ಕೊಪ್ಪಳ(ಡಿ.30): ಸ್ವಾತಂತ್ರ್ಯ ಹೋರಾಟದ ವೇಳೆ ಭಾರತದ ಮೊದಲನೇ ಉಪಪ್ರಧಾನಿ ಸರ್ದಾರ್ ವಲ್ಲಭ ಭಾಯ್ ಪಟೇಲ್‌, ಸುಭಾಷ್‌ ಚಂದ್ರ ಬೋಸ್ ಅವರು ಒಂದು ರೀತಿ ಉಗ್ರವಾದಿಗಳಂತಿದ್ದರು ಎಂದು ಜಿಲ್ಲೆಯ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿದ್ದಾರೆ. 

"

ಸೋಮವಾರ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಅವರು, ಮಹಾತ್ಮಗಾಂಧಿ ಅವರದ್ದು ಅಹಿಂಸಾತ್ಮಕ ಚಳವಳಿಯಾಗಿತ್ತು, ಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂಬುದು ಸರ್ದಾರ್ ವಲ್ಲಭ ಭಾಯ್ ಪಟೇಲ್‌ ಮತ್ತು ಬೋಸ್ ಅವರ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊನೆಯ ಘಳಿಗೆಯಲ್ಲಿ ಕಾಂಗ್ರೆಸ್ ಸೇರಿದ್ದ ಪಟೇಲ್ ಅವರನ್ನು ಬಿಜೆಪಿ ತಮ್ಮವರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಂತೂ ಪಟೇಲರ ದೊಡ್ಡ ಮೂರ್ತಿಯನ್ನೇ ನಿರ್ಮಿಸಿ ವೈಭವೀಕರಿಸಿದ್ದಾರೆ. ಬಿಜೆಪಿಯವರು ಯುವಜನರಲ್ಲಿ ತಪ್ಪು ಕಲ್ಪನೆ ಬಿತ್ತುತ್ತಿದ್ದಾರೆ ಎಂದ ಅಮರೇಗೌಡ ಬಯ್ಯಾಪುರ ಅವರು ಹೇಳಿದ್ದಾರೆ.