ಪ್ರೀತಿಸುವುದಾಗಿ ನಂಬಿಸಿ ಕೈಕೊಟ್ಟ ಶಿಕ್ಷಕ, ಶಿಕ್ಷಕಿ ಆತ್ಮಹತ್ಯೆ
ಪ್ರೀತಿಸುವುದಾಗಿ ನಂಬಿಸಿ ಕೈಕೊಟ್ಟ ಶಿಕ್ಷಕನಿಂದಾಗಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. ವಿಷ ಸೇವಿಸಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ(ಫೆ.14): ಪ್ರೀತಿಸುವುದಾಗಿ ನಂಬಿಸಿ ಕೈಕೊಟ್ಟ ಶಿಕ್ಷಕನಿಂದಾಗಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. ವಿಷ ಸೇವಿಸಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೀತಿಸುವುದಾಗಿ ನಂಬಿಸಿ ಶಿಕ್ಷಕ ಕೈಕೊಟ್ಟಿದ್ದ. ಇದರಿಂದ ಮನನೊಂದು ಶಿಕ್ಷಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನವರಿ 7 ರಂದು ವಿಷ ಸೇವಿಷಿ 9 ರಂದು ಮೃತಪಟ್ಟ ಸಹೋದರಿ ಸಾವಿಗೆ ನ್ಯಾಯಕ್ಕಾಗಿ ಶಿಕ್ಷಕಿ ಅಣ್ಣ ಹೋರಾಟ ಮಾಡಿದ್ದಾರೆ.
ಸೈಕಲ್ ಪ್ಯೂರ್ ಅಗರಬತ್ತಿ ಹೆಡ್ ಆಫೀಸ್ ಮೇಲೆ ಐಟಿ ದಾಳಿ
ಚಿಕ್ಕಮಗಳೂರು ಜಿಲ್ಲೆ ಮಲ್ಲಂದೂರಿನ ಸರ್ಕಾರಿ ಶಾಲೆ ಶಿಕ್ಷಕ ಧನಂಜಯ್ ವಿರುದ್ಧ ಮೋಸಮಾಡಿರೋ ಆರೋಪ ಕೇಳಿ ಬಂದಿದ್ದು, ಬೇಲೂರು ತಾಲೂಕಿನ ಬಿಕ್ಕೋಡು ಶಾಲೆಯ ರಾಣಿ(32) ಮೃತ ಶಿಕ್ಷಕಿ.
ಚಿಕ್ಕಮಗಳೂರಿನ ಜಾಗರ ಶಾಲೆಯಲ್ಲಿ ಕೆಲಸ ಮಾಡುವಾಗ ರಾಣಿಗೆ ಧನಂಜಯ್ ಪರಿಚಯವಾಗಿತ್ತು. ತಾನು ಮದುವೆಯಾಗಿದ್ರು ವಿಷಯ ಮುಚ್ಚಿಟ್ಟು ರಾಣಿಯನ್ನು ಪ್ರೀತಿಸೋದಾಗಿ ನಂಬಿಸಿ ಧನಂಜಯ್ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ವಿಷಯ ತಿಳಿದು ಧನಂಜಯನಿಂದ ದೂರವಾಗಿದ್ದ ರಾಣಿಗೆ ಧನಂಜಯ ಕಿರುಕುಳ ನೀಡುತ್ತಿದ್ದ. ಬ್ಲಾಕ್ ಮೇಲ್ ಮಾಡಿ ಲಕ್ಷಾಂತಹ ಹಣ ವಸೂಲಿ ಮಾಡಿರೋದಾಗಿ ರಾಣಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 204 ಜನರ ರಕ್ಷಣೆ
ಹಣ ಪಡೆದಿರೊ ಆನ್ ಲೈನ್ ದಾಖಲೆಗಳಿದ್ದರೂ ಪೊಲೀಸರು ಮಾತ್ರ ನಿರ್ಲಕ್ಷ್ಯ ಮಾಡಿದ್ದಾರೆ. ಆರೋಪಿ ಬಂಧಿಸಿ ಕ್ರಮ ಕೈಗೊಂಡಿಲ್ಲವೆಂದು ಪೋಷಕರು ಆರೋಪಿಸಿದ್ದಾರೆ. ಶಿಕ್ಷಕನ ವಿರುದ್ದ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್.ಐ.ಆರ್.ದಾಖಲಾದ್ರೂ ಆರೋಪಿಯನ್ನು ಮಾತ್ರ ಬಂಧಿಸಿಲ್ಲ. ಈ ಸಂಬಂಧ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಕೂಡಲೆ ಆರೋಪಿ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..
"