ಮಂಡ್ಯ(ನ.22): ಕಳೆದ ಲೋಕಸಭಾ ಚುನಾವಣೆಯ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಮೊಳಗಿದ್ದ ಸ್ವಾಭಿಮಾನಿ ಕಹಳೆ ಸದ್ದು ಕೆ.ಆರ್‌.ಪೇಟೆ ಉಪ ಚುನಾವಣೆ ಶುರುವಾಗಿದೆ.

ಲೋಕಸಭೆ ಬಳಿಕ ಮತ್ತೆ ಮರುಕಳಿಸಿದ ಕಹಳೆ ಗುರುತಿನ ಪಕ್ಷೇತರ ಅಭ್ಯರ್ಥಿ ಸರ್ವೇ ದೇವೇಗೌಡಗೆ, ಆಯೋಗ ಕಹಳೆ ಗುರುತು ನೀಡಿರುವುದು ವರದಾನವಾಗಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಗೆ ದೊರೆತಿದ್ದ ಕಹಳೆ ಗುರುತು ಅಂದು ಮಂಡ್ಯ ಜಿಲ್ಲೆಯ ಸ್ವಾಭಿಮಾನ, ಇಂದು ಕೆ.ಆರ್‌. ಪೇಟೆ ತಾಲೂಕಿನ ಸ್ವಾಭಿಮಾನ ಎಂಬ ದ್ಯೇಯವಾಕ್ಯದೊಂದಿಗೆ ಚುನಾವಣೆಯ ಪ್ರಚಾರಕ್ಕೆ ಇಳಿದ್ದಾರೆ ಪಕ್ಷೇತರ ಅಭ್ಯರ್ಥಿ ದೇವೇಗೌಡರು.

ಮಂಡ್ಯ: JDS ಭದ್ರ ಕೋಟೆ ಭೇದಿಸಲು ಪ್ಲಾನ್ ಬದಲಿಸಿದ BJP

ಒಂದು ಆಶ್ಚರ್ಯದ ಸಂಗತಿ ಎಂದರೆ ಸಂಸದೆ ಸುಮಲತಾ ಹಾಗೂ ಅಂಬರೀಶ್‌ ಅವರ ಭಾವ ಚಿತ್ರಗಳನ್ನು ಹಾಕಿಕೊಂಡೇ ದೇವೇಗೌಡರು ಪ್ರಚಾರ ಮಾಡುತ್ತಿದ್ದಾರೆ. ಸಂಸದೆ ಸುಮಲತಾ ಅನುಮತಿ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ.

ಮನೆ ದೇವರಿಗೆ ಪೂಜೆ:

ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸರ್ವೇ ದೇವೇಗೌಡರು ಶುಕ್ರವಾರ ಸಿಎಂ ಯಡಿಯೂರಪ್ಪ ಮನೆ ದೇವರಿಗೆ ಪೂಜೆ ಮಾಡಿದರು. ಉಪ ಚುನಾವಣೆಯನ್ನು ತಮಗೆ ದೊರೆತಿರುವ ಕಹಳೆ ಚಿಹ್ನೆ ಹಿನ್ನೆಲೆಯಲ್ಲಿ ಕಾಪನಹಳ್ಳಿ ಸ್ವತಂತ್ರ ಸಿದ್ದಲಿಂಗೇಶ್ವರನಿಗೆ ಬೆಂಬಲಿಗರೊಂದಿಗೆ ಪೂಜೆ ಸಲ್ಲಿಸಿದ್ದಾರೆ.

BJP ಅಂದ್ರೆ ಯಾಕಿಷ್ಟು ದ್ವೇಷ..? JDS ಏನ್ ಮಾಡೋಕೆ ಹೊರಟಿದೆ: ನಾರಾಯಣ ಗೌಡ

ಸಿಎಂ ಯಡಿಯೂರಪ್ಪ ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಯೇ ನಮ್ಮ ಮನೆಯ ದೇವರು. ಪೂಜೆ ಸಲ್ಲಿಸಿದ್ದೇನೆ. ಸಂಸದೆ ಸುಮಲತಾ ಅವರ ಭಾವ ಚಿತ್ರವನ್ನ ಅವರ ಅನುಮತಿ ಪಡೆಯದೆ ಬಳಕೆ ಮಾಡಿಕೊಳ್ಳಲು ಆಗುವುದಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಹರಿದಾಡುತ್ತಿದೆ. ಕರಪತ್ರ ನಾನು ಹಂಚಿರುವುದಲ್ಲ. ಆದರೆ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ಗೆದ್ದಿರುವ ಸುಮಲತಾ ಬೆಂಬಲ ಕೋರುವುದಾಗಿ ಹೇಳಿದ ಪಕ್ಷೇತರ ಅಭ್ಯರ್ಥಿ ಸರ್ವೆ ದೇವೇಗೌಡ ಹೇಳಿದರು.