ತಿರುವನಂತಪುರ [ಏ. 08] ಆಕೆ ಪರೀಕ್ಷೆಗೆ ಸಿದ್ಧವಾಗಿದ್ದಳು. ಆದರೆ ಅದ್ಯಾವುದೋ ಕಾರಣಕ್ಕೆ ತಡವಾಗಿ ಹೋಗಿತ್ತು. ತಕ್ಷಣ ವಾಹನ ಹುಡುಕಾಡಿದರೂ ಸಿಕ್ಕಿಲ್ಲ. ಇದಾದ ಮೇಲೆ ಕುದುರೆಯನ್ನೇ ಏರಿ ಶಾಲೆಯತ್ತ ಹೊರಟಿದ್ದಾಳೆ.

ಪರೀಕ್ಷೆಗೆ ತಡವಾಗಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಕುದುರೆ ಏರಿ ಬಂದಿದ್ದಾಳೆ. ವಿದ್ಯಾರ್ಥಿನಿಯ ಕುದುರೆ ಸವಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡ್ರೈವರ್ ಸೀಟ್‌ನಲ್ಲಿ ದೇವತೆ ಕಂಡ ಚುನಾವಣಾಧಿಕಾರಿಗಳು!

ಕೇರಳದ ತ್ರಿಶೂರ್ ರಸ್ತೆಯಲ್ಲಿ ವಿದ್ಯಾರ್ಥಿನಿ ಕುದುರೆ ಸವಾರಿ ಮೂಲಕ ಪರೀಕ್ಷಾ ಕೇಂದ್ರ ತಲುಪಿದ್ದಾಳೆ. ಕೇವಲ 17 ಸೆಕೆಂಡ್ ವಿಡಿಯೋ ಇದಾಗಿದ್ದು ವೈರಲ್ ಆಗುತ್ತಿದೆ. 

ಈ ವಿಡಿಯೋ ಗಮನಿಸಿರುವ  ಮಹಿಂದ್ರಾ ಕಂಪನಿಯ ಆನಂದ್ ಮಹಿಂದ್ರಾ, ತ್ರಿಶೂರ್ ನಲ್ಲಿ ಈ ವಿದ್ಯಾರ್ಥಿನಿಯನ್ನು ನೋಡಿದ್ದೀರಾ?  ಬಾಲಕಿಯ ಕುದುರೆ ಸವಾರಿ ನಡೆಸುವ ವಿದ್ಯಾರ್ಥಿನಿಯ ಫೋಟೋವನ್ನು ನಾನು ಸೇವ್ ಮಾಡಿಕೊಳ್ಳುತ್ತೇನೆ. ಆಕೆ ನನ್ನ ಹೀರೋ. ಆಶಾವಾದದೊಂದಿಗೆ ಶಾಲೆಗೆ ಹೋಗುತ್ತಿರುವ ಆಕೆ ಅನೇಕರಿಗೆ ಪ್ರೇರಣೆಯಾಗಬಲ್ಲರು ಎಂದು ಬರೆದುಕೊಂಡಿದ್ದಾರೆ.