ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಭರ್ತಿಯಾಗಲು ಇನ್ನು ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ.  3 ವರ್ಷಗಳಿಂದ ಜುಲೈ, ಆಗಸ್ಟ್‌ ತಿಂಗಳಲ್ಲಿ ಭರ್ತಿಯಾಗಿದ್ದ ಕೆಆರ್‌ಎಸ್‌ ಈ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಭರ್ತಿ

ಮಂಡ್ಯ (ಅ.27): ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು (KRS) ಭರ್ತಿಯಾಗಲು ಇನ್ನು ಕೇವಲ ಒಂದು ಅಡಿ (Feet) ಮಾತ್ರ ಬಾಕಿ ಇದೆ. 3 ವರ್ಷಗಳಿಂದ ಜುಲೈ, ಆಗಸ್ಟ್‌ ತಿಂಗಳಲ್ಲಿ ಭರ್ತಿಯಾಗಿದ್ದ ಕೆಆರ್‌ಎಸ್‌ ಈ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಭರ್ತಿಯಾಗಿ ಸಮಾಧಾನವನ್ನು ತಂದಿದೆ. ಜಲಾಶಯದ (Dam) ಗರಿಷ್ಠ ಮಟ್ಟ124.80 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ (water Level)123.75 ಅಡಿ ತಲುಪಿದೆ. 

ಜಲಾಶಯಕ್ಕೆ 17,972 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, ಅಣೆಕಟ್ಟೆಯಿಂದ 3,542 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಸದ್ಯ ಅಣೆಕಟ್ಟೆಯಲ್ಲಿ 47.994 ಟಿಎಂಸಿ (TMC) ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 124.80 ಅಡಿ ನೀರು ದಾಖಲಾಗಿತ್ತು. ಜುಲೈ ಅಥವಾ ಆಗಸ್ಟ್‌ ತಿಂಗಳಲ್ಲೇ ಭರ್ತಿಯಾಗುತ್ತಿದ್ದ ಕೆಆರ್‌ಎಸ್‌ ಜಲಾಶಯ ಈ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಭರ್ತಿಯಾಗುತ್ತಿದೆ. 11 ವರ್ಷಗಳ ನಂತರ ಅಕ್ಟೋಬರ್‌ನಲ್ಲಿ ಪೂರ್ಣ ಮಟ್ಟತಲುಪಿದೆ.

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

2010ರ ಅಕ್ಟೋಬರ್‌ 18ರಂದು ಜಲಾಶಯ ತುಂಬಿದ್ದನ್ನು ಸ್ಮರಿಸಬಹುದಾಗಿದೆ. ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ (Agriculture) ಚಟುವಟಿಕೆಗೆ ನೀರಿನ ಕೊರತೆ ಎದುರಾಗಿಲ್ಲ. ಹಾಗಾಗಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

ಅಕ್ಟೋಬರ್‌ನಲ್ಲಿ ಕಾವೇರಿ (Cauvery) ಕಣಿವೆ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ (Rain) ತಮಿಳುನಾಡಿಗೆ (Tamil Nadu) ಹರಿಸಬೇಕಾದ ನೀರು ಪೂರ್ಣ ಪ್ರಮಾಣದಲ್ಲಿ ಹರಿದುಹೋಯಿತು. ಇದರೊಂದಿಗೆ ಕಾವೇರಿ ವಿವಾದ ಎದುರಾಗುವ ಆತಂಕವೂ ದೂರವಾಯಿತು.

ಪ್ರವಾಹದ ಎಚ್ಚರಿಕೆ : ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ನದಿಗೆ 10 ಸಾವಿರ ಕ್ಯುಸೆಕ್‌ನಿಂದ 20 ಸಾವಿರ ಕ್ಯುಸೆಕ್‌ವರೆಗೆ ನೀರು ಹರಿಸಲಾಗುವುದು. ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿ ಇರುವ ವಾಸಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಎರಡು ಅಡಿ ಬಾಕಿ ಇತ್ತು

ಹನ್ನೊಂದು ವರ್ಷದ ಬಳಿಕ ಅಕ್ಟೋಬರ್‌ ತಿಂಗಳಲ್ಲಿ ಕೃಷ್ಣರಾಜಸಾಗರ (KRS) ಜಲಾಶಯ ಭರ್ತಿಯಾಗುತ್ತಿದೆ. ಸಾಮಾನ್ಯವಾಗಿ ಜುಲೈ, ಆಗಸ್ಟ್‌ (august) ತಿಂಗಳಲ್ಲೇ ಪೂರ್ಣ ಮಟ್ಟತಲುಪುತ್ತಿದ್ದ ಕೆಆರ್‌ಎಸ್‌, ಮಳೆಯ ಕೊರತೆ ಮತ್ತು ತಮಿಳುನಾಡಿಗೆ (Tamilnadu) ನೀರು ಹರಿಸಿದ ಪರಿಣಾಮ ಈ ಬಾರಿ ಮೂರು ತಿಂಗಳು ವಿಳಂಬವಾಗಿ ಭರ್ತಿಯಾಗುತ್ತಿದೆ. ಅಣೆಕಟ್ಟೆಪೂರ್ಣ ಮಟ್ಟತಲುಪಲು ಇನ್ನು 2 ಅಡಿ ಮಾತ್ರ ಬಾಕಿ ಉಳಿದಿದೆ.

ಜಲಾಶಯದ ಗರಿಷ್ಠ ಮಟ್ಟ124.80 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ122.40 ಅಡಿ ತಲುಪಿದೆ. ಜಲಾಶಯಕ್ಕೆ 16,385 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, ಅಣೆಕಟ್ಟೆಯಿಂದ 3888 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಸದ್ಯ ಅಣೆಕಟ್ಟೆಯಲ್ಲಿ 46.166 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 124.80 ಅಡಿ ನೀರು ದಾಖಲಾಗಿತ್ತು.

ಸಾಮಾನ್ಯವಾಗಿ ಜುಲೈನಿಂದ ಆಗಸ್ಟ್‌ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗುತ್ತದೆ. ಒಮ್ಮೊಮ್ಮೆ ಸೆಪ್ಟೆಂಬರ್‌ನಲ್ಲಿ, ಅಪರೂಪವೆಂಬಂತೆ ಅಕ್ಟೋಬರ್‌ನಲ್ಲಿ ಪೂರ್ಣ ಮಟ್ಟತಲುಪುತ್ತದೆ. 2010ರ ಅಕ್ಟೋಬರ್‌ 18ರಂದು ಅಣೆಕಟ್ಟು (Dam) ಭರ್ತಿಯಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕಾವೇರಿ (Cauvery) ಮಾತೆಗೆ ಬಾಗಿನ ಸಮರ್ಪಿಸಿದ್ದರು.

  • ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು (KRS) ಭರ್ತಿಯಾಗಲು ಇನ್ನು ಕೇವಲ ಒಂದು ಅಡಿ (Feet) ಮಾತ್ರ ಬಾಕಿ
  • ಇದ 3 ವರ್ಷಗಳಿಂದ ಜುಲೈ, ಆಗಸ್ಟ್‌ ತಿಂಗಳಲ್ಲಿ ಭರ್ತಿಯಾಗಿದ್ದ ಕೆಆರ್‌ಎಸ್‌ ಡ್ಯಾಮ್ ಈ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಭರ್ತಿಯಾಗಿ ಸಮಾಧಾನವನ್ನು ತಂದಿದೆ