30ರಂದು ಸಾರಿಗೆ ನೌಕರರ ಪ್ರತಿಭಟನೆ
ನಗರಗಳಲ್ಲಿ ಖಾಸಗಿ ಐಷಾರಾಮಿ ಬಸ್‌ಗಳ ಸಂಚಾರಕ್ಕೆ ಪಡೆಯುವ ಪರ್ಮಿಟ್‌ಗಳಿಗೆ ವಿನಾಯಿತಿ ನೀಡಲು ಮುಂದಾಗಿರುವ ಕೇಂದ್ರದ ನಿಲುವು ವಿರೋಧಿಸಿ ಯು ಸಂಯೋಜಿತ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಫೆಡರೇಶನ್ ಜ.30ರಂದು ಸಾರಿಗೆ ಆಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದೆ.
ಬೆಂಗಳೂರು(ಜ.28): ನಗರಗಳಲ್ಲಿ ಖಾಸಗಿ ಐಷಾರಾಮಿ ಬಸ್‌ಗಳ ಸಂಚಾರಕ್ಕೆ ಪಡೆಯುವ ಪರ್ಮಿಟ್‌ಗಳಿಗೆ ವಿನಾಯಿತಿ ನೀಡಲು ಮುಂದಾಗಿರುವ ಕೇಂದ್ರದ ನಿಲುವು ವಿರೋಧಿಸಿ ಯು ಸಂಯೋಜಿತ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಫೆಡರೇಶನ್ ಜ.30ರಂದು ಸಾರಿಗೆ ಆಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದೆ.
ಪರ್ಮಿಟ್‌ಗಳಿಗೆ ವಿನಾಯಿತಿ ನೀಡುವ ಸಂಬಂಧ 30 ದಿನಗಳೊಳಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ. ಇದಕ್ಕೆ ಫೆಡರೇಶನ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮರಗಣತಿ: 10 ತಿಂಗಳಾದ್ರೂ ಸಮಿತಿಯೇ ರಚನೆಯಾಗಿಲ್ಲ; ಕೋರ್ಟ್ ಗರಂ
ಸಚಿವಾಲಯದ ಈ ನಡೆಯು ಮುಂದಿನ ದಿನಗಳಲ್ಲಿ ಬಿಎಂಟಿಸಿಯೂ ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ. ಕೇಂದ್ರದ ಇಂತಹ ಪ್ರಯತ್ನಗಳು ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಬೇಡಿಕೆಗೆ ತೊಡಕು ಉಂಟು ಮಾಡಲಿದೆ. ಹೀಗಾಗಿ ಈ ಕೇಂದ್ರದ ಈ ನಿಲುವನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ.