ಕಲಬುರಗಿ: ಮಾಚಿನಾಳ್ ತಾಂಡಾಕ್ಕೆ ಆಗಮಿಸಿದ ಸಚಿವ ಅಶೋಕ್, ಲಂಬಾಣಿ ಮಹಿಳೆಯರಿಂದ ಸ್ವಾಗತ

ಬಸವನ ಗುಡಿಯವರೆಗೆ ಬೈಕ್ ರ್‍ಯಾಲಿಯೊಂದಿಗೆ ಆಗಮಿಸಿದ ಸಚಿವ ಆರ್.ಅಶೋಕ್ ಅವರು ನಂತರ ಗ್ರಾಮಸ್ಥರು ಎತ್ತಿನ ಬಂಡಿಯ ಮೂಲಕ ಗ್ರಾಮದ ಸಂತ ಸೇವಾಲಾಲ ದೇವಾಲಯವರೆಗೂ ಮೆರವಣಿಗೆ ಮಾಡಿದರು. 

Lambani Women Welcome to Minister R Ashok to Machinal Tanda in Kalaburagi grg

ಕಲಬುರಗಿ(ಜ.17): ಕಂದಾಯ ಸಚಿವ ಆರ್.ಅಶೋಕ್ ಅವರು ಇಂದು(ಮಂಗಳವಾರ) ಕಲಬುರಗಿ ತಾಲೂಕಿನ ಮಾಚಿನಾಳ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದಾರೆ. ಅಫಜಲಪುರ ಮುಖ್ಯ ರಸ್ತೆಯ ಮಾಚಿನಾಳ್ ಕ್ರಾಸದಿಂದ ಗ್ರಾಮದ ನೂರಾರು ಯುವಕರು ಬೈಕ್ ರ್‍ಯಾಲಿ ಮೂಲಕ ಸಚಿವರನ್ನು ಬರಮಾಡಿಕೊಂಡರು.

ಬಸವನ ಗುಡಿಯವರೆಗೆ ಬೈಕ್ ರ್‍ಯಾಲಿಯೊಂದಿಗೆ ಆಗಮಿಸಿದ ಸಚಿವ ಆರ್.ಅಶೋಕ್ ಅವರು ನಂತರ ಗ್ರಾಮಸ್ಥರು ಎತ್ತಿನ ಬಂಡಿಯ ಮೂಲಕ ಗ್ರಾಮದ ಸಂತ ಸೇವಾಲಾಲ ದೇವಾಲಯವರೆಗೂ ಮೆರವಣಿಗೆ ಮಾಡಿದರು. ಸಂತ ಸೇವಾಲಾಲ ಮಹಾರಾಜರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮೋದಿ ಕಾರ್ಯಕ್ರಮ ಯಶಸ್ವಿಗಾಗಿ ಕಲಬುರಗಿಯಲ್ಲಿ ಪೂರ್ವ ಸಿದ್ದತಾ ಸಭೆ

ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಗ್ರಾಮ 

ಸಸಿವ ಅಶೋಕ್‌ ಬೆಂಗಳೂರಿನಿಂದ ಕಲಬುರಗಿಗೆ ಬಂದು ಪ್ರಧಾನಿ ಸಮಾರಂಭ ನಡೆಯುತ್ತಿರುವ ಮಳಖೆಡ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಕಲಬುರಗಿ ಅತಿಥಿ ಗೃಹದಲ್ಲಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ಅಲ್ಲಿಂದ ಮಾಚನಲ್ ತಾಂಡಾಕ್ಕೆ ತೆರಳಿದ್ದಾರೆ. ಸಚಿವ ಆರ್. ಅಶೋಕ್‌ ಅವರಿಗೆ ಲಂಬಾಣಿ ವೇಶಭೂಷಣ ಹಾಕಿ ಮಹಿಳೆಯರು ಸ್ವಾಗತ ಕೋರಿದ್ದಾರೆ. 

ಕಂದಾಯ ಸಚಿವರ ಗ್ರಾಮ ವಾಸ್ತವ್ಯಕ್ಕೆ ಬಂದಂತಹ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಊಟದ ಸಲುವಾಗಿ ಹುಗ್ಗಿ, ಮುದ್ದಿಪಲ್ಯಾ, ಹಿರೀಕಾಯಿ, ಮೊಸರು, ಹಿಂಡಿ, ಚಪಾತಿ, ಸಾಂಬಾರ್ ಸೇರಿದಂತೆ 2500 ಜನರಿಗಾಗಿ ಊಟವನ್ನು ಸಿದ್ದಪಡಿಸಲಾಗುತ್ತಿದೆ.

Latest Videos
Follow Us:
Download App:
  • android
  • ios