ಧಾರವಾಡ(ಜ.10): ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ ಎಂಬಂತಹ ಘಟನೆ ಧಾರವಾಡದಲ್ಲಿ ನಡೆದಿದೆ. ಸೋಸಿಯಲ್ ಡಿಸ್ಟನ್ಸ್ ಇಲ್ಲ, ಮಾಸ್ಕ್ ಇಲ್ಲದೆ ಸಚಿವರು ಕಾಣಿಸಿಕೊಂಡಿದ್ದಾರೆ.

ಧಾರವಾಡ ಜಿಪಂ ಸಭಾಭವನದಲ್ಲಿ ನಡೆದ ಪ್ರಗತಿ ಪತಿಶಿಲನೆ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರೇ ಮಾಸ್ಕ‌ ಧರಿಸದೆ ಕಾಣಿಸಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್  ಇಲಾಖೆಯ ಪ್ರಗತಿ ಪರಿಶಿಲನೆ ಸಭೆ ನಡೆದಿದೆ.

ಕಾಂಗ್ರೆಸ್, ಬಿಜೆಪಿ ಸಹವಾಸ ಸಾಕಾಗಿದೆ: ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ ಎಂದ JDS

ಸಭೆಯಲ್ಲಿ ಮಾಸ್ಕ್ ಹಾಕದೆ ಇರೋ‌ ಸಚಿವ ಕೆ. ಎಸ್ ಈಶ್ವರಪ್ಪ ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಅಧಿಕಾರಿಗಳೆಲ್ಲರೂ ಮಾಸ್ಕ ಧರಿಸಿದ್ದರು. ಆದರೆ ಸಚಿವರು ಮಾತ್ರ ಮಾಸ್ಕ್ ಧರಿಸಿಲ್ಲ.

ಜನರಿಗೊಂದು‌ ನ್ಯಾಯ ಸಚಿವರಿಗೊಂದು ನ್ಯಾಯ ಎಂಬಂತಹ ಘಟನೆ ನಡೆದಿದ್ದು , ಈಶ್ವರಪ್ಪ ಅವರನ್ನು ಭೇಟಿ ಮಾಡುವುದಕ್ಕೆಂದು ಬಂದವರು ಕೂಡಾ ಮಾಸ್ಕ್‌ ಧರಿಸಿರಲಿಲ್ಲ.