ಕಲಬುರಗಿ: ಡೀಪೋ ಮ್ಯಾನೇಜರ್ ಕಿರುಕುಳ, ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ
ಡಿಪೋ ಮ್ಯಾನೇಜರ್ ಕಿರುಕುಳದಿಂದ ಈತ ಬೇಸತ್ತಿದ್ದ, ಡಿಪೋ ನಂಬರ್ 2ರಲ್ಲಿನ ಪೆಟ್ರೋಲ್ ಬಂಕ್ ಗನ್ನಿಂದ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬೀರಣ್ಣ.
ಕಲಬುರಗಿ(ಜು.16): ಕೆಎಸ್‌ಆರ್ಟಿಸಿಯಲ್ಲಿ ನೌಕರರಿಗೆ ಕಿರುಕುಳ ಇನ್ನೂ ತಪ್ಪಿಲ್ಲ. ಮೇಲಾಧಿಕಾರಿಯ ಕಿರುಕುಳಕ್ಕೆ ಬೇಸತ್ತ ಕೆಎಸ್‌ಆರ್ಟಿಸಿ ನೌಕರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್ಟಿಸಿ ಬಸ್ ಚಾಲಕ ಕಂ ನಿರ್ವಾಹಕನನ್ನು ಬೀರಣ್ಣ ಎಂದು ಹೇಳಲಾಗಿದೆ. ಡಿಪೋ ಮ್ಯಾನೇಜರ್ ಕಿರುಕುಳದಿಂದ ಈತ ಬೇಸತ್ತಿದ್ದ, ಡಿಪೋ ನಂಬರ್ 2ರಲ್ಲಿನ ಪೆಟ್ರೋಲ್ ಬಂಕ್ ಗನ್ನಿಂದ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇತರೇ ಸಿಬ್ಬಂದಿಗಳು ದೌಡಾಯಿಸಿ ಬಂದು ಭೀರಣ್ಣನನ್ನು ಹಿಡಿದು ಮುಂದಾಗೋ ಅನಾಹುತ ತಪ್ಪಿಸಿದ್ದಾರೆ. ಡ್ರೈವರ್ ಕಮ್ ಕಂಡಕ್ಟರ್ ಎಂದು ಕೆಲಸ ಮಾಡುತ್ತಿರುವ ಬೀರಣ್ಣಾ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.
ಹಫ್ತಾ ವಸೂಲಿಗೆ ಒತ್ತಡ: ಕಲಬುರಗಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಕಾನ್ಸ್ಟೇಬಲ್ಗಳು
ನಗರದ ಡಿಪೋ ನಂಬರ್ 2ರಲ್ಲಿ ನಡೆದಿದೆ. ಡಿಪೋ ಮ್ಯಾನೇಜರ್ ತನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ, ಸರಿಯಾಗಿ ಡ್ಯೂಟಿ ನೀಡುತ್ತಿಲ್ಲ. ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಬೀರಣ್ಣಾ ಅವರು ಆರೋಪಿಸಿದ್ದಾರೆ. ಇವರ ಕಿರುಕುಳಕ್ಕೆ ಬೇಸತ್ತು ತವು ಆತ್ಮಹತ್ಯೆಗೆ ಯತ್ನಿಸಿದ್ದಾಗಿಯೂ ಬೀರಣ್ಣ ದೂರಿದ್ದಾರೆಂದು ಗೊತ್ತಾಗಿದೆ.
ಕಲಬುರಗಿಯಿಂದ ಅಫಜಲಪುರಕ್ಕೆ ಪ್ರತಿನಿತ್ಯ 8 ಸಿಂಗಲ್ ಹೋಗಿ ಬರಲು ಡೀಪೋ ಮೆನೇಜರ್ ಸೂಚನೆ ನೀಡಿದ್ದರು. 8 ಸಿಂಗಲ್‌ಟ್ರಿಪ್ ಆಗದೆ ಇದ್ರೆ ಮರುದಿನ ಡ್ಯೂಟಿ ಕೊಡದ ಡಿಪೋ ಮ್ಯಾನೇಜರ್ ಮಂಜುನಾಥ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಗಳು ಕೇಳಿ ಬಂದಿವೆ. ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೆ ಡಿಪೋಗೆ ಆಗಮಿಸಿದ ಕೆಕೆಆರ್‌ಟಿಸಿ ಡಿಸಿ ಸಿದ್ದಪ್ಪಾ ಗಂಗಾಧರ್ ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.