ದಾವಣಗೆರೆ(ಮಾ.22): ‘ಜನತಾ ಕರ್ಫ್ಯೂ’ ಬಗ್ಗೆ ನಾವು ಯಾವತ್ತೂ ಕೇಳಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಅದು ಹೇಗೆ ಹೊಳೆಯಿತೋ ಗೊತ್ತಿಲ್ಲ. ಮಾ.22ಕ್ಕೆ ಕರೆ ನೀಡಿರುವ ಜನತಾ ಕರ್ಫ್ಯೂ ಒಂದು ವಿಶೇಷ ಪ್ರಯತ್ನ, ಕರೆಯಾಗಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಕೊರೋನೋ ವೈರಸ್‌ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾ.22ರಂದು ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ದೇಶ ವಾಸಿಗಳಿಗೆ ಜನತಾ ಕಫä್ರ್ಯಗೆ ಕರೆ ನೀಡಿದ್ದಾರೆ. ಇಂತಹದ್ದನ್ನು ನಾನೆಂದಿಗೂ ಕೇಳಿರಲಿಲ್ಲ ಎಂದಿದ್ದಾರೆ.

ಜನತಾ ಕರ್ಫ್ಯೂ ಬೆಂಬಲಿಸೋಣ, ನಿಸ್ವಾರ್ಥ ಸೇವಾಕರ್ತರನ್ನು ಗೌರವಿಸೋಣ!

ಇದೊಂದು ವಿಶೇಷ ಪ್ರಯತ್ನವಾಗಿದ್ದು, ಅದು ಹೇಗೆ ಮೋದಿಯವರಿಗೆ ಹೊಳೆಯಿತೋ ಗೊತ್ತಿಲ್ಲ ಎಂದು ತಿಳಿಸಿದರು. ಅಧಿಕಾರಿಗಳು, ಸಾರ್ವಜನಿಕರು, ರಾಜಕೀಯ ನಾಯಕರು, ಪಕ್ಷಾತೀತವಾಗಿ, ಧರ್ಮಾತೀತವಾಗಿ ಈ ಕರೆಗೆ ಓಗೊಟ್ಟು, ಸ್ವಯಂ ಪ್ರೇರಣೆಯಿಂದ ಜನತಾ ಕರ್ಫ್ಯೂಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.