ಮೈಸೂರು(ಫೆ.14): ಮೈಸೂರಿನಲ್ಲಿರುವ ಸೈಕಲ್ ಪ್ಯೂರ್ ಅಗರಬತ್ತಿ ಕಚೇರಿ ಮೇಲೆ ಐಟಿ ದಾಳಿ ನಡೆಸಲಾಗಿದೆ. ಅಗ್ರಹಾರದ ವಾಣಿವಿಲಾಸ ರಸ್ತೆ ಬಳಿ ಇರುವ ಕೇಂದ್ರ ಕಚೇರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಐಟಿ ದಾಳಿ ನಡೆದಿದ್ದು, ಪ್ರಸಿದ್ಧ ಸೈಕಲ್‌ಪ್ಯೂರ್ ಅಗರಬತ್ತಿ ಮಾಲೀಕ ರಂಗರಾವ್ ಅಂಡ್ ಸನ್ಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅಗ್ರಹಾರದ ವಾಣಿವಿಲಾಸ ರಸ್ತೆ ಬಳಿ ಇರುವ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ್ದು, ಶುಕ್ರವಾರ ಬೆಳಗ್ಗೆಯಿಂದಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 204 ಜನರ ರಕ್ಷಣೆ

ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ‌ ನೀಡದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೈಕಲ್ ಪ್ಯೂರ್ ಅಗರಬತ್ತಿ, ರಂಗರಾವ್ ಅಂಡ್ ಸನ್ಸ್ ಸಂಸ್ಥೆ ಮೈಸೂರು ವಾರಿರ್ಯರ್ಸ್ ಕ್ರಿಕೆಟ್ ತಂಡ ಮಾಲೀಕರಾಗಿದ್ದಾರೆ.

ವ್ಯಾಪಾರಿಯೇ ಚಿನ್ನವನ್ನು ಠಾಣೆಗೆ ತಂದೊಪ್ಪಿಸಿದ..!

ಕಂಪನಿಯ ಮಾಲೀಕ ಅರ್ಜುನ್ ರಂಗ ವಿದೇಶ ಪ್ರವಾಸದಲ್ಲಿದ್ದು, ಬೆಳಗ್ಗೆಯಿಂದಲೂ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ಮಾಡುತ್ತಿದ್ದಾರೆ. ಪೈಲ್‌ಗಳು, ಡಾಕ್ಯುಮೆಂಟ್ಸ್‌ಗಳನ್ನು ನೋಡಲಾಗುತ್ತಿದೆ.