ಗ್ರಾಮೀಣ ಭಾಗದಲ್ಲಿKSRTC ನೂತನ ಐಷಾರಾಮಿ ಬಸ್ ಗಳ ಸೇವೆ

ಗ್ರಾಮೀಣ ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೂತನ ಐಷಾರಾಮಿ ಬಸ್ ಗಳ ಸೇವೆ ಆರಂಭಿಸಲಾಗಿದೆ.

KSRTC new luxury bus service in rural areas snr

 ಸುತ್ತೂರು :  ಗ್ರಾಮೀಣ ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೂತನ ಐಷಾರಾಮಿ ಬಸ್ ಗಳ ಸೇವೆ ಆರಂಭಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಹದಿನಾರು ಗ್ರಾಮದಿಂದ ಸುತ್ತೂರು ಮಾರ್ಗವಾಗಿ ಮೈಸೂರಿಗೆ ತೆರಳುವ ನೂತನ ಐಷಾರಾಮಿ ಬಸ್ ಗೆ ಹದಿನಾರು ಗ್ರಾಪಂ ಅಧ್ಯಕ್ಷೆ ಸಣ್ಣತಾಯಮ್ಮ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ನೂತನವಾಗಿ 150 ಐಷಾರಾಮಿ ಸಾರಿಗೆ ಬಸ್ ಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ ವರುಣ ಕ್ಷೇತ್ರಕ್ಕೆ 5 ಬಸ್ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಬಸ್ ಸೇವೆ ಒದಗಿಸುವ ದೃಷ್ಟಿಯಿಂದ ನಮ್ಮ ಗ್ರಾಮದಿಂದ ನೂತನ ಐಷಾರಾಮಿ ಬಸ್ ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು.

ಈ ವೇಳೆ ಮಾತನಾಡಿದ ಬಸ್ ಪ್ರಯಾಣಿಕರು, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಬಸ್ ಸೇವೆ ಆರಂಭಿಸಿದ್ದು, ಈ ಬಸ್ ಪ್ರಯಾಣಿಸುವುದು ಮೊದಲಿಗಿಂತ ಸುಲಭ ಎನಿಸಿದ್ದು, ರೈಲಿನಲ್ಲಿ ಸಂಚರಿಸಿದ ಅನುಭವವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಪಂ ಸದಸ್ಯರಾದ ರವಿ, ನಾಗರಾಜ ನಾಯಕ, ಪ್ರಮೋದ್, ಶಿವಕುಮಾರ್, ಮಹದೇವಸ್ವಾಮಿ, ಗೋವಿಂದ, ರಂಗಸ್ವಾಮಿ, ವೀರಭದ್ರ, ಸುತ್ತೂರು ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಎಚ್.ಸಿ. ಬಸವರಾಜು, ಬಸ್ ಡ್ರೈವರ್ ಗಿರೀಶ್ ಹಾಗೂ ಸಿಬ್ಬಂದಿ ಇದ್ದರು.

Latest Videos
Follow Us:
Download App:
  • android
  • ios