Kolara; ಮಾಲೂರು ಶಾಸಕನ ಬರ್ತಡೇಯಲ್ಲಿ ಬಿರಿಯಾನಿಗಾಗಿ ಹೋರಾಟ!

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಹುಟ್ಟಿದ ಹಬ್ಬ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರು ಬಿರಿಯಾನಿಗಾಗಿ ನಾಮುಂದು ತಾ ಮುಂದು ಎಂದು  ನೂಕುನುಗ್ಗಲು.

Malur MLA Ky Nanjegowda  Birthday Celebrations gow

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,

ಕೋಲಾರ (ಜೂ.8): ಇವತ್ತು ಆ ಕ್ಷೇತ್ರದ ಶಾಸಕನ ಹುಟ್ಟಿದ ಹಬ್ಬದ ಸಂಭ್ರಮ, ಹುಟ್ಟು ಹಬ್ಬದ ಸಂಭ್ರಮದಲ್ಲಿ ಶಾಸಕರು ಹಾಗೂ ಅವರ ಬೆಂಬಲಿಗರು ಒಂದೆಡೆ ಕುಣಿದು ಕುಪ್ಪಳಿಸುತ್ತಿದ್ದರೆ, ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರು ಬಿರಿಯಾನಿಗಾಗಿ (Biriyani) ನಾಮುಂದು ತಾ ಮುಂದು ಎಂದು ಹೋರಾಟ ಮಾಡಿದ್ರೆ, ಸಾಮಾನ್ಯ ಜನರು ಟ್ರಾಫಿಕ್​ ಜಾಮ್​ನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಒಂದೆಡೆ ರಸ್ತೆ ಮಧ್ಯದಲ್ಲಿ ಶಾಸಕರಿಗೆ ಹೂವಿನ ಸುರಿಮಳೆ ಸುರಿಸಿ ಪಟಾಕಿ ಸಿಡಿಸಿ ಮನೆಯವರೆಲ್ಲಾ ಕುಣಿದು ಕುಪ್ಪಳಿಸುತ್ತಿದ್ದರೆ, ಇನ್ನೊಂದೆಡೆ ಟ್ರಾಫಿಕ್​ನಿಂದ ಸಾಲುಗಟ್ಟಿ ನಿಂತಿರುವ ವಾಹನಗಳು, ಇನ್ನೊಂದೆಡೆ ಬಿರಿಯಾನಿಗಾಗಿ ಮುಗಿಬಿದ್ದಿರುವ ಜನರು ಇಂಥಾದೊಂದು ದೃಶ್ಯ ಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ. 

ಹೌದು ಇವತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಹುಟ್ಟಿದ ಹಬ್ಬ. ಅದರ ಪ್ರಯುಕ್ತ ಶಾಸಕರ ಬೆಂಬಲಿಗರು ಹಾಗೂ ಕಾರ್ಯಕರ್ತರು ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಇಂದು ಬೆಳಿಗ್ಗೆ ಯಿಂದಲೇ ಸಾವಿರಾರು ಜನರು ಶಾಸಕ ನಂಜೇಗೌಡರ ಹುಟ್ಟುಹಬ್ಬಕ್ಕೆ ಶುಭ ಕೋರಲು ಬಂದಿದ್ದರು. ಅದಕ್ಕಾಗಿ ಮಾಲೂರು ಪಟ್ಟಣದ ಇಂದಿರಾ ಕ್ಯಾಂಟೀನ್​ ಬಳಿ ಬೃಹತ್​ ವೇದಿಕೆಯನ್ನು ಹಾಕಲಾಗಿತ್ತು. 

ಬಸವ ಜನ್ಮಭೂಮಿಯಲ್ಲಿ VIJAYAPURA DCಯಿಂದ ಸಾರ್ವಜನಿಕ ಅಹವಾಲು ಸ್ವೀಕಾರ!

ಇನ್ನು ವೇದಿಕೆಗೆ ಶಾಸಕರನ್ನು ಕರೆ ತರುವ ಮಾರ್ಗ ಮಧ್ಯದಲ್ಲಿ ದಾರಿಯುದ್ದಕ್ಕೂ ಹೂವಿನ ಸುರಿಮಳೆ ಸರಿಸಿಕೊಂಡು ಪಟಾಕಿ ಸಿಡಿಸಿ, ಬೃಹತ್​ ಸೇಬಿನಹಾರ ಹಾಕಿ, ಹೀಗೆ ವಿವಿಧ ವಿಧವಾಗಿ ಶಾಸಕರಿಗೆ ಕಾರ್ಯಕರ್ತರು ಖುಷಿ ಪಡಿಸುತ್ತಿದ್ದರು. ಇನ್ನು ಶಾಸಕರು ಈ ಮೆರವಣಿಗೆ ಮಾಲೂರಿನ ಪ್ರಮುಖ ಬೀದಿಗಳಲ್ಲಿ ಬರುತ್ತಿದ್ದರೆ ಮಾಲೂರಿನ ಮುಖ್ಯ ರಸ್ತೆಯಲ್ಲಿ ಗಂಟೆಕಾಲ ಟ್ರಾಫಿಕ್ ಜಾಮ್​ ಆಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇದೊಂದು ಕಡೆಯಾದರೆ ಬರ್ತಡೇ ಪ್ರಯುಕ್ತ ಬೃಹತ್​ ವೇದಿಕೆಯಲ್ಲಿ ಶಾಸಕರ ಬೆಂಬಲಿಗರು, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ, ಆಶಾ ಕಾರ್ಯಕರ್ತೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೀರೆ ಉಡುಗೊರೆ, ಎಸ್​ಎಸ್​ಎಲ್​ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಧನ ಹಾಗೂ ಸನ್ಮಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಇದೇ ವೇಳೆ ಮಾತನಾಡಿದ ಶಾಸಕ ನಂಜೇಗೌಡ ಇದ್ಯಾವುದು ಚುನಾವಣಾ ಗಿಮಿಕ್​ ಅಲ್ಲಾ ಎಂದ್ರು.

ಇನ್ನು ಒಂದೆಡೆ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಸಾವಿರಾರು ಸಂಖ್ಯೆಯ ಜನರು ಜಮಾಹಿಸಿದ್ದರು, ಕಾರ್ಯಕ್ರಮದಲ್ಲಿ ವಿಧಾನಪರಿಷತ್​ ಸದಸ್ಯ ಅನಿಲ್​ ಕುಮಾರ್​, ಸೇರಿದಂತೆ ಸ್ಥಳೀಯ ಮುಖಂಡರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಶಾಸಕರ ಸಾಧನೆಗಳನ್ನು ಹಾಗೂ ಕಾಂಗ್ರೆಸ್​ ಪಕ್ಷದ ಸಾಧನೆಗಳನ್ನು ಹಾಡಿ ಹೊಗಳುತ್ತಿದ್ದರೆ, ವೇದಿಕೆಯ ಪಕ್ಕದಲ್ಲೇ ಇನ್ನೊಂದು ಕಡೆ ಕಾರ್ಯಕರ್ತರಿಗಾಗಿ ಚಿಕನ್​ ಬಿರಿಯಾನಿ ಮಾಡಿಸಲಾಗುತ್ತಿತ್ತು.

ಬರುವ ಚುನಾವಣೆಯಲ್ಲಿ ಲಂಗೋಟಿ ಕಳಚ್ತಾರೆ: ಸಿದ್ದರಾಮಯ್ಯಗೆ Araga Jnanendra

 ಕಾರ್ಯಕ್ರಮದ ಮಧ್ಯದಲ್ಲೇ ಬಿರಿಯಾನಿ ವಾಸನೆ ಮೂಗಿಗೆ ಬಡಿದದ್ದೇ ಅಲ್ಲಿದ್ದ ಕಾರ್ಯಕರ್ತರೆಲ್ಲರೂ ಪಕ್ಕದ ಬಿರಿಯಾಗಿ ಸುತ್ತ ಜಮಾಯಿಸಿದ್ದರು. ಕೈಗಳಲ್ಲಿ ಪ್ಲೇಟ್​ ಹಿಡಿದುಕೊಂಡು ನನಗೊಂದು ಪೀಸ್​, ನನಗೆ ಮೊದಲು ,ಇಲ್ಲೊಂದು ಚೂರು ಹಾಕಿ, ಅಂತ ಮುಗಿ ಬೀಳು ಶುರು ಮಾಡಿಕೊಂಡಿದ್ದರು, ಅಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿದರಾದರೂ ಅದು ಬಿರಿಯಾನಿ ಮುಂದೆ ಸಾಧ್ಯವಾಗದೇ ಅವರೇ ಸುಸ್ತು ಹೊಡೆದು ಹಿಂದೆ ಬಿದ್ದರು.    

ಒಟ್ಟಾರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾರ್ಯಕರ್ತರನ್ನು ಸೆಳೆಯಲ್ಲಿ ಜನರ ಮಧ್ಯ ಪ್ರಚಾರದಲ್ಲಿರಲು ಇದೊಂದು ಒಳ್ಳೆಯ ಅವಕಾಶ ಎಂದು ಬಾವಿಸಿರುವ ನಾಯಕರು ಭರ್ಜರಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಆದರೆ ಇದೆಲ್ಲಾ ಚುನಾವಣೆ ವೇಳೆ ಮತವಾಗಿ ಪರಿವರ್ತನೆ ಯಾಗುತ್ತಾ ಇಲ್ಲಾ ಎದುರಾಳಿಗಳ ಎದುರು ಶಕ್ತಿ ಪ್ರದರ್ಶನವಾ ಅನ್ನೋದು ಜನರೇ ನಿರ್ಧಾರ ಮಾಡಬೇಕು.

Latest Videos
Follow Us:
Download App:
  • android
  • ios