KSRTC ಮುಷ್ಕರ : ಶಿಶುವಿನೊಂದಿಗೆ ನಿಲ್ದಾಣದಲ್ಲಿ ಮೂರು ದಿನ ಕಾಲ ಕಳೆದ ಬಾಣಂತಿ

KSRTC  ನೌಕರರ  ಪ್ರತಿಭಟನೆ ಸಾಮಾನ್ಯ ಜನರ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನೇ ಉಂಟು ಮಾಡಿದೆ. ನವಜಾತ ಶಿಶುವಿನೊಂದಿಗೆ ಬಾಣಂತಿಯೋರ್ವಳು ಮೂರು ದಿನ ನಿಲ್ದಾಣದಲ್ಲೇ ಕಳೆದಿದ್ದಾಳೆ

KSRTC Employees Protest Effects On Normal People Life  snr

ಕಲಬುರಗಿ (ಡಿ.14): ತನ್ನ ಮಡಿಲಲ್ಲಿ 20 ದಿನದ ನವಜಾತ ಶಿಶುವನ್ನಿಟ್ಟುಕೊಂಡು ಇಲ್ಲಿನ ಬಸ್‌ ನಿಲ್ದಾಣದಲ್ಲಿ ಮೂರು ದಿನ ಕಾಲ ಕಳೆದ ಬಾಣಂತಿಗೆ ಕಲಬುರಗಿ ನಗರದ ಆಟೋ ಚಾಲಕರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಈ ಬಾಣಂತಿ ಒಂದು ನವಜಾತ ಶಿಶು ಮತ್ತು 3 ವರ್ಷದ ಮಗುವಿನೊಂದಿಗೆ ಕಳೆದ 3 ದಿನಗಳ ಹಿಂದೆಯೇ ತವರೂರು ಲಾತೂರಿನಿಂದ ಕಲಬುರಗಿಗೆ ಆಗಮಿಸಿದ್ದಾಳೆ. 

ಪತ್ನಿ, ಮೂವರು ಮಕ್ಕಳೊಂದಿಗೆ ಬೈಕ್‌ನಲ್ಲಿ 400 ಕಿ.ಮೀ. ಸಂಚಾರ ..

ಇಲ್ಲಿಂದ ತನ್ನ ಪತಿ ವಾಸವಿರುವ ಬೆಂಗಳೂರಿಗೆ ಹೋಗಲು ಆಗಮಿಸಿದ್ದಳು. ಆದರೆ, ಮುಷ್ಕರ ಶುರುವಾಗಿದ್ದರಿಂದ ಆಕೆ ಸಂಕಷ್ಟಕ್ಕೆ ಸಿಲುಕಿದ್ದು, 3 ದಿನ ಬಸ್‌ ನಿಲ್ದಾಣದಲ್ಲೇ ಕೊರೆಯುವ ಚಳಿಯಲ್ಲಿಯೇ ಕಾಲ ಕಳೆದಿದ್ದಾಳೆ.

 ಇದನ್ನು ಗಮನಿಸಿದ ಇಲ್ಲಯ ಆಟೋ ಚಾಲಕರು 3 ಸಾವಿರ ರು. ಚಂದಾ ಸಂಗ್ರಹಿಸಿ ಆಕೆಯನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.

Latest Videos
Follow Us:
Download App:
  • android
  • ios