ಧಾರವಾಡ: ಜಿಪಂ ಸಿಇಓ ಮಾತಿಗೂ ಕ್ಯಾರೆ ಎನ್ನದ ಮಹಿಳಾ ಅಧಿಕಾರಿ, ಕುರ್ಚಿಗಾಗಿ ಗುದ್ದಾಟ..!

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯಾಗಿದ್ದ ಸರೋಜಾ ಹಳಕಟ್ಟಿ ಅವರು ಮತ್ತೆ ಸುಪ್ರಿಂಕೋರ್ಟ್‌ಗೆ ಹೋಗಿ ಸ್ಟೇ ಆರ್ಡರ್‌ ಮೇಲೆ ಮತ್ತೆ ಹಿಂದೆ‌ ಇರುವ ಚೇರ್‌ನಲ್ಲಿ ಬಂದು ಕುಳಿತಿದ್ದಾರೆ. 

Lady Officer Did Not Care Abot Zilla Panchayat CEO's Order in Dharwad grg

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಜ.23):  ಧಾರವಾಡ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳಿಗೂ ಕಿರಿಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂಬಂತೆ ಒಂದು ಉದಾಹರಣೆಗೆ ‌ಇಲ್ಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯಾಗಿದ್ದ ಸರೋಜಾ ಹಳಕಟ್ಟಿ ಅವರು ಮತ್ತೆ ಸುಪ್ರಿಂಕೋರ್ಟ್‌ಗೆ ಹೋಗಿ ಸ್ಟೇ ಆರ್ಡರ್‌ ಮೇಲೆ ಮತ್ತೆ ಹಿಂದೆ‌ ಇರುವ ಚೇರ್‌ನಲ್ಲಿ ಬಂದು ಕುಳಿತಿದ್ದಾರೆ. ಜೊತೆಗೆ ಈಗ ಇರುವ ಪ್ರಭಾರಿ ಅಧಿಕಾರಿ ಗೋಪಾಲ ಲಮಾಣಿ ಅವರು ಇವತ್ತಿನವರೆಗೆ ಅವರದ್ದೇ ಅಧಿಕಾರ ಇದೆ. ಆದರೆ ಸಿಇಓ‌ ಟಿ.ಕೆ‌.ಸ್ವರೂಪ‌ ಅವರ ಮಾತಿಗೂ ಕ್ಯಾರೆ ಎನ್ನದೆ ಮತ್ತೆ ಒಂದು ವಾರದಿಂದ ಅದೇ ಚೇರ್‌ನಲ್ಲಿ ಬಂದು ಕುಳಿತಿದ್ದಾರೆ. ಈ ಕುರಿತು ಒಂದೇ ಚೇರ್‌ಗೆ ಇಬ್ಬಿಬ್ಬರು ಅಧಿಕಾರಿಗಳು ಯಾಕೆ..? ಇದರಿಂದ ಪೋಷಕರು ಮತ್ತು ಬಡ ಮಕ್ಕಳು ಗೊಂದಲದಲ್ಲಿದ್ದಾರ

ಆ ಅಧಿಕಾರಿಗೆ ವರ್ಗಾವಣೆಯಾಗಿತ್ತು ಆದ್ರೆ ಅದನ್ನ ಪ್ರಶ್ನಿಸಿ ಹೈಕೋರ್ಟ್ ಹಾಗೂ ಕೆಎಟಿ ಮೊರೆ ಹೋಗಿದ್ರು ಅಲ್ಲಿಯೂ ಕೂಡ ಆ ಅಧಿಕಾರಿಯ ಅರ್ಜಿ ತಿರಸ್ಕಾರಗೊಂಡಿತ್ತು. ಇವರ ಪರ ಜಿ.ಪಂ ಸಿಇಓ ಮಾತ್ರ ಬ್ಯಾಟಿಂಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಹಾಗಾದ್ರೆ ಯಾರೂ ಆ ಅಧಿಕಾರಿ ಯಾವ ಜಿಲ್ಲೆಯಲ್ಲಿ ಇದು ನಡೆದಿದೆ ಏನು ಎಡವಟ್ಟು ಮಾಡಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾಮೂರ್ತಿ ಎತ್ತಿ ಇಟ್ಟಿದ್ದು ನಾನೇ: ಯಾರು ನಂದಗೋಪಾಲ ಸಫಾರಿ?

ಧಾರವಾಡ ಜಿಲ್ಲೆಯ ಹಿಂದುಳಿದ ವರ್ಗಗಳ  ಕಲ್ಯಾಣ ಕಚೇರಿ ಈ ಕಚೇರಿಯ ಅಧಿಕಾರಿಯಾಗಿದ್ದ, ಸರೋಜ ಹಳಕಟ್ಟಿಯವರನ್ನ 1.7.2023 ರಂದು ಸರ್ಕಾರ ಧಾರವಾಡದಿಂದ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕು ಹಿಂದೂಳಿದ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು ವರ್ಗಾವಣೆ ಪ್ರಶ್ನಿಸಿ ಸರೋಜ ಹಳಕಟ್ಟಿಯವರು ಕೆಎಟಿ ಹಾಗೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು ಆದ್ರೆ ಕೆಎಟಿ ಹಾಗೂ ಹೈಕೋರ್ಟ್ ಈ ಅರ್ಜಿಯನ್ನ ವಜಾ ಮಾಡಿ ಸರ್ಕಾರದ ವರ್ಗಾವಣೆ ಆದೇಶವನ್ನ ಎತ್ತಿಹಿಡಿದಿತ್ತು. ಸರ್ಕಾರದ ವರ್ಗಾವಣೆಯಂತೆ ಈ ಅಧಿಕಾರಿ ವರ್ಗಾವಣೆಯಾದ ಸ್ಥಳಕ್ಕೆ ಹೋಗಿ ಅಧಿಕಾರ ಸ್ವೀಕಾರ ಮಾಡಿಕೊಳ್ಳಬೇಕಿತ್ತು ಆದ್ರೆ ಧಾರವಾಡ ಜಿಪಂ ಸಿಇಓ ಟಿ.ಕೆ.ಸ್ವರೂಪಾ ಮೇಡಂ ಅವರು ಇವರ  ಪರ ಬ್ಯಾಟಿಂಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದು ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ

ಇನ್ನೂ ಸರೋಜಾ ಹಳಕಟ್ಟಿಯವರು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ 2021-22 ನೇ ಸಾಲಿನಿಂದ 23-24 ನೇ ಸಾಲಿನ ವರೆಗಿನ ಇಲಾಖೆಯ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮ ನಡೆದಿದ್ದು ಎಂದು ಶಾಸಕ ವಿನಯ ಕುಲಕರ್ಣಿ, ಜಿ.ಪಂ ಸಿಇಓ ಟಿ.ಕೆ.ಸ್ವರೂಪಾ ಮೆಡಂ ಅವರಿಗೆ ಪತ್ರ ಬರೆದು ದಾಖಲೆಗಳನ್ನ ನೀಡುವಂತೆ ಕೋರಿದ್ರು ಆದ್ರೆ ಸಿಇಓ ಮೆಡಂ ಮಾತ್ರ ದಾಖಲೆಗಳನ್ನ ನೀಡದೇ ಸರೋಜಾ ಹಳಕಟ್ಟಿಯವರು ಪರ ಬ್ಯಾಟ್ ಬೀಸಿದ್ರು. ಇದು ಅಲ್ಲದೇ ಸರೋಜಾ ಹಳಕಟ್ಟಿಯವರ ವರ್ಗಾವಣೆ ಆದೇಶವನ್ನ ಕೆಎಟಿ ಹಾಗೂ ಹೈಕೋರ್ಟ್ ಅರ್ಜಿ ವಜಾ ಆದ ನಂತರ ಕೂಡ ಡಿ.16 ರಿಂದ 31ರ ಮೆಡಕಲ್ ರಜೆಯನ್ನ ನೀಡಿ  ಜಿ.ಪಂ ಸಿಇಓ ಮೆಡಂ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಬಳಿಕ ಸರೋಜಾ ಹಳಕಟ್ಟಿ ಅವರು ಹೈಕೋರ್ಟ್‌ ಆದೇಶವನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೋರೆ ಹೋಗಿ ಸದ್ಯ ಯಥಾಸ್ಥಿತಿ ಕಾಪಾಡಿಕ್ಕೊಳ್ಳಬೇಕು ಎಂದು ಆದೇಶವನ್ನ ಮಾಡಿದೆ. ಆ ಆದೇಶದ ಮೇಲೆ ಮತ್ತೆ ಹಿಂದೆ ಇರುವ ಚೇರಗೆ ಬಂದು ಕುಳಿತ ಅಧಿಕಾರವನ್ನ ಚಲಾಯಿಸುತ್ತಿದ್ದಾರೆ.

ಬಸವಣ್ಣ ವಿಷಯದಲ್ಲಿ ರಾಜಕೀಯ ಎನ್ನುವವರು ಕ್ಷುಲ್ಲಕ ಮನಸಿನವರು: ಸಚಿವ ಎಚ್‌.ಕೆ.ಪಾಟೀಲ್‌

ಒಟ್ಟಾರೆ ಈ ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿದ್ದ ಸರೋಜ ಹಳಕಟ್ಟಿಯವರು ವರ್ಗಾವಣೆ ವಿಚಾರದಲ್ಲಿ ಸಿಇಒ ಅವರು ಸುಖಾಸುಮ್ಮನೆ ಅವರ ಪರ ನಿಂತು ಬ್ಯಾಟ್ ಬೀಸಿ ಯಡವಟ್ಟು ಮಾಡಿಕೊಂಡಿರುವುದಂತು ಸತ್ಯ ಅಲ್ಲದೇ ಪ್ರಭಾವಿ ರಾಜಕಾರಣಿಯಾಗಿರುವ ವಿನಯ ಕುಲಕರ್ಣಿ ಅವರ ಮಾತಿಗೂ ಕಿಮ್ಮತ್ತು‌ ನೀಡದೇ ಸರೋಜ ಪರ ನಿಂತಿದ್ದಾರೆ. ವರ್ಗಾವಣೆ ಆದ ಅಧಿಕಾರಿಗೆ ನಿಯಮ ಉಲ್ಲಂಘಿಸಿ ರಜೆ ನೀಡಿರುವುದು ನೋಡಿದ್ರೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಸುಪ್ರೀಂ ಕೋರ್ಟ್‌ ಆದೇಶದ ಮೆರೆಗೆ ಮತ್ತೆ ಬಂದು ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಆದರೆ ಸದ್ಯ ಪ್ರಭಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೋಪಾಲ ಲಮಾಣಿ ಅವರು ಇವತ್ತಿದ ದಿನಾಂಕದವರೆಗೂ ಪ್ರಭಾರಿಯಾಗಿ ಅವರೆ ಕಾರ್ಯನಿರ್ವಹಣೆ ಮಾಡಬೇಕಿತ್ತು. ಆದರೆ‌ ಸಿಇಓ ಅವರ ಮಾತಿಗೂ ಕ್ಯಾರೆ ಎನ್ನದೆ ಸರೋಜಾ ಹಳಕಟ್ಟಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಯಾಗಿ ಬಂದು ಅಧಿಕಾರ ಚಲಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಿಇಓ ಟಿ.ಕೆ. ಸ್ವರೂಪ ಅವರು ಇದಕ್ಕೆ ಉತ್ತರ ಕೊಡಬೇಕಿದೆ. 

Latest Videos
Follow Us:
Download App:
  • android
  • ios