ಕಬ್ಬಿಣದ ಶೀಟ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಸಾರಿಗೆ ಸಂಸ್ಥೆ ಬಸ್‌ ಮುಖಾಮುಖಿ ಡಿಕ್ಕಿಯಾಗಿ 16 ಜನರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಸೋಮಸಮುದ್ರ ಗ್ರಾಮದ ಹೊರ ವಲಯದಲ್ಲಿ ಸೋಮವಾರ ಬೆಳಗಿನಜಾವ ಜರುಗಿದೆ.

ಕುರುಗೋಡು (ಮೇ.23): ಕಬ್ಬಿಣದ ಶೀಟ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಸಾರಿಗೆ ಸಂಸ್ಥೆ ಬಸ್‌ ಮುಖಾಮುಖಿ ಡಿಕ್ಕಿಯಾಗಿ 16 ಜನರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಸೋಮಸಮುದ್ರ ಗ್ರಾಮದ ಹೊರ ವಲಯದಲ್ಲಿ ಸೋಮವಾರ ಬೆಳಗಿನಜಾವ ಜರುಗಿದೆ.

ಬೆಂಗಳೂರಿನಿಂದ ಬಳ್ಳಾರಿ ಮಾರ್ಗವಾಗಿ ದೇವದುರ್ಗಕ್ಕೆ ತೆರಳುತ್ತಿದ್ದ ಬಸ್‌ಗೆ ಸಿರುಗುಪ್ಪ ಕಡೆಯಿಂದ ಜಿಂದಾಲ್ ಕಾರ್ಖಾನೆಗೆ ಕಬ್ಬಿಣದ ಶೀಟ್‌ ಸಾಗಿಸುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಲಾರಿ ಚಾಲಕ ತಮಿಳುನಾಡು ಮೂಲದ ಮಹೇಂದ್ರ ಕುಮಾರ ಅವರ ಕಾಲುಗಳಿಗೆ ಮತ್ತು ಬಸ್‌ ಚಾಲಕ ಸಿದ್ದರಾಮ ಅವರ ಕಾಲು ಮತ್ತು ತಲೆಗೆ ತೀವ್ರಸ್ವರೂಪದ ಗಾಯಗಳಾಗಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್‌ನಲ್ಲಿ 30ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ 14 ಜನರಿಗೆ ಚಿಕ್ಕಪುಟ್ಟಗಾಯಗಳಾಗಿದ್ದು, ವಿಮ್ಸ… ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದರು. ಈ ಕುರಿತು ಕುರುಗೋಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಗಳಿಗೆ ಗುದ್ದಿದ ಕಾರು, ಭಯಾನಕ ಅಪಘಾತಕ್ಕೆ ಬೆಚ್ಚಿಬಿದ್ದ Bengaluru!

ನಿಡಘಟ್ಟಬಳಿ ಅಪಘಾತ: ಬೈಕ್‌ ಸವಾರ ಸಾವು

ಮದ್ದೂರು: ರಸ್ತೆ ಬದಿ ಅಳವಡಿಸಿದ್ದ ಸೋಲಾರ್‌ ಪಿಲ್ಲರ್‌ಗೆ ದ್ವಿಚಕ್ರ ವಾಹನ ಡಿಕ್ಕಿಯೊಡೆದ ಪರಿಣಾಮ ಸವಾರ ಮೃತಪಟ್ಟು ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಿಡಘಟ್ಟಗ್ರಾಮದ ಬಳಿ ಭಾನುವಾರ ರಾತ್ರಿ ಜರುಗಿದೆ. ಬೆಂಗಳೂರು ನಗರದ ಬನಶಂಕರಿ ಬಡಾವಣೆಯ ನಿವಾಸಿ ಆನಂದ್‌ ಅವರ ಪುತ್ರ ಗೋವಿಂದರಾಜು(22) ಮೃತಪಟ್ಟವ್ಯಕ್ತಿಯಾಗಿದ್ದು, ಕತ್ರಿಗುಪ್ಪೆ ಬಡಾವಣೆಯ ರವಿಕುಮಾರ್‌ ಹಾಗೂ ಹರ್ಷ ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ. ಮೃತ ಗೋವಿಂದರಾಜು ಅವರ ದ್ವಿಚಕ್ರ ವಾಹನದಲ್ಲಿ ಸ್ನೇಹಿತರಾದ ರವಿಕುಮಾರ್‌ ಹಾಗೂ ಹರ್ಷ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಸವಾರನ ಅಜಾಗರೂಕತೆ ಮತ್ತು ಅತಿವೇಗವಾಗಿ ಚಾಲನೆಯಿಂದ ನಿಯಂತ್ರಣ ತಪ್ಪಿದ ಬೈಕ್‌ ರಸ್ತೆಬದಿ ಅಳವಡಿಸಿದ್ದ ಪಿಲ್ಲರ್‌ಗೆ ಡಿಕ್ಕಿಯೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಗೋವಿಂದರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ… ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ ಬೈಕ್ ಅಪಘಾತ: ಮಗನ ಮಡಿಲಲ್ಲೇ ನರಳಿ ಪ್ರಾಣ ಬಿಟ್ಟ ತಂದೆ!