ಕಂದಾಯ ಇಲಾಖೆಯ ನಿರ್ಲಕ್ಷ ಮತ್ತು ಸ್ಥಳೀಯ ಗ್ರಾಪಂ ಅಧಿಕಾರಿಗಳ ಪರೋಕ್ಷ ಬೆಂಬಲದಿಂದಾಗಿ ತುಮಕೂರಿನ ಕೋರಟಗೆರೆಯಲ್ಲಿ ಭೂಮಾಫಿಯಾ ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿದೆ. ಬೆಟ್ಟಗಳು ನೆಲಸಮವಾಗುತ್ತಿದೆ.
ವರದಿ: ಎಚ್.ಎನ್.ನಾಗರಾಜು ಹೊಳವನಹಳ್ಳಿ.
ತುಮಕೂರು (ಜೂ.9): ಕೊರಟಗೆರೆ ತಾಲೂಕಿನಾದ್ಯಾಂತ ಭೂ ಮಾಫಿಯಾಗೆ ರಾತ್ರೋರಾತ್ರಿ ಕರಗುತ್ತೀವೆ ಬೆಟ್ಟಗಳು. ತಾಲೂಕಿನ ಸರಕಾರಿ ಖರಾಬು-ಗೋಮಾಳದ ಜಮೀನಿಗೆ ಭದ್ರತೆಯೇ ಮರೀಚಿಕೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿವರ್ಗ ಮತ್ತು ಸ್ಥಳೀಯ ಗ್ರಾಪಂ ಸಿಬ್ಬಂದಿಗಳ ದಿವ್ಯ ನಿರ್ಲಕ್ಷದಿಂದ ಸುಂದರವಾದ ಬೆಟ್ಟಗುಡ್ಡಗಳು ನೆಲಸಮವಾಗುತ್ತಿವೆ.
ಕೊರಟಗೆರೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಣ್ಣಿನ ರಕ್ಷಣೆ ಬೇಕಾದ ಕಾಳಜಿನೇ ಇಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೊರಟಗೆರೆಗೆ ಆಗಮಿಸಿರುವ ಗೋಜಿಗೆ ಹೋಗಲ್ಲ. ಅಧಿಕಾರಿವರ್ಗ ಮತ್ತು ರಾಜಕೀಯ ಧುರೀಣರ ಪರೋಕ್ಷ ಬೆಂಬಲದಿಂದ ತಾಲೂಕಿನ ಬೆಟ್ಟ, ಕೆರೆಕಟ್ಟೆಗಳಿಂದ ಪ್ರತಿನಿತ್ಯ ಸಾವಿರಾರು ಲೋಡುಗಳು ಪರವಾನಗಿ ಇಲ್ಲದೇ ಮಣ್ಣು ಸರಬರಾಜು ಆಗುತ್ತಿದ್ದರೂ ಅಧಿಕಾರಗಳು ಕೈಕಟ್ಟಿಕೊಂಡಿರುವುದು ವಿಪರ್ಯಾಸವೇ ಸರಿ.
UTTARA KANNADA; ರಾಜ್ಯಕ್ಕೆ ಮಾದರಿ ಈ ಕೃಷಿ ಪಾಠದ ಶಾಲೆ!
ಜೆಸಿಬಿ ಮಾಲೀಕರು ಮಣ್ಣಿನ ಬೆಲೆಯನ್ನು ನಿಗಧಿ ಮಾಡ್ತಾರೇ.. ಟ್ರಾಕ್ಟರ್ ಡ್ರೆತ್ರೖವರ್ ಮಣ್ಣು ಸಾಗಾಣಿಕೆಯ ಜವಾಬ್ದಾರಿ ವಹಿಸ್ತಾರೇ.. ಕೊರಟಗೆರೆ ಪಟ್ಟಣದ ನಾಲ್ಕು ದಿಕ್ಕಿನಲ್ಲಿಯೂ ಸಹ ಶನಿವಾರ, ಭಾನುವಾರ ಬಂದರೆ ಸಾಕು ಬೆಟ್ಟಗುಡ್ಡ, ಕೆರೆಕಟ್ಟೆ, ಗೋಮಾಳದ ಜಮೀನು, ಸರಕಾರಿ ಭೂಮಿ, ಅರಣ್ಯ ಪ್ರದೇಶದ ಸಮೃದ್ದ ಮಣ್ಣಿಗೆ ಇವರೇ ಮಾಲೀಕರಾಗಿ ಪ್ರತಿ ಟ್ರಾಕ್ಟರ್ ಲೋಡು ಮಣ್ಣಿಗೆ 750ರೂ ಮತ್ತು ಲಾರಿ ಲೋಡಿಗೆ 1500ರೂ ನಿಗಧಿ ಮಾಡಿದ್ದಾರೆ.
ಕಂದಾಯ ಇಲಾಖೆ ಮತ್ತು ಸ್ಥಳೀಯ ಗ್ರಾಪಂಯೊಡನೆ ಒಳಒಪ್ಪಂದ ಮಾಡಿಕೊಂಡಿರುವ ಭೂಗಳ್ಳರು ರಾತ್ರೋರಾತ್ರಿ ಕೆರೆ ಮತ್ತು ಬೆಟ್ಟದ ಒಡಲನ್ನು ಬಗೆಯುವ ಘಟನೆ ಯಾರ ಭಯವು ಇಲ್ಲದೇ ಅವ್ಯಾಹತವಾಗಿ ನಡೆಯುತ್ತೀದ್ದಾರೆ. ಪ್ರತಿನಿತ್ಯ ಹತ್ತಾರು ಜೆಸಿಬಿ 30ಕ್ಕೂ ಟ್ರಾಕ್ಟರ್ ಮತ್ತು 10ಕ್ಕೂ ಅಧಿಕ ಟ್ರಾಕ್ಟರ್‌ಗಳಲ್ಲಿ ಮಣ್ಣು ಸಾಗಾಣಿಕೆ ನಡೆಯುತ್ತೀದೆ. ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿ ಕೋಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.
Kolara; ಮಾಲೂರು ಶಾಸಕನ ಬರ್ತಡೇಯಲ್ಲಿ ಬಿರಿಯಾನಿಗಾಗಿ ಹೋರಾಟ!
ಬೆಟ್ಟಗುಡ್ಡ ಮತ್ತು ಕೆರೆಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಣ್ಣು ಸರಬರಾಜಿಗೆ ಕಂದಾಯ ಇಲಾಖೆ ಪರವಾನಗಿ ಕಡ್ಡಾಯವಾಗಿ ಪಡೆಯಬೇಕಿದೆ. ಸರಕಾರಿ ಗೋಮಾಳ ಮತ್ತು ಕೆರೆಗಳಿಂದ ಅಕ್ರಮವಾಗಿ ಮಣ್ಣು ತೆಗೆಯಲು ಅವಕಾಶವಿಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ಸರಕಾರಿ ಗೋಮಾಳ-ಬೆಟ್ಟಗುಡ್ಡ ಮಣ್ಣು ತೆಗೆದರೇ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಡಾ.ಸೋಮಪ್ಪ ಕಡಕೋಳ. ಎಸಿ. ಮಧುಗಿರಿ
ಸೌತೆಕಾಯಿ ಪ್ಯಾಕ್ಟರಿಗೆ ಮಣ್ಣು ಸರಬರಾಜು: ರಾಜ್ಯ ಹೆದ್ದಾರಿ ಸಮೀಪದ ಸೌತೆಕಾಯಿ ಪ್ಯಾಕ್ಟರಿಗೆ ಅಕ್ರಮವಾಗಿ ನೂರಾರು ಲೋಡು ಮಣ್ಣು ಸರಬರಾಜು ಆಗುತ್ತೀದೆ. ಜೆಸಿಬಿಗೆ ಗಂಟೆಗೆ 1200ರೂ ಮತ್ತು 1ಟ್ರಾಕ್ಟರ್ ಮಣ್ಣಿಗೆ 750ರೂನಂತೆ ಪ್ಯಾಕ್ಟರಿಯ ಮಾಲೀಕ ಹಣವನ್ನು ನೀಡುತ್ತಿದ್ದಾರೆ. ಸೌತೆಕಾಯಿ ಪ್ಯಾಕ್ಟರಿಯ ವಿಷಾನೀಲ ಶೇಖರಣೆಯ ಕಟ್ಟೆಯನ್ನು ಮುಚ್ಚಲು ಹಾಗೂ ಫ್ಯಾಕ್ಟರಿ ಒಳಗೆ ಇರುವ ರಾಜಕಾಲುವೆಯನ್ನ ಮುಚ್ಚಿ ಹಾಕಲು ಮಾಲೀಕರಿಂದ ಮಣ್ಣಿನ ಖರೀದಿಯ ಭರಾಟೆ ಜೋರಾಗಿ ನಡೆಯುತ್ತೀದ್ದರೂ ಅಧಿಕಾರಿಗಳು ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
1ಟನ್ ಮಣ್ಣಿಗೆ 40ರೂನಂತೆ ತೆರಿಗೆ ಪಾವತಿಸಿ ಜಿಲ್ಲಾಧಿಕಾರಿ ಪರವಾನಗಿ ಪಡೆಯಬೇಕಿದೆ. ಸರಕಾರಿ ಗೋಮಾಳ ಮತ್ತು ಬೆಟ್ಟಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲು ಅವಕಾಶವಿಲ್ಲ. ಪರವಾನಗಿ ಪಡೆಯದೇ ಮಣ್ಣು ಸರಬರಾಜು ಮಾಡಿದರೇ ಕಾನೂನುರಿತ್ಯ ಕ್ರಮ ಕೈಗೊಳ್ಳುತ್ತೇವೆ. ಕಂದಾಯ ಮತ್ತು ಗಣಿ ಇಲಾಖೆ ಜಂಟಿಯಾಗಿ ಕಾರ್ಯಚರಣೆ ನಡೆಸುತ್ತೇವೆ.
ಡಾ.ಎಂ.ಜೆ.ಮಹೇಶ್. ಉಪನಿರ್ದೇಶಕ. ಗಣಿಮತ್ತು ಭೂವಿಜ್ಞಾನ ಇಲಾಖೆ. ತುಮಕೂರು
ಸರಕಾರಿ ಇಲಾಖೆಗಳ ಸಮನ್ವಯತೆ ಕೊರತೆ: ಗ್ರಾಮೀಣ ಪ್ರದೇಶಗಳ ಕೆರೆಯ ಅಭಿವೃದ್ದಿ ಮತ್ತು ಸಂರಕ್ಷಣೆಗೆ ಸರಕಾರಿ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಂತಾಗಿದೆ. ಮೀನುಗಾರಿಕೆ, ಜಿಪಂ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ರಕ್ಷಣೆಗೆ ಅಕಾರಿಗಳ ಇಚ್ಚಾಶಕ್ತಿಯ ಅಗತ್ಯವಿದೆ. ಬೆಟ್ಟಗುಡ್ಡ, ಸರಕಾರಿ ಜಮೀನು ಮತ್ತು ಗೋಮಾಳದ ಭೂಮಿಯ ರಕ್ಷಣೆಗೆ ಕಂದಾಯ ಮತ್ತು ಗಣಿ ಇಲಾಖೆ ಬರಬೇಕಿದೆ. ಒಬ್ಬರ ಮೇಲೊಬ್ಬರು ದೂರುವುದರಲ್ಲೇ ನಿರತರಾಗಿರುವ ಅಕಾರಿವರ್ಗ ಕಚೇರಿಯಿಂದ ಹೊರಗಡೆ ಬರಬೇಕಿದೆ.
