ಕೆಎಸ್ಆರ್‌ಟಿಸಿಗೂ ಬಂತು ಎಲೆಕ್ಟ್ರಿಕ್ ಬಸ್: ಇಂದಿನಿಂದ ಸಂಚಾರ ಆರಂಭ

ಇಂದು ಬೆಳಗ್ಗೆ 11.30 ಗಂಟೆಗೆ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಿಂದ EV ಪವರ್ ಪ್ಲಸ್ ಬಸ್‌ ರಾಮನಗರಕ್ಕೆ ಹೊರಟಿದೆ. ಬಿಎಂಟಿಸಿ ಬಳಿಕ ಕೆಎಸ್ಆರ್‌ಟಿಸಿ ಮೊದಲ ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. 

KSRTC Electric Bus Service Starts From Jan 12th in Bengaluru grg

ಬೆಂಗಳೂರು(ಜ.13): ಕೆಎಸ್ಆರ್‌ಟಿಸಿಯ ಮೊದಲ ಇಲೆಕ್ಟ್ರಿಕ್ ಬಸ್ ಇಂದಿನಿಂದ(ಶುಕ್ರವಾರ) ರಸ್ತೆಗಿಳಿದಿದೆ. ಹೌದು, ಇಂದು ಕೆಎಸ್ಆರ್‌ಟಿಸಿಯ ಮೊದಲ ಇಲೆಕ್ಟ್ರಿಕ್ ಬಸ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಬೆಂಗಳೂರಿನಿಂದ-ರಾಮನಗರಕ್ಕೆ ಪ್ರಾಯೋಗಿಕವಾಗಿ‌ ಇಂದು ಚಾಲನೆ ಸಿಕ್ಕಿದೆ.  ಇಂದು ಬೆಳಗ್ಗೆ 11.30 ಗಂಟೆಗೆ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಿಂದ EV ಪವರ್ ಪ್ಲಸ್ ಬಸ್‌ ರಾಮನಗರಕ್ಕೆ ಹೊರಟಿದೆ. ಬಿಎಂಟಿಸಿ ಬಳಿಕ ಕೆಎಸ್ಆರ್‌ಟಿಸಿ ಮೊದಲ ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. 

MEIL ಹಾಗೂ KSRTC ಜಂಟಿಯಾಗಿ ಪರಿಸರ ಸ್ನೇಹಿ ಬಸ್ ರಸ್ತೆಗಿಳಿದೆ. ಸಾರಿಗೆ ಸಚಿವ ಶ್ರೀರಾಮುಲು ಅವರು ಡಿಸೆಂಬರ್ 31ರಂದು ಲೋಕಾರ್ಪಣೆ‌ ಮಾಡಿದ್ದರು. ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು ಹೆಸರಿಡಲಾಗಿದೆ. 

KSRTC Electric Bus: ಕೆಎಸ್ಆರ್‌ಟಿಸಿಗೆ ಎಂಟ್ರಿ ಕೊಟ್ಟ ಮೊದಲ ಎಲೆಕ್ಟ್ರಿಕ್ ಬಸ್

KSRTC EV ಪವರ್ ಪ್ಲಸ್ ವಿಶೇಷತೆ ಏನು?

1. ಎರಡೂವರೆ ತಾಸು ಚಾರ್ಜ್ ಮಾಡಿದರೆ 300 km ಕ್ರಮಿಸುವಷ್ಟು ಸಾಮರ್ಥ್ಯ
2. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ
3. ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಕೆ
4. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿ ಚಾರ್ಜ್ ಆಗುವ ರಿ ಜನರೇಷನ್ ಆಗುವ ಸಿಸ್ಟಮ್
5. ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್
6. ಮನರಂಜನೆಗಾಗಿ ಬಸ್ ನಲ್ಲಿ ಎರಡು ಟಿವಿ ಅಳವಡಿಕೆ
7. ಬಸ್ ನಲ್ಲಿ 43 + 2 ಸೀಟಿಂಗ್ ಕೆಪಾಸಿಟಿಯಿದೆ
8. ಬಸ್ ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿ ಇರಲಿದೆ
9. ಫ್ರಂಟ್ ಲಾಗ್ & ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ
10. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್

Latest Videos
Follow Us:
Download App:
  • android
  • ios