Asianet Suvarna News Asianet Suvarna News

ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮದಲ್ಲಿ ಮಧುಗಿರಿ

ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಸಮಾರಂಭದ ಹಿನ್ನೆಲೆ ಮಧುಗಿರಿ ಮಧುವಣಗಿತ್ತಿಯಂತೆ ಸ್ವಚ್ಚವಾಗಿ ,ಸುಂದರವಾಗಿ ರಾರಾಜಿಸುತ್ತಿದೆ.

  Ksheerabhagya Dashamanotsava celebrations In Madugiri  snr
Author
First Published Sep 6, 2023, 7:53 AM IST

 ಮಧುಗಿರಿ :  ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಸಮಾರಂಭದ ಹಿನ್ನೆಲೆ ಮಧುಗಿರಿ ಮಧುವಣಗಿತ್ತಿಯಂತೆ ಸ್ವಚ್ಚವಾಗಿ ,ಸುಂದರವಾಗಿ ರಾರಾಜಿಸುತ್ತಿದೆ.

ರಾಜ್ಯಾದ್ಯಂತ 1 ರಿಂದ 10 ನೇ ತರಗತಿ ಓದುವ ಶಾಲಾ ಮತ್ತು ಅಂಗನವಾಡಿ ಮಕ್ಕಳ ಪೌಷ್ಠಿಕತೆ ಹೆಚ್ಚಿಸುವ ದೃಷ್ಠಿಯಿಂದ ೨೦೧೩ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹತ್ವಕಾಂಕ್ಷಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದ್ದರು. ಪ್ರಸ್ತುತ ಕ್ಷೀರಭಾಗ್ಯ ಯೋಜನೆಗೆ ಹತ್ತು ವಷರ್ ಪೂರೈಸಿರುವ ಹಿನ್ನೆಲೆಯಲ್ಲಿ ಇದರ ಸವಿ ನೆನಪಿಗಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ಕೆಎಂಎಫ್ ಮತ್ತು ಜಿಲ್ಲಾಡಳಿತದ ವತಿಯಿಂದ ಏಕಶಿಲಾ ಬೆಟ್ಟದೂರು ಮಧುಗಿರಿಯ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಸೆ.೬ರಂದು ಬುಧವಾರ ನಡೆಯಲಿರುವ ಐತಿಹಾಸಿಕ ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಹಾಗೂ ರಾಜ್ಯ ಮಟ್ಟದ ಹಾಲು

ಉತ್ಪಾದಕರ ಸಮಾವೇಶ ಸಮಾರಂಭಕ್ಕೆ 1.50  ಲಕ್ಷಕ್ಕೂ ಅಕ ಜನರು ಸೇರುವ ಬೃಹತ್ ವೇದಿಕೆ ಸಜ್ಜಾಗಿದ್ದು, ಮಧುಗಿರಿ ನಗರ ಅಕ್ಷರ ಸಹ ಹಬ್ಬದ ವಾತವರಣದಂತೆ ಸಿಂಗಾರಗೊಂಡಿದೆ.

೨ನೇ ಅವಧಿಗೆ ಸಿಎಂ ಆದ ನಂತರ ಇದೇ ಮೊದಲ ಸಲ ಮಧುಗಿರಿಗೆ ನಾಡ ದೊರೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕ್ಷೇತ್ರದ ಶಾಸಕ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ಪುತ್ರ ಎಂಎಲ್‌ಸಿ ಆರ್.ರಾಜೇಂದ್ರ ರಾಜಣ್ಣ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಕಾರ್ಯಕ್ರಮಕ್ಕೆ ಸಿಎಂ.ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಪಶುಸಂಗೋಪನಾ ಸಚಿವ ವೆಂಕಟೇಶ್, ಕೆಎಂಎಫ್‌ ಅಧ್ಯಕ್ಷ ಭೀಮಾನಾಯಕ್ ಸೇರಿ ಕೆಎಂಎಫ್ ಅದಿಕಾರಿಗಳು ಹಾಗೂ ಜಿಲ್ಲಾಢಳಿತ ಮತ್ತು ತಾಲೂಕು ಆಡಳಿತದ ಆಕಾರಿಗಳು ಹಾಲು ಉತ್ಪಾದಕ ರೈತರು ಹಾಗೂ ಎಲ್ಲ ಹಂತದ ಸಹಕಾರಿಗಳು ಭಾಗವಹಿಸಲಿದ್ದಾರೆ.

ಭರದ ಸಿದ್ಧತೆ

ಕಾರ್ಯಕ್ರಮಕ್ಕೆ ಬರುವ ಸಹಕಾರಿಗಳಿಗೆ ೬೦ ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಿದ್ದು, ೫೦ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವರು. ೧೫೦೦ ಪೋಲಿಸ್ ಸಿಬ್ಬಂದಿ ನೇಮಿಸಿದ್ದು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬಂದವರಿಗೆ ಮೆಂತ್ಯಬಾತ್, ಪುಳಿಯೊಗರೆ, ಮೈಸೂರು ಪಾಕ್ ಕೊಡಲು ಸಿದ್ದತೆ ನಡೆಸಿದ್ದು, ೪೫ ಕೌಂಟರ್ ೩ ಕಡೆ ವ್ಯವಸ್ಥೆ ಮಾಡಲಾಗಿದೆ. ಬರುವವರಿಗೆ ೨ ಲಕ್ಷ ಮಜ್ಜಿಗೆ ಪಾಕೇಟ್, ೨ಲಕ್ಷ ಬಾಟಲ್‌ ನೀರಿನ ವ್ಯವಸ್ಥೆ ಮಾಡಲಾಗಿದೆ.

Follow Us:
Download App:
  • android
  • ios