಚಿ ಹೋಗಿದೆ. 

ಇದು ಕಾಶ್ಮೀರವಲ್ಲ ಕೊಡಗು... ಆಲಿಕಲ್ಲು ಮಳೆಗೆ ರೈತರು ಹೈರಾಣ

ಸಡಿಲಗೊಂಡ ರಸ್ತೆಯಲ್ಲಿ ಹೆಚ್ಚಿದ ವಾಹನಗಳ ಒತ್ತಡ ಹಾಗೂ ರಸ್ತೆ ಕೆಳಗೆ ಮಳೆ ನೀರು ಹರಿದ ಪರಿಣಾಮ ಈ ಘಟನೆ ಸಂಭವಿಸಿದ್ದು, ಮತ್ತಷ್ಟುಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆ ನಿರ್ಮಾಣ ತಡೆಗೋಡೆ ಕಾಮಗಾರಿಯೂ ಚುರುಕಿನಿಂದ ಸಾಗಿದೆ.