Asianet Suvarna News Asianet Suvarna News

ಸೀತೆಗೆ ಹೆಂಡ ಕುಡಿಸಿದ ರಾಮನನ್ನು ಹೇಗೇ ಆದರ್ಶ ವ್ಯಕ್ತಿ ಎನ್ನುತ್ತೀರಿ?: ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ

ಶೂದ್ರ ಶಂಭುಕನ ತಲೆ ಕಡಿದ ರಾಮ ಆದರ್ಶ ವ್ಯಕ್ತಿಯಾಗಲು ಹೇಗೇ ಸಾಧ್ಯ ಎನ್ನುವ ಮೂಲಕ ಪ್ರೊ‌. ಕೆಎಸ್ ಭಗವಾನ್ ಶ್ರೀ ರಾಮನ ವಿರುದ್ಧ ಕಿಡಿಕಾರಿದ್ದಾರೆ.  ದೇಶದಲ್ಲಿ ರಾಮರಾಜ್ಯ ಅನ್ನೋ ಪದವನ್ನ ಕಥೆ ಕಟ್ಟಿಬಿಟ್ಟಿದ್ದಾರೆ. ರಾಮರಾಜ್ಯ ಅನ್ನೋ ಮಾತು ಹೆಚ್ಚು ಹರಡಲು ಕಾರಣರಾದವ್ರು‌ ಮಹಾತ್ಮ ಗಾಂಧಿ ಎಂದಿದ್ದಾರೆ.

KS Bhagwan controversial statement about sri rama and seetha gow
Author
First Published Jan 20, 2023, 5:39 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಡ್ಯ (ಜ.20): ಶೂದ್ರ ಶಂಭುಕನ ತಲೆ ಕಡಿದ ರಾಮ ಆದರ್ಶ ವ್ಯಕ್ತಿಯಾಗಲು ಹೇಗೇ ಸಾಧ್ಯ ಎನ್ನುವ ಮೂಲಕ ಪ್ರೊ‌. ಕೆಎಸ್ ಭಗವಾನ್ ಶ್ರೀ ರಾಮನ ವಿರುದ್ಧ ಕಿಡಿಕಾರಿದ್ದಾರೆ. ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತ ರಾಮ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ದೇಶದಲ್ಲಿ ರಾಮರಾಜ್ಯ ಅನ್ನೋ ಪದವನ್ನ ಕಥೆ ಕಟ್ಟಿಬಿಟ್ಟಿದ್ದಾರೆ. ರಾಮರಾಜ್ಯ ಅನ್ನೋ ಮಾತು ಹೆಚ್ಚು ಹರಡಲು ಕಾರಣರಾದವ್ರು‌ ಮಹಾತ್ಮ ಗಾಂಧಿ. ಆದ್ರೆ ವಾಲ್ಮೀಕಿ ರಾಮಾಯಣ, ಉತ್ತರಖಾಂಡ ಓದಿದ್ರೆ ಈ ಮಾತಿಗೆ ಯಾವುದೇ‌ ಆಧಾರವಿಲ್ಲ. ರಾಮ 14 ವರ್ಷ‌ ಕಾಡಿನಲ್ಲಿ ವನವಾಸವಿದ್ದ. ವನವಾಸ ಮುಗಿಸಿ ವಾಪಸ್ಸು ಬಂದು‌ 11 ವರ್ಷ ರಾಜ್ಯಭಾರ ಮಾಡಿದ. ಆದ್ರೆ ಆಡಳಿತ ನಡೆಸದೆ ಕೆಲ ಪುರೋಹಿತರ ಜೊತೆ ಆ ಕಥೆ ಈ ಕಥೆ ಹೇಳಿಕೊಂಡು‌ ರಾಮ ಕಾಲ ಕಳೆಯುತ್ತಿದ್ದ ಎಂದಿದ್ದಾರೆ.

ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದರ ಹಿಂದಿನ ಕಾರಣವಿಲ್ಲಿದೆ!

ಸೀತೆಗೂ ಹೆಂಡ ಕುಡಿಸಿ, ರಾಮನು ಕುಡಿಯುತ್ತಿದ್ದ:
ಮಧ್ಯಾಹ್ನದ ಬಳಿಕ ರಾಮ ಸೀತೆಗೆ ಹೆಂಡವನ್ನ ಕುಡಿಸಿ,‌ ಆತನು ಕುಡಿತಿದ್ದ, ಅದಕ್ಕೆಲ್ಲ ದಾಖಲೆಗಳಿವೆ ಎಂದು ಕೆಎಸ್ ಭಗವಾನ್ ಹೇಳಿದ್ದಾರೆ. ಇವೆಲ್ಲ ನನ್ನ ಮಾತುಗಳಲ್ಲ, ವಾಲ್ಮೀಕಿ ರಾಮಾಯಾಣ, ಉತ್ತರಖಾಂಡದಲ್ಲಿ ಇರುವ ಮಾತುಗಳು. ರಾಮನ 11 ವರ್ಷದ ಆಡಳಿತದಲ್ಲಿ ಮೂರು ಘಟನೆಗಳು ನಡೆದ್ವು. ಯಾರೋ ಸೀತೆ ಮೇಲೆ ಅಪವಾದ ಹೇಳ್ದಾ ಅಂತಾ ಗರ್ಭಿಣಿ ಸೀತೆಯನ್ನ ಕಾಡಿಗೆ ಓಡಿಸ್ಬಿಟ್ಟ. ಸೀತೆ ಸಮರ್ಥಿಸಿಕೊಳ್ಳಲು ಅವಕಾಶವನ್ನು‌ ಕೊಡಲಿಲ್ಲ. ಕೊಲೆ ಮಾಡಿದ್ರು ಅವಕಾಶ ಕೊಡ್ತಾರೆ. ಕಾಡಿನಲ್ಲಿ ವಾಲ್ಮಿಕಿ ಸಿಗದಿದ್ದರೇ ಗರ್ಭಿಣಿ ಸೀತೆ ಕಥೆ ಏನಾಗ್ತಿತ್ತು. 16-17 ವರ್ಷ ಸೀತೆ ಏನಾದ್ಲು ಅನ್ನೋದನ್ನೆ ರಾಮ ಕೇಳಲಿಲ್ಲ ಎಂದರು. ಇನ್ನು ಊಟ ಕೊಟ್ಟು ದುರ್ವಾಸನ ಮುನಿಯನ್ನ ಸಭೆ ವೇಳೆ ಬಿಟ್ಟಿದ್ದಕ್ಕೆ ಲಕ್ಷಣನನ್ನೆ ರಾಮ ಗಡಿಪಾರು ಮಾಡಿದ. ಕೊನೆಗೆ ಲಕ್ಷಣ, ನದಿ ದಡದ ಮೇಲೆ ಅತ್ಕೊಂಡು ಸತ್ತೋದಾ ಎಂದು ವ್ಯಂಗ್ಯ ವಾಡಿದ್ರು.

Garuda Purana: ಹೀಗ್ ದಿನ ಆರಂಭಿಸಿ, ಎಲ್ಲವೂ ಶುಭ ಆಗುತೈತಿ!

ಶೂದ್ರನ ತಲೆ ಕಡಿದ ರಾಮ ಆದರ್ಶ ವ್ಯಕ್ತಿ ಆಗಲು ಸಾಧ್ಯವೇ?: ಕೆಎಸ್ ಭಗವಾನ್
ತಪಸ್ಸು ಮಾಡ್ತಿದ್ದ ಶೂದ್ರ ಶಂಭುಕನನ್ನ ರಾಮ ಕತ್ತಿಯಲ್ಲೆ ಕಡಿದು ಹಾಕಿದ್ದಾನೆ. ಇವೆಲ್ಲ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹೀಗೀರುವಾಗ ನೀವು ಹೇಗೆ ರಾಮನನ್ನ ಆದರ್ಶ ವ್ಯಕ್ತಿ ಅಂತ ಕರೆಯುತ್ತೀರೀ ಎಂದು ಪ್ರಶ್ನಿಸಿದ್ದಾರೆ. ನಿಮಗೆ ರಾಮನ ಬಗ್ಗೆ ಗೊತ್ತಿಲ್ಲದೆ ಮಕ್ಕಳಿಗೆಲ್ಲ ರಾಮ ಅಂತ ಹೆಸರಿಟ್ಟಿದ್ದೀರಿ. ಜಯರಾಮ, ಅಭಿರಾಮ ಅಂತೆಲ್ಲ ಹೆಸರಿಟ್ಟಿದ್ದೀರಾ. ಹೆಂಗಸರು ಅಯ್ಯೋ ರಾಮರಾಮ ಅಂತೆಲ್ಲ ಬೈಯ್ಯೂತ್ತಾರೆ. ರಾಮ‌ 20 ವರ್ಷ‌ ಹೆಂಡತಿ ಬಿಟ್ಬಿಟ್ಟಿದ್ದ. ಎಂಥಹ ಪರಿಸ್ಥಿತಿಯಲ್ಲಿದ್ದಾರೆ ನೋಡಿ ಜನ ಎಂದು ಶ್ರೀ ರಾಮನ ವಿರುದ್ದ ಪ್ರೊ. ಭಗವಾನ್ ಮತ್ತೆ ಕಿಡಿಕಾರಿದ್ದಾರೆ.

Follow Us:
Download App:
  • android
  • ios