ನಂದಿ ಬೆಟ್ಟ ರೋಪ್‌ವೇಗೆ ಭೂಮಿ ಹಸ್ತಾಂತರ ವಿಳಂಬ
ನಂದಿ ಬೆಟ್ಟದ ಮೇಲ್ಭಾಗಕ್ಕೆ ರೋಪ್‌ವೇ ಮೂಲಕ ಸಂಚರಿಸಿ ಪ್ರಕೃತಿ ಸೌಂದರ್ಯ ಸವಿಯುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ರೋಪ್ ವೇ ಯೋಜನೆ ಅನುಷ್ಠಾನಗೊಳಿಸಿದೆ. ಅದಕ್ಕಾಗಿ ಡೈನಾಮಿಕ್ಸ್ ರೋಪ್‌ವೇ ಸಂಸ್ಥೆಗೆ ಗುತ್ತಿಗೆಯನ್ನೂ ನೀಡಲಾಗಿದೆ.
ಬೆಂಗಳೂರು(ಜೂ.16): ನಗರದ ಸುತ್ತಲಿನ ಪ್ರವಾಸಿ ತಾಣಗಳಲ್ಲಿ ಒಂದಾದ ನಂದಿ ಬೆಟ್ಟದ ಆಕರ್ಷಣೆಯನ್ನು ಮತ್ತಷ್ಟುಹೆಚ್ಚಿಸಲು ರೋಪ್‌ವೇ ನಿರ್ಮಿಸಲಾಗುತ್ತಿದೆ. ಯೋಜನೆ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆಯಾದರೂ, ಅದಕ್ಕೆ ವೇಗ ನೀಡಲು ಅಗತ್ಯವಿರುವ ಭೂಮಿ ಹಸ್ತಾಂತರದಲ್ಲಿ ವಿಳಂಬವಾಗುತ್ತಿದ್ದು, ಯೋಜನೆ ಮೇಲೂ ಪರಿಣಾಮ ಬೀರುವಂತಾಗಿದೆ.
ನಂದಿ ಬೆಟ್ಟದ ಮೇಲ್ಭಾಗಕ್ಕೆ ರೋಪ್‌ವೇ ಮೂಲಕ ಸಂಚರಿಸಿ ಪ್ರಕೃತಿ ಸೌಂದರ್ಯ ಸವಿಯುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ರೋಪ್ ವೇ ಯೋಜನೆ ಅನುಷ್ಠಾನಗೊಳಿಸಿದೆ. ಅದಕ್ಕಾಗಿ ಡೈನಾಮಿಕ್ಸ್ ರೋಪ್‌ವೇ ಸಂಸ್ಥೆಗೆ ಗುತ್ತಿಗೆಯನ್ನೂ ನೀಡಲಾಗಿದೆ. ಕಳೆದ ಮಾಚ್‌ರ್‍ನಲ್ಲಿ ಕಾಮಗಾರಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ. ಈವರೆಗೆ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಇದೀಗ ಭೌತಿಕ ಕಾಮಗಾರಿ ಆರಂಭಿಸಲಾಗುತ್ತಿದೆ. ಪ್ರಾಥಮಿಕ ಹಂತದ ಸಿದ್ಧತೆಗಳೆಲ್ಲವೂ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ರೋಪ್ ವೇಗಾಗಿ ಕಂಬಗಳ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಅದಕ್ಕೂ ಮುನ್ನ ಯೋಜನೆಗಾಗಿ ಅಗತ್ಯವಿರುವ ಭೂಮಿ ಹಸ್ತಾಂತರ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತಿದೆ.
ಜನಜಂಗುಳಿಯಿಂದ ದೂರ ಉಳಿಯಲು ಬಯಸಿದ್ರೆ… ಈ ಗಿರಿಧಾಮಗಳೇ ಸ್ವರ್ಗ
ಪ್ರವಾಸೋದ್ಯಮ ಇಲಾಖೆ ರೂಪಿಸಿರುವ ಯೋಜನೆಯಂತೆ .96 ಕೋಟಿ ವೆಚ್ಚದಲ್ಲಿ ರೋಪ್ ವೇ ಮಾರ್ಗ ನಿರ್ಮಿಸಲಾಗುತ್ತಿದೆ. ಒಟ್ಟು 2.93 ಕಿ.ಮೀ. ಉದ್ದದ ರೋಪ್‌ವೇ ನಿರ್ಮಿಸಲಿದ್ದು, 50 ಕ್ಯಾಬಿನ್‌ಗಳು ಸಂಚರಿಸುವ ಸಾಮರ್ಥ್ಯ ಇರಲಿದೆ. ರೋಪ್‌ವೇ ಮಾರ್ಗ ನಿರ್ಮಾಣಕ್ಕಾಗಿ ನಂದಿ ಬೆಟ್ಟದ ಕೆಳಭಾಗದಿಂದ ಮೇಲ್ಭಾಗದವರೆಗೆ 20 ಪಿಲ್ಲರ್‌ಗಳು ಹಾಗೂ 18 ಟವರ್‌ಗಳನ್ನು ನಿರ್ಮಿಸಬೇಕಿದೆ. ಅದಕ್ಕಾಗಿ ಕಂದಾಯ ಇಲಾಖೆಗೆ ಸೇರಿದ 10 ಎಕರೆ ಭೂಮಿಯ ಅವಶ್ಯಕತೆಯಿದ್ದು, ಅದನ್ನು ಈಗಾಗಲೇ ಜಾಗ ಗುರುತಿಸಲಾಗಿದೆ. ಅದನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಿಂದ ಕಾಮಗಾರಿ ನಡೆಸುತ್ತಿರುವ ಸಂಸ್ಥೆಗೆ ಹಸ್ತಾಂತರಿಸಬೇಕಿದೆ.
ನಂದಿ ಬೆಟ್ಟ ರೋಪ್‌ವೇ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಪಿಲ್ಲರ್‌ಗಳ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಗಾಗಿ ಅಗತ್ಯವಿರುವ ಭೂಮಿಯನ್ನು ಸ್ಥಳೀಯ ಜಿಲ್ಲಾಡಳಿತ ಹಸ್ತಾಂತರಿಸಬೇಕಿದೆ. ಈ ಕುರಿತಂತೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಭೂಮಿಯನ್ನು ಪಡೆದು ಕಾಮಗಾರಿಗೆ ವೇಗ ನೀಡಲಾಗುವುದು ಅಂತ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮ್‌ಪ್ರಸಾದ್ ಮನೋಹರ್ ತಿಳಿಸಿದ್ದಾರೆ.