KSRTC  ಮುಷ್ಕರ, ರೈಲ್ವೆ ಇಲಾಖೆ ಮೊರೆ ಹೋದ ಸರ್ಕಾರ, ಈ ರೂಟ್‌ನಲ್ಲಿ ಸ್ಪೆಶಲ್ ಟ್ರೇನ್!

ಸಾರಿಗೆ ನೌಕರರ ಮುಷ್ಕರ/ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ ಮನವಿ/ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸಂಚಾರ ಕಲ್ಪಿಸಲು ಮನವಿ/ ಏಪ್ರಿಲ್ 9 ಮತ್ತು 10 ರಂದು ಎರಡು ಹೆಚ್ಚವರಿ ಟ್ರೇನ್ ರೈಲ್ವೇ ಮ್ಯಾನೇಜರ್ ಗೆ ಮನವಿ ಪ್ರಸ್ತಾವನೆ ಸಲ್ಲಿಸಿರುವ ಪಿ ರವಿಕುಮಾರ್/

KSRTC Strike Karnataka Govt letter to railway to run special trains mah

ಬೆಂಗಳೂರು( ಏ. 07)  ಸಾರಿಗೆ ನೌಕರರ ಕರ್ನಾಟಕದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರದಿಂದ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಮಾಡಿದೆ. ವಿಶೇಷ ರೈಲು ವ್ಯವಸ್ಥೆ ಮಾಡಲು ಕೇಳಿಕೊಂಡಿದೆ.

ಸಾರಿಗೆ ನೌಕರರು ಬುಧವಾರದಿಂದ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ವಾಹನಗಳನ್ನು ಓಡಿಸಲು ಅನುಮತಿ ನೀಡಿದ್ದರೂ ಪೂರ್ಣ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ.

ಉಡುಪಿಯ ಸಾರಿಗೆ ನೌಕರನ ಕಣ್ಣೀರ ಕತೆ.. ಯಾಕಾಗಿ ಹೋರಾಟ?

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದು, ವಿಶೇಷ ರೈಲುಗಳನ್ನು ಓಡಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ ವಾರದ ಯುಗಾದಿ ಹಬ್ಬವಿದ್ದು ಅಗತ್ಯ ವಿವರಿಸಿದ್ದಾರೆ. ಏಪ್ರಿಲ್ 9 ಮತ್ತು 10 ರಂದು ಎರಡು ಹೆಚ್ಚವರಿ ರೈಲು ಸಂಚಾರಕ್ಕೆ ಅನುಮತಿ ನೀಡಲು ಕೇಳಿಕೊಂಡಿದ್ದಾರೆ.  ಜತೆಗೆ ಬೆಂಗಳೂರು-ಮೈಸೂರು ಇಂಟರ್ ಸಿಟಿ ವಿಭಾಗದಲ್ಲಿ ಹೆಚ್ಚು ರೈಲು ಸಂಚಾರಕ್ಕೂ ಮನವಿ ಮಾಡಿಕೊಳ್ಳಲಾಗಿದೆ. 

ಎಲ್ಲಿಂದ ಎಲ್ಲಿಗೆ ಹೆಚ್ಚುವರಿ ರೈಲಿಗೆ ಮನವಿ ಮಾಡಲಾಗಿದೆ?

ಬೆಂಗಳೂರು - ಬೆಳಗಾವಿ - 2 
ಬೆಂಗಳೂರು - ಕಲಬುರಗಿ - 2
ಬೆಂಗಳೂರು - ಬೀದರ್ - 1
ಬೆಂಗಳೂರು - ಕಾರವಾರ - 2
ಬೆಂಗಳೂರು - ಶಿವಮೊಗ್ಗ -1
ಬೆಂಗಳೂರು - ವಿಜಯಪುರ - 1 

"

Latest Videos
Follow Us:
Download App:
  • android
  • ios