Asianet Suvarna News Asianet Suvarna News

ಕೃಷ್ಣಪ್ಪ ತಾವು ಮಾಜಿ ಅನ್ನೋದು ಮರೆತಿದ್ದಾರೆ: ಮಸಾಲಾ ಜಯರಾಮ್‌ ವ್ಯಂಗ್ಯ

ಮಾಜಿ ಶಾಸಕರಾಗಿರುವ ಎಂ.ಟಿ. ಕೃಷ್ಣಪ್ಪನವರು ತಾವಿನ್ನೂ ಹಾಲಿ ಶಾಸಕ ಎಂಬ ಭ್ರಮೆಯಲ್ಲಿದ್ದಾರೆ. ಅವರು ಮಾಜಿ ಶಾಸಕರಾಗಿ ಸುಮಾರು ಒಂದು ಮುಕ್ಕಾಲು ವರ್ಷಗಳೇ ಆಗುತ್ತಾ ಬಂದಿದೆ. ಪಾಪ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರಬಹುದು. ಕೂಡಲೇ ಉತ್ತಮ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡು ಸ್ವಸ್ಥ ಸ್ಥಿತಿಗೆ ಬರಲಿ ಎಂದು ಹಾಲಿ ಶಾಸಕ ಮಸಾಲಾ ಜಯರಾಮ್‌ ವ್ಯಂಗ್ಯ ಮಾಡಿದ್ದಾರೆ.

krishnappa forgot that he is former says masala jayaram
Author
Bangalore, First Published Nov 26, 2019, 9:11 AM IST

ತುರುವೇಕೆರೆ(ನ.26): ಮಾಜಿ ಶಾಸಕರಾಗಿರುವ ಎಂ.ಟಿ. ಕೃಷ್ಣಪ್ಪನವರು ತಾವಿನ್ನೂ ಹಾಲಿ ಶಾಸಕ ಎಂಬ ಭ್ರಮೆಯಲ್ಲಿದ್ದಾರೆ. ಅವರು ಮಾಜಿ ಶಾಸಕರಾಗಿ ಸುಮಾರು ಒಂದು ಮುಕ್ಕಾಲು ವರ್ಷಗಳೇ ಆಗುತ್ತಾ ಬಂದಿದೆ. ಪಾಪ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿರಬಹುದು. ಕೂಡಲೇ ಉತ್ತಮ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡು ಸ್ವಸ್ಥ ಸ್ಥಿತಿಗೆ ಬರಲಿ ಎಂದು ಹಾಲಿ ಶಾಸಕ ಮಸಾಲಾ ಜಯರಾಮ್‌ ವ್ಯಂಗ್ಯ ಮಾಡಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾವು ಕಳೆದ ಒಂದು ಮುಕ್ಕಾಲು ವರ್ಷಗಳಿಂದ ಮಾಡುತ್ತಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿಸಿದ್ದು ಎಂದು ಕೃಷ್ಣಪ್ಪನವರು ಹೇಳುತ್ತಿರುವುದು ಹಾಸ್ಯಾಸ್ಪದ. ಯಾಕೆ ಹೀಗೆ ಆಡುತ್ತಿದ್ದಾರೋ ತಿಳಿಯದಾಗಿದೆ. ಬಹುಶಃ ಮುಂದಿನ ಐದಾರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತದೆ ಅನ್ನೋ ಭ್ರಮೆಯಲ್ಲಿ ಮನಸೋಯಿಚ್ಚೆ ಮಾತನಾಡುತ್ತಿದ್ದಾರೆ.

ತುಮಕೂರು: ಸ್ವಯಂ ನಿವೃತ್ತಿಯಿಂದ ನಷ್ಟ, BSNL ನೌಕರರಿಂದ ಉಪವಾಸ

ಅವರಿಗೆ ಮಾಜಿ ಶಾಸಕರಾಗಿರುವುದು ತಡೆದುಕೊಳ್ಳಲು ಆಗುತ್ತಿಲ್ಲ. ಜನರ ಬಾಯಿಯಲ್ಲಿ ಇರಬೇಕು ಎಂಬ ಕಾರಣಕ್ಕೆ ಭ್ರಮನಿರಸನದಿಂದ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಕೂಡಲೇ ಅವರು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪನವರಿಗೆ ಹಾಲಿ ಶಾಸಕ ಮಸಾಲಾ ಜಯರಾಮ್‌ ಉಚಿತ ಸಲಹೆ ನೀಡಿದರು.

ಪ್ರದರ್ಶನ:

ತಾವು ತಾಲೂಕಿನ ಪ್ರಮುಖ ರಸ್ತೆಗಳ ಅಭಿವೃದ್ಧಿ ಕುರಿತಂತೆ ಮಾಡಿರುವ ಸಾಧನೆಗಳ ಅನುಮೋದನಾ ಪಟ್ಟಿಯನ್ನು ಪ್ರದರ್ಶಿಸಿದ ಶಾಸಕರು ತಾವು ಕ್ಷೇತ್ರದ ಜನರಿಗೆ ಲೆಕ್ಕ ನೀಡಬೇಕು. ಹೊಟ್ಟೆಉರಿಗೆ ಮಾತನಾಡುವ ಮಾಜಿ ಶಾಸಕರಿಗೆ ಉತ್ತರ ಕೊಡಲ್ಲ ಎಂದು ಖಂಡತುಂಡವಾಗಿ ಹೇಳಿದರು. ಮಾಜಿ ಶಾಸಕರು ಬೇಜಾವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ತಾಲೂಕು ಅಭಿವೃದ್ಧಿಗೆ ಸಹಕರಿಸಲಿ ಎಂದರು.

ಡಿ. 20ಕ್ಕೆ ಕೆರೆಗಳು ಭರ್ತಿ:

ಹೇಮಾವತಿ ನಾಲೆಯಲ್ಲಿ ಇನ್ನೂ 34 ಟಿಎಂಸಿಗೂ ಹೆಚ್ಚು ನೀರಿದೆ. ಜನವರಿ 15ರ ವರೆಗೂ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ. ಈ ತಿಂಗಳ 30ರಿಂದ ವಿಭಾಗ 8 ಮತ್ತು 10 ರಲ್ಲಿ ನೀರನ್ನು ಹರಿಸಲಾಗುವುದು. 20 ದಿನಗಳ ಕಾಲಾವಧಿಯಲ್ಲಿ ಉಳಿಕೆ ಕೆರೆಗಳನ್ನು ಭರ್ತಿ ಮಾಡಲಾಗುವುದು. ಜಿಲ್ಲೆಗೆ ಲಭ್ಯವಿರುವ 24.5 ಟಿಎಂಸಿ ನೀರಿನಲ್ಲಿ ಕೇವಲ 10 ಟಿಎಂಸಿ ನೀರು ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ 14.5 ಟಿಎಂಸಿ ನೀರನ್ನು ಜನವರಿ, ಮಾಚ್‌ರ್‍ ತಿಂಗಳಲ್ಲಿ ಸಂಪೂರ್ಣವಾಗಿ ಕಾಲುವೆಗಳ ಮೂಲಕ ಹರಿಸಿಕೊಳ್ಳಲಾಗುವುದು. ರೈತಾಪಿಗಳು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಮಸಾಲಾ ಜಯರಾಮ್‌ ಸ್ಪಷ್ಟಪಡಿಸಿದ್ದಾರೆ.

ಅರಸು ಕರ್ಮಭೂಮಿಯಲ್ಲಿ ಟಫ್‌ ಫೈಟ್‌; ವಿಶ್ವನಾಥ್‌ಗೆ ಪ್ರತಿಷ್ಠೆಯ ಪ್ರಶ್ನೆ

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್‌, ಕಡೇಹಳ್ಳಿ ಸಿದ್ದೇಗೌಡ, ವಿ.ಬಿ.ಸುರೇಶ್‌, ವಿ.ಟಿ.ವೆಂಕಟರಾಮ್‌, ಹೇಮಚಂದ್ರು, ಉಮಾರಾಜ್‌, ಜಯಶೀಲ, ಶೋಭಾ ಸೇರಿದಂತೆ ಇನ್ನು ಅನೇಕ ಕಾರ್ಯಕರ್ತರು ಇದ್ದರು.

Follow Us:
Download App:
  • android
  • ios