ಕಾರವಾರ/ ಶಿರಸಿ(ಫೆ.  21) ಒಂದು ಕಡೆ ಸರ್ಕಾರ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದರೆ ಮಲೆನಾಡು ಭಾಗದ ಮಂಗನ ಕಾಯಿಲೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.

ಉತ್ತರ ಕನ್ನಡ ಜಿಲ್ಲೆ  ಸಿದ್ಧಾಪುರದ ಕುಳಿಬೀಡಿನಲ್ಲಿ ಮಂಗನ ಕಾಯಿಲೆ  ಪ್ರಕರಣ ವರದಿಯಾಗಿದೆ. ಕುಳಿಬೀಡಿನ 51 ವರ್ಷದ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಹಿಳೆಯನ್ನು ದಾಖಲಿಸಲಾಗಿದೆ.

ಮಂಗನ ಕಾಯಿಲೆ ಕರಾಳ ಮುಖ ತೆರೆದಿರಿಸಿದ ಹಾಲಪ್ಪ

ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎಂದಿರುವ ಆರೋಗ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಿದ್ಧಾಪುರ ತಾಲೂಕಿನಲ್ಲಿ  ಮಂಗನ ಕಾಯಿಲೆ ಕಾಟ ಕೊಡುತ್ತಿದೆ.

ಶಿವಮೊಗ್ಗ ಸಾಗರದ ಶಾಸಕ ಹರತಾಳು ಹಾಲಪ್ಪ ಕಳೆದ ವರ್ಷ ವಿಧಾನಸಭೆಯಲ್ಲಿ ಮಂಗನಕಾಯಿಲೆ ಸಂಕಷ್ಟದ ಬಗ್ಗೆ ವಿವರವಾಗಿ ಮಾತನಾಡಿ ಗಮನ ಸೆಳೆದಿದ್ದರು. ಆದರೆ ಇಲ್ಲಿಯವರೆಗೆ ಸಮರ್ಪಕ ಪರಿಹಾರ ಮಾತ್ರ ಸಿಕ್ಕಿಲ್ಲ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಕಾಯಿಲೆ ಪ್ರತಿ ವರ್ಷ ತೊಂದರೆ ನೀಡುತ್ತದೆ.