ಬೆಂಗಳೂರು[ಆ. 31] ಗಣೇಶ ಹಬ್ಬದ ಸಂಭ್ರಮದಲ್ಲಿ ಈ ಎಲ್ಲ ವಿಚಾರಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಸಾರ್ವಜನಿಕರ ನೆರವಿಗೆ ಬಿಬಿಎಂಪಿ ಸಹ ನಿಂತಿದ್ದು ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಮನೆಯಲ್ಲಿ ಅಥವಾ ಸಾರ್ವಜನಿಕವಾಗಿ ಗಣೇಶ ಮೂರ್ತಿ ತಂದು ಪ್ರತಿಷ್ಠಾಪನೆ ಮಾಡುವವರು ಗಮನಿಸಲೇಬೇಕಾದ ಅಂಶಗಳು ಇಲ್ಲಿವೆ.

ಪಿಒಪಿ ಗಣೇಶ ವಿಸರ್ಜನೆಗೆ ಕೊನೆಗೂ ಬಿಬಿಎಂಪಿ ನಿಷೇಧ!

* ಜಲಮಾಲಿನ್ಯ [ತಡೆ ಮತ್ತು ನಿಯಂತ್ರಣ] ಕಾಯ್ದೆ 1974ರ ಕಲಂ 33ರ ಅನ್ವಯ ಪಿಒಪಿ ಗಣಪತಿ ನಿಷೇಧ

* ನಿಷೇಧಿತ ವಸ್ತುಗಳಿಂದ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧ. 10 ಸಾವಿರ ರೂ. ದಂಡ ವಿಧಿಸಬಹುದು.

* ಬಿಬಿಎಂಪಿ ನಿಗದಿ ಮಾಡಿರುವ ಕೆರೆ ಮತ್ತು ಪುಷ್ಕರಣಿಗಳಲ್ಲಿಯೂ ಪಿಒಪಿ ಗಣೇಶ ವಿಗ್ರಹ ವಿಸರ್ಜನೆಗೆ ಅವಕಾಶ ಇಲ್ಲ.

* ಸಾರ್ವಜನಿಕ ಗಣೇಶೋತ್ಸವಕ್ಕೆ ಬಿಬವಿಎಂಪಿಯಿಂದ ಅನುಮತಿ ಕಡ್ಡಾಯ. ಹೆಚ್ಚಿನ ಮಾಃಇತಿಗೆ   080-22221188

* ಕೆಳಕಂಡ ಕೆರೆಗಳಲ್ಲಿ ನಿರ್ಮಿಸಿರುವ ಕಲ್ಯಾಣಿಗಳಲ್ಲಿ ಮಾತ್ರ ವಿಗ್ರಹ ವಿಸರ್ಜನೆಗೆ ಅವಕಾಶ

ವಾರ್ಡ್-1 ಯಲಹಂಕ ಕೆರೆ
ವಾರ್ಡ್-3 ಅಲ್ಲಾಳಸಂದ್ರ ಕೆರೆ
ವಾರ್ಡ್-3 ಅಟ್ಟೂರು ಕೆರೆ
ವಾರ್ಡ್-5 ಕೋಗಿಲು ಕರೆ
ವಾರ್ಡ್-5 ರಾಚನಹಳ್ಳಿ ಕೆರೆ
ವಾರ್ಡ್-5 ಜಕ್ಕೂರು ಕೆರೆ
ವಾರ್ಡ್-5 ಪಳನಹಳ್ಳಿ ಕೆರೆ
ವಾರ್ಡ್-10 ದೊಡ್ಡಬೊಮ್ಮಸಂದ್ರ ಕೆರೆ
ವಾರ್ಡ್-25 ಚಳ್ಳಕೆರೆ
ವಾರ್ಡ್-35 ಸ್ಯಾಂಕಿ ಕೆರೆ
ವಾರ್ಡ್-39 ಚೊಕ್ಕಸಂದ್ರ ಕೆರೆ
ವಾರ್ಡ್-54 ಸಾದರಮಂಗಳ ಕೆರೆ
ವಾರ್ಡ್-72 ಹೇರೋಹಳ್ಳಿ ಕೆರೆ
ವಾರ್ಡ್-85 ಮೊನ್ನೆಕೊಳಲು ಕೆರೆ
ವಾರ್ಡ್-90 ಹಲಸೂರು ಕೆರೆ
ವಾರ್ಡ್-129 ಮತ್ತು 130- ಉಳ್ಳಾಲ ಕೆರೆ
ವಾರ್ಡ್-130 ಮಲ್ಲತಹಳ್ಳಿ ಕೆರೆ
ವಾರ್ಡ್-150 ಕೈಗೊಂಡನಹಳ್ಳಿ ಕೆರೆ
ವಾರ್ಡ್-150 ಕಸವನಹಳ್ಳಿ ಕೆರೆ
ವಾರ್ಡ್-150 ದೊಡ್ಡಕೋನೆನಹಳ್ಳಿ ಕೆರೆ
ವಾರ್ಡ್-151 ಮೇಸ್ತ್ರಿ ಪಾಳ್ಯ ಕೆರೆ
ವಾರ್ಡ್-167 ಯಡಿಯೂರು ಕೆರೆ
ವಾರ್ಡ್-184 ದೊರೆಕೆರೆ
ವಾರ್ಡ್-191 ಸಿಂಗಸಂದ್ರ ಕೆರೆ