ಅನ್ಯ ಜಿಲ್ಲೆಯಲ್ಲಿ ಸಿಲುಕಿದ ಕಾರ್ಮಿಕರು ಗ್ರೀನ್‌ ಝೋನ್‌ ಕೊಪ್ಪಳಕ್ಕೆ ಆಗಮನ

ಲಾಕ್‌ಡೌನ್‌ನಿಂದಾಗಿ ರಾಜ್ಯದ ಅನ್ಯ ಜಿಲ್ಲೆಗಳಲ್ಲಿ ಸಿಲುಕೊಂಡು ಕೊಪ್ಪಳ ಜಿಲ್ಲೆಗೆ ಆಗಮಿಸಿದ ಕಾರ್ಮಿಕರು| ಜಿಲ್ಲೆಯ ಕೆಲವು ನಾಗರಿಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಲುಕಿಕೊಂಡ ಮಾಹಿತಿಯು ಸಹಾಯವಾಣಿ, ವಾಟ್ಸಾಪ್‌ಗಳ ಮೂಲಕ ಮತ್ತು ಇತರೆ ಮೂಲಗಳಿಂದ ಮಾಹಿತಿ ಲಭ್ಯ| ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು/ಜಿಲ್ಲಾಡಳಿತದೊಂದಿಗೆ ಸಂಪರ್ಕವನ್ನು ಸಾಧಿಸಿ ಮರಳಿ ಜಿಲ್ಲೆಗೆ ಕರೆತರಲಾಗುತ್ತದೆ| 

Labors Came to Green Zone Koppal District

ಕೊಪ್ಪಳ(ಮೇ.03): ಕೋವಿಡ್‌-19 ಸಾಂಕ್ರಾಮಿಕ ಸೋಂಕು ತಡೆಗಟ್ಟುವ ಸಲುವಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ ಆದೇಶದ ಹಿನ್ನಲೆಯಲ್ಲಿ ಬೇರೆ ಜಿಲ್ಲೆ, ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೃಷಿ ಮತ್ತು ಕಟ್ಟಡ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತೆರಳಲು ಮತ್ತು ಕರೆಯಿಸಿಕೊಳ್ಳಲು ಕೆಲವು ನಿಬಂಧನೆಗಳೊಂದಿಗೆ ಸರ್ಕಾರವು ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ತಿಳಿಸಿದ್ದಾರೆ.

ಜಿಲ್ಲೆಯ ಕೆಲವು ನಾಗರಿಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಲುಕಿಕೊಂಡ ಮಾಹಿತಿಯು ಸಹಾಯವಾಣಿ, ವಾಟ್ಸಾಪ್‌ಗಳ ಮೂಲಕ ಮತ್ತು ಇತರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು/ಜಿಲ್ಲಾಡಳಿತದೊಂದಿಗೆ ಸಂಪರ್ಕವನ್ನು ಸಾಧಿಸಿ ಮರಳಿ ಜಿಲ್ಲೆಗೆ ಕರೆತರಲಾಗುತ್ತದೆ. ಇದುವರೆಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಾರ್ಮಿಕರ ಮಾಹಿತಿ ಇಂತಿದೆ.

ಲಾಕ್‌ಡೌನ್‌ ಸಡಿಲ: ಸೋಮವಾರದಿಂದ ಬಸ್‌ ಸಂಚಾರ ಪ್ರಾರಂಭ

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಆಮಿಸಿದವರು, ಕೊಪ್ಪಳ-138. ಗಂಗಾವತಿ-115, ಕನಕಗಿರಿ-72, ಕಾರಟಗಿ-21, ಕುಷ್ಟಗಿ-723, ಯಲಬುರ್ಗಾ-172 ಹಾಗೂ ಕುಕನೂರು-68 ಜನರು ಸೇರಿದಂತೆ ಒಟ್ಟು 1309. ಧಾರವಾಡ ಜಿಲ್ಲೆಯಿಂದ-ಕೊಪ್ಪಳ-01, ಗಂಗಾವತಿ-02 ಯಲಬುರ್ಗಾ-12, ಕುಷ್ಟಗಿ-04 ಸೇರಿ ಒಟ್ಟು 19 ಜನರು. ಉಡುಪಿ ಜಿಲ್ಲೆಯಿಂದ ಕುಷ್ಟಗಿಗೆ-67 ಜನರು. ಬೆಂಗಳೂರಿನಿಂದ ಕೊಪ್ಪಳ-03, ಕನಕಗಿರಿ-03, ಕಾರಾಟಗಿ-02, ಕುಷ್ಟಗಿ-19, ಯಲಬುರ್ಗಾ-05 ಹಾಗೂ ಕುಕನೂರು-06, ತುಮಕೂರು ಜಿಲ್ಲೆಯಿಂದ ಕಾರಟಗಿ-07, ಕುಷ್ಟಗಿ-07, ಯಲಬುರ್ಗಾ-14 ಸೇರಿದಂತೆ ಒಟ್ಟು-28 ಜನರು. ಯಾದಗಿರಿ ಜಿಲ್ಲೆಯಿಂದ ಕೊಪ್ಪಳ-04, ಶಿವಮೊಗ್ಗ ಜಿಲ್ಲೆಯಿಂದ ಗಂಗಾವತಿ-09, ಕುಷ್ಟಗಿ-24 ಹಾಗೂ ಕುಕನೂರು-04 ಸೇರಿ ಒಟ್ಟು 37 ಜನರು. ಕೋಲಾರದಿಂದ ಗಂಗಾವತಿ-10 ಮತ್ತು ಕುಕನೂರು-01 ಸೇರಿದಂತೆ ಒಟ್ಟು-11 ಜನರು. ಉತ್ತರಕನ್ನಡ ಜಿಲ್ಲೆಯಿಂದ ಗಂಗಾವತಿ-01, ಕುಷ್ಟಗಿ-125 ಹಾಗೂ ಯಲಬುರ್ಗಾ-13 ಒಟ್ಟು-139 ಜನರು ಸೇರಿದಂತೆ ಇದುವರೆಗೂ ಜಿಲ್ಲೆಗೆ ಒಟ್ಟು 1652 ಜನರು ಆಗಮಿಸಿದ್ದಾರೆ.

ಕೊಪ್ಪಳ ನಗರದಲ್ಲಿ ಸಿಲುಕಿಕೊಂಡಿದ್ದ 24 ವಲಸೆ ಕಾರ್ಮಿಕರನ್ನು ಅವರ ಮೂಲ ಜಿಲ್ಲೆಯಾದ ದಕ್ಷಿಣ ಕನ್ನಡದ ಮಂಗಳೂರು, ಉಲ್ಲಾಳಕ್ಕೆ ಏ.25ರಂದು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಸಿಲುಕಿಕೊಂಡಿದ್ದ ಅಥಣಿ ತಾಲೂಕು ವ್ಯಾಪ್ತಿಯ 26 ಕಾರ್ಮಿಕರನ್ನು ಏ. 26ರಂದು ಸೂಕ್ತ ತಪಾಸಣೆಯನ್ನು ಕೈಗೊಂಡು ಅಗತ್ಯ ಆಹಾರ ಸಾಮಗ್ರಿ ಮತ್ತು ಆಹಾರವನ್ನು ನೀಡಿ ಎನ್‌.ಇ.ಎಸ್‌.ಆರ್‌.ಟಿ.ಸಿ ಬಸ್‌ ಮುಖಾಂತರ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
 
 

Latest Videos
Follow Us:
Download App:
  • android
  • ios