ಮಂಗಳೂರು (ಆ.14):  ತನ್ನ ಮುದ್ದಿನ ನಾಯಿಗೆ ಕೃಷ್ಣವೇಷ ಹಾಕಿ ಮಂಗಳೂರಿನ ಯುವತಿಯೊಬ್ಬರು ಈಗ ಪಜೀತಿಗೆ ಸಿಲುಕಿದ್ದಾರೆ. 
ನಾಯಿಮರಿಗೆ ಬಣ್ಣದ ಅಂಗಿ ತೊಡಿಸಿ, ನವಿಲುಗರಿ ಹಾಗೂ ಕೈಗೆ ಕೊಳಲು ಕೊಟ್ಟು ತೆಗೆದ ಫೋಟೊವನ್ನು ತನ್ನ ಇನ್ ಸ್ಟಾಗ್ರಾಂ ಪೇಜ್‌ಗೆ ಅಪ್‌ಲೋಡ್‌ ಮಾಡಿದ್ದು, ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಕೂಡಲೆ ತನ್ನ ಅಕೌಂಟ್‌ನ್ನೇ ಡಿಲೀಟ್‌ ಮಾಡಿದ್ದಾರೆ ಎನ್ನಲಾಗಿದೆ.

ಕೃಷ್ಣನ ಅವತಾರಕ್ಕೆ ಕೃತಜ್ಞತೆ ಸಲ್ಲಿಸುವ ಅಷ್ಟಮಿ!

ಈ ಯುವತಿ ಮಂಗಳೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ನಾಯಿಮರಿಗೆ ಕೃಷ್ಣ ವೇಷ ಹಾಕಿ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದರು. ಅನೇಕರು ಲೈಕ್ಸ್‌ಗಳನ್ನು ಹಾಕಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಈ ಪೋಸ್ಟ್‌ ನೋಡಿದವರೊಬ್ಬರು ತಿಳಿಸಿದ್ದಾರೆ.

ನಿಜ ಜೀವನದಲ್ಲೂ ಪ್ರೀತಿಸುತ್ತಿದ್ದಾರಾ 'ರಾಧಾ ಕೃಷ್ಣ' ಜೋಡಿ ಸುಮೇಧ್-ಮಲ್ಲಿಕಾ?..

ಮಾಡೆಲಿಂಗ್‌ ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಈ ಯುವತಿ ಫೇಸ್‌ಬುಕ್‌ನಲ್ಲಿ ತನ್ನ ಮುದ್ದಿನ ನಾಯಿಯ ಫೋಟೊಗಳನ್ನೇ ಹಾಕಿದ್ದಾರೆ. ಅದೇ ರೀತಿ ಹೊಸ ರೀತಿಯಲ್ಲಿ ಮುದ್ದಿನ ನಾಯಿಯನ್ನು ತೋರಿಸಲು ಹೋಗಿ ಈಗ ಪಜೀತಿಗೆ ಸಿಲುಕಿದ್ದಾರೆ.