ಕೋವಿಡ್ : ಕೇರಳಕ್ಕೆ ತೆರಳುತ್ತಿಲ್ಲ KSRTC ಬಸ್
- ಕೊರೋನಾ ಮಹಾಮಾರಿ 3ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ
- ಕೇರಳಕ್ಕೆ ಪ್ರಯಾಣಿಕರು ಹೋಗದ ಕಾರಣ ಕೆಎಸ್‌ಆರ್‌ಟಿಸಿ ಬಸ್ ಕೇರಳಕ್ಕೆ ತೆರಳುತ್ತಿಲ್ಲ
ಗುಂಡ್ಲುಪೇಟೆ (ಆ.04): ಕೊರೋನಾ ಮಹಾಮಾರಿ 3ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ನೆರೆ ರಾಜ್ಯ ಕೇರಳಕ್ಕೆ ಪ್ರಯಾಣಿಕರು ಹೋಗದ ಕಾರಣ ಕೆಎಸ್‌ಆರ್‌ಟಿಸಿ ಬಸ್ ಕೇರಳಕ್ಕೆ ತೆರಳುತ್ತಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ಕೇರಳದ ಸುಲ್ತಾನ್ ಬತ್ತೇರಿವರೆಗೆ ತೆರಳುತಿತ್ತು. ಅದರೆ ಕೇರಳ ಪ್ರಯಾಣವನ್ನು ಇದೀಗ ನಿಲ್ಲಿಸಲಾಗಿದೆ.
ಗಡಿಯಲ್ಲಿ ತಪಾಸಣೆ ಬಿಗಿಗೊಂಡ ಕಾರಣ ಜನ ಕೆರಳಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ಕೇರಳ ತಪಾಸಣೆ ಕೇಂದ್ರದಲ್ಲಿ ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಆರ್‌ಟಿಪಿಸಿಆರ್ ಟೆಸ್ಟ್ ವ್ಯಾಕ್ಸಿನ್ ಪಡೆದಿರಬೇಕು ಎಂಬ ಆದೇಶ ಹೊರಬಿದ್ದ ಹಿನ್ನೆಲೆ ಜನರು ಬರುತ್ತಿಲ್ಲ, ಆದ್ದರಿಂದ ಬಸ್ 2 ದಿನದಿಂದ ತೆರಳಿಲ್ಲ.
ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಜಯಕುಮಾರ್ ಮಾತನಾಡಿ ಕೇರಳದ ಸುಲ್ತಾನ್ ಬತೇರಿಗೆ ತೆರಳುತ್ತಿದ್ದ ಬಸ್ ಎರಡು ದಿನದಿಂದ ತೆರಳುತ್ತಿಲ್ಲ. ಪ್ರಯಾಣಿಕರು ಬಸ್ಸಿಗೆ ಬಾರದ ಕಾರಣ ಬಸ್ ಓಡಿಸುವುದನ್ನು ನಿಲ್ಲಿಸಿದ್ದೇವೆ. ಬಸ್ ಓಡಿಸಬೇಕು ಎಂಬ ಆದೇಶ ಬಂದಿಲ್ಲ. ಜನ ಇಲ್ಲದ ಕಾರಣ ಬಸ್ ನಿಲ್ಲಿಸಲಾಗಿದೆ ಎಂದು ಹೇಳಿದರು.