ಬಾಗಲಕೋಟೆ: ಕುಡಚಿ ರೈಲುಮಾರ್ಗ 2025ರೊಳಗೆ ಪೂರ್ಣ
ಬಾಗಲಕೋಟೆ ರೈಲ್ವೆ ನಿಲ್ದಾಣದ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಂಡು ಆದರ್ಶ ರೈಲು ನಿಲ್ದಾಣಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಿ ಅತೀ ಶೀಘ್ರ ಪ್ರಯಾಣಿಕರಿಗೆ ಅರ್ಪಿಸಬೇಕು ಎಂದು ಒತ್ತಾಯಿಸಿದ ಕುತಬುದ್ದೀನ್ ಖಾಜಿ
ಬಾಗಲಕೋಟೆ(ಆ.03): ಹುಬ್ಬಳ್ಳಿ- ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತಬುದ್ದೀನ್ ಖಾಜಿ ಅವರ ನೇತೃತ್ವದಲ್ಲಿ ನೈಋುತ್ಯ ರೇಲ್ವೆ ಹುಬ್ಬಳ್ಳಿ ಮಹಾ ಪ್ರಬಂಧಕ ಸಂಜೀವ ಕಿಶೋರ ಅವರನ್ನು ಬುಧವಾರ ಭೇಟಿಯಾಗಿ ಕುಡಚಿ ಬಾಗಲಕೋಟೆ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಏಕಕಾಲಕ್ಕೆ ಪ್ರಾರಂಭಿಸುವ ಹಾಗೂ ಗದಗ, ಬಾಗಲಕೋಟೆ, ಹುಟಗಿ, ಮಾರ್ಗದಲ್ಲಿ ರೈಲು ಸೌಲಭ್ಯ ಒದಗಿಸುವ ಕುರಿತು ಚರ್ಚಿಸಿ, ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕುತುಬುದ್ದೀನ್ ಖಾಜಿ, ರಾಜ್ಯ ಸರ್ಕಾರದಿಂದ ರೈಲ್ವೆ ಇಲಾಖೆಗೆ ಅಗತ್ಯ ಇರುವ ಭೂಮಿ ಮತ್ತು ರಾಜ್ಯದ ಪಾಲಿನ ಅರ್ಧದಷ್ಟು ಹಣವನ್ನು ಕುಡಚಿ ರೇಲ್ವೆ ಮಾರ್ಗ ನಿರ್ಮಾಣಕ್ಕೆ ಒದಗಿಸಲಾಗಿದ್ದು ಅತಿ ಶೀಘ್ರ ರೇಲ್ವೆ ಕಾಮಗಾರಿ ಪ್ರಾರಂಭಿಸಿ ಮಾರ್ಗವನ್ನು 2024ರ ಒಳಗಾಗಿ ಪೂರ್ಣಗೊಳಿಸಬೇಕು. ಈ ಮಾರ್ಗ ಬ್ರಿಟಿಷ್ ಕಾಲದಿಂದಲು ಕುಡಚಿ, ಬಾಗಲಕೋಟೆ, ರಾಯಚೂರವರೆಗೆ ಇದ್ದು ಬಾಗಲಕೋಟೆಯಿಂದ ರಾಯಚೂರವರೆಗೆ ಮುಂದುವರಿಸಲು ಚಿಂತಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಗದಗ-ಹುಟಗಿ ಸೆಕ್ಷನ್ ಡಬಲಿಂಗ್ ಮತ್ತು ವಿದ್ಯುದ್ದೀಕರಣ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯಗೊಳಿಸಲು ಕ್ರಮಕೈಗೊಳ್ಳಬೇಕು. ಬಾಗಲಕೋಟೆ ರೈಲ್ವೆ ನಿಲ್ದಾಣದ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಂಡು ಆದರ್ಶ ರೈಲು ನಿಲ್ದಾಣಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಿ ಅತೀ ಶೀಘ್ರ ಪ್ರಯಾಣಿಕರಿಗೆ ಅರ್ಪಿಸಬೇಕು ಎಂದು ಒತ್ತಾಯಿಸಿದರು.
ಆ.5ರಂದು ಗೃಹಜ್ಯೋತಿ ಯೋಜನೆಗೆ ಚಾಲನೆ: ಸಚಿವ ತಿಮ್ಮಾಪೂರ
ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಮಾತನಾಡಿ, ಹುಬ್ಬಳ್ಳಿ ನಿಜಾಮುದ್ದಿನ್ ವಾಯಾ ಗದಗ, ಬಾಗಲಕೋಟೆ ರೈಲು ಸಾಪ್ತಾಹಿಕ ಇದ್ದು, ವಾರದಲ್ಲಿ ಎರಡು ಬಾರಿ ಸಂಚರಿಸುವಂತೆ ಕ್ರಮಕೈಗೊಳ್ಳಬೇಕು. ವಿಜಯಪುರ-ತಿರುಪತಿ ಹೊಸ ರೈಲು ದಿನನಿತ್ಯ ಪ್ರಾರಂಭಿಸಲು ಕ್ರಮಕæೖಗೊಳ್ಳಬೇಕು. ಬಾಗಲಕೋಟೆ, ವಿಜಯಪುರ, ಗುಂತಕಲ್ಲ ಮಧ್ಯ ಪ್ರತಿನಿತ್ಯ ಫಾಸ್ಟ್ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕು, ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಲಿಫ್‌್ಟವ್ಯವಸ್ಥೆ ಒದಗಿಸಬೇಕು. ನಿಲ್ದಾಣದ ಮೇಲ ಚಾವಣಿ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಬೇಕು ಎಂದು ಹೇಳಿದರು.
ಎಲ್ಲ ವಿಷಯಗಳನ್ನು ಸಮಾಧಾನವಾಗಿ ಆಲಿಸಿದ ಮಹಾ ಪ್ರಬಂಧಕ ಸಂಜೀವ ಕಿಶೋರ ಕುಡಚಿ-ಬಾಗಲಕೋಟೆ ರೇಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ 24 ಎಕರೆ ಹೊರತುಪಡಿಸಿ, ಪೂರ್ಣ ಪ್ರಮಾಣದ ಭೂಮಿ ಲಭ್ಯವಾಗಿದೆ ಅದರಂತೆ ರಾಜ್ಯ ಸರ್ಕಾರದ ಪಾಲಿನ ಹಣ ರೇಲ್ವೆ ಇಲಾಖೆಗೆ ಸಂದಾಯವಾಗಿದೆ. ಕುಡಚಿ ಮಾರ್ಗದ ಕಾಮಗಾರಿಯನ್ನು 2025ರ ಒಳಗಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳವದಾಗಿ ಹೊರಾಟ ಸಮಿತಿಯ ನಿಯೋಗಕ್ಕೆ ಸ್ಪಷ್ಟಭರವಸೆ ನೀಡಿದರು.
ನಿಯೋಗದಲ್ಲಿ ಗಣಪತಿರಾವ್ ಹಜಾರೆ, ಡಾ.ರವಿ ಜಮಖಂಡಿ, ಧರಿಯಪ್ಪ ಉಳ್ಳಾಗಡ್ಡಿ, ಬಾಬಾಜಾನ್ ಮುಧೋಳ, ರಾಜಶೇಖರ ಮೆಣಸಿನಕಾಯಿ, ಮೈನುದ್ದೀನ್ ಖಾಜಿ, ಫಾರೂಕ್ ಅಬ್ಬಣ್ಣವರ, ಮೈಬೂಬ್ ಶೇಖ, ನಾಸೀರ್ ಲಷ್ಕರಿ, ಮತ್ತಿತರರು ಇದ್ದರು.