ಮಂಗಳೂರಿಂದ ಬಾಗಲಕೋಟೆಗೆ ಬಂದ ವಲಸೆ ಕಾರ್ಮಿಕರು: ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣೆ
ಬಾಗಲಕೋಟೆ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರು| ಜಿಲ್ಲೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣೆ| ಮಂಗಳೂರು ಭಾಗದಿಂದ ಆಗಮಿಸಿದ ವಲಸೆ ಕಾರ್ಮಿಕರು|
ಬಾಗಲಕೋಟೆ(ಮೇ.03): ಜಿಲ್ಲೆಗೆ ಇಂದು(ಭಾನುವಾರ) ಬೆಳಿಗ್ಗೆ ಮಂಗಳೂರು ಭಾಗದಿಂದ ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಆಗಮಿಸಿದ ವಲಸೆ ಕಾರ್ಮಿಕರಿಗೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪ ಚೆಕ್‌ಪೋಸ್ಟ್ ಬಳಿ ಆರೋಗ್ಯ ಅಧಿಕಾರಿಗಳಿಂದ ತಪಾಸಣೆ ನಡೆಸಲಾಗಿದೆ.
ಸಾಮಾಜಿಕ ಅಂತರದೊಂದಿಗೆ ಸಾಲುಗಟ್ಟಿ ನಿಲ್ಲಿಸಿ ಆರೋಗ್ಯ ತಪಾಸಣೆಯನ್ನ ಮಾಡಲಾಗಿದೆ. ಇವರೆಲ್ಲರು ಜಿಲ್ಲೆಯ ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಿನ ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ. ಲಾಕ್‌ಡೌನ್ ಸಡಿಲವಾಗಿದ್ದರಿಂದ ಮಂಗಳೂರು ಭಾಗದಿಂದ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಆಗಮಿಸುತ್ತಿದ್ದಾರೆ.
ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಿ ಗೌರವ ಸಲ್ಲಿಕೆ
ಹೀಗಾಗಿ ಜಿಲ್ಲೆಗೆ ಬರುತ್ತಿರುವ ವಲಸೆ ಕಾರ್ಮಿಕರಿಗೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತಿದೆ. ಚೆಕ್‌ಪೋಸ್ಟ್‌ನಲ್ಲಿ ಕಂದಾಯ, ಆರೋಗ್ಯ ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಸಿತ್ತಿದ್ದಾರೆ.