ಮೀನುಗಾರಿಕಾ ಇಲಾಖೆ ತೊಟ್ಟಿಯಿಂದಲೇ ಲಕ್ಷಾಂತರ ಮೀನು ಮರಿ ಕಳ್ಳತನ
ಯಲ್ಲಾಪುರ ಪಟ್ಟಣದ ಜೋಡುಕೆರೆಯ ಬಳಿಯ ಮೀನುಗಾರಿಕಾ ಇಲಾಖೆಯ ಮೀನುಪಾಲನಾ ತೊಟ್ಟಿಯಿಂದ 2 ಲಕ್ಷಕ್ಕೂ ಅಧಿಕ ಮೀನು ಮರಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ಮೀನುಗಾರಿಕಾ ಇಲಾಖಾ ಪ್ರಭಾರೆ ಸಹಾಯಕ ನಿರ್ದೇಶಕಿ ಮುಕ್ತಾ ಪಟಗಾರ ಸೋಮವರದಂದು ದೂರು ದಾಖಲಿಸಿದ್ದಾರೆ.
ಉತ್ತರ ಕನ್ನಡ(ಜು.21): ಯಲ್ಲಾಪುರ ಪಟ್ಟಣದ ಜೋಡುಕೆರೆಯ ಬಳಿಯ ಮೀನುಗಾರಿಕಾ ಇಲಾಖೆಯ ಮೀನುಪಾಲನಾ ತೊಟ್ಟಿಯಿಂದ 2 ಲಕ್ಷಕ್ಕೂ ಅಧಿಕ ಮೀನು ಮರಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ಮೀನುಗಾರಿಕಾ ಇಲಾಖಾ ಪ್ರಭಾರೆ ಸಹಾಯಕ ನಿರ್ದೇಶಕಿ ಮುಕ್ತಾ ಪಟಗಾರ ಸೋಮವರದಂದು ದೂರು ದಾಖಲಿಸಿದ್ದಾರೆ.
ಭಾನುವಾರ ರಂದು ಸಂಪೂರ್ಣ ಲಾಕ್‌ಡೌನ್ ಇದ್ದು, ರಾತ್ರಿ ಮೀನು ಪಾಲನಾ ತೊಟ್ಟಿಗಳನ್ನು ಕಾಯಲು ಯಾವುದೇ ಕಾವಲುಗಾರರ ನೇಮಕಮಾಡಿಕೊಂಡಿಲ್ಲ. ಹಾಗಾಗಿ ಕಿಡಗೇಡಿಗಳು ರಾತ್ರಿಯ ಸಮಯದಲ್ಲಿ ಮೀನುಪಾಲನಾ ತೊಟ್ಟಿಗೆ ಜೋಡಿಸಿರುವ ನೀರಿನ ಪೈಪ್ ಹಾಗೂ ವಾಲ್‌್ವಗಳನ್ನು ಒಡೆದು, ಅಲ್ಲಿ ಬಲೆ ಹಾಕಿ ಮೀನು ಮರಿಗಳನ್ನು ಕಳ್ಳತನ ಮಾಡಿರಬಹುದು ಅಥವಾ ಪೈಪ್-ವಾಲ್‌್ವಗಳನ್ನು ಒಡೆದು 2 ಲಕ್ಷ ಮೀನು ಮರಿಗಳನ್ನು ಜೋಡುಕೆರೆಯ ಹನುಮಂತ ಕೆರೆಗೆ ಬಿಟ್ಟಿರಬಹುದೆಂದು ಶಂಕಿಸಲಾಗಿದೆ.
ಕೊಡಗಿನಲ್ಲಿ 281ರಲ್ಲಿ 201 ಸೋಂಕಿತರು ಗುಣಮುಖ
1 ಲಕ್ಷ ಕಟ್ಲಾ ಮರಿಗಳು, 1 ಲಕ್ಷ ಸಾಮಾನ್ಯ ಗೆಂಡೆಮೀನು ಮರಿಗಳನ್ನು ಕಳ್ಳತನ ಮಾಡಲಾಗಿದ್ದು, ಒಡೆದು ಹಾಕಲಾಗಿರುವ ಪೈಪ್-ವಾಲ್‌್ವಗಳ್ಳನ್ನು ಕಳ್ಳತನ ಮಾಡಲಾಗಿದ್ದು, ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ.