ಮಂಡ್ಯ(ಡಿ.03): ಮತದಾರರನ್ನು ಸೆಳೆಯಲು ಪ್ರಣಾಳಿಕೆ ಬಿಜೆಪಿ ಪ್ರಣಾಳಿಕೆ ಹೊರತಂದಿದೆ. ಕೆ.ಆರ್‌.ಪೇಟೆ ಅಭಿವೃದ್ಧಿಯ ಕುರಿತ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಅಶ್ವತ್ಥ್‌ ನಾರಾಯಣ, ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ.

ಪ್ರಮುಖ ಅಂಶಗಳು:

  • ಕೆ.ಆರ್‌.ಪೇಟೆಯನ್ನು ಸಮಗ್ರ ಅಭಿವೃದ್ಧಿ ಹೊಂದಿದ ತಾಲೂಕಾಗಿ ಮಾಡುವುದು.
  • ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತಗೊಳಿಸುವುದು. ಕೃಷಿ ನೀರಾವರಿಗೆ ಹೆಚ್ಚಿನ ಆದ್ಯತೆ.
  • ನೀರಾವರಿ ಕೊರತೆ ನೀಗಿಸಲು ಶಾಶ್ವತ ನೀರಾವರಿ ಯೋಜನೆ ಜಾರಿ, ಹೇಮಾವತಿ ನಾಲೆಗಳ ದುರಸ್ತಿ ಸೇರಿದಂತೆ ನೀರಾವರಿ ಮತ್ತು ಕೃಷಿಗೆ ಸಂಬಂಧಪಟ್ಟಂತೆ ಸಮಗ್ರ ಅಭಿವೃದ್ಧಿ.
  • ಮೂಲ ಸೌಕರ್ಯ ಹಾಗೂ ಕ್ಷೇತ್ರದ ಎಲ್ಲಾ ರಸ್ತೆಗಳ ಅಭಿವೃದ್ಧಿ.
  • ಅಗತ್ಯವಿರುವ ಕಡೆ ಸರ್ಕಾರಿ ಶಾಲಾ ಕಟ್ಟಡಗಳ ನವೀಕರಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಧ್ಯೇಯ ವಾಕ್ಯ:

ಕ್ಷೇತ್ರದ ಪ್ರಗತಿ ನಮ್ಮ ಹೊಣೆ ಎಂಬ ಧ್ಯೇಯ ವಾಕ್ಯ ಘೋಷಿಸಿದ ಸಿಎಂ ಪುತ್ರ ವಿಜಯೇಂದ್ರ ಮಾತನಾಡಿ, ಸಾರ್ವತ್ರಿಕ ಚುನಾವಣೆಗೆ ಎಷ್ಟು ಮಹತ್ವವಿದೆ ಅಷ್ಟೇ ಉಪಚುನಾವಣೆಗೂ ಇದೆ, ಇದು ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟೂರಿನ ಕ್ಷೇತ್ರ. ಈ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಆಗಬೇಕು ಎಂಬ ಯಡಿಯೂರಪ್ಪ ಅವರಿಗೆ ಕನಸಿದೆ. ಕೆ .ಆರ್‌.ಪೇಟೆಯ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟುಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಅಭಿವೃದ್ಧಿಗಳ ಪಟ್ಟಿಮಾಡಿದ್ದೇವೆ. ನವ ಕೃಷ್ಣರಾಜಪೇಟೆ ಎಂಬ ಕನಸಿನ ಮೂಲಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಕೆಆರ್‌ ಪೇಟೆ ಕ್ಷೇತ್ರವನ್ನು ಬಿಜೆಪಿ ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.

ಅಖಾಡದಲ್ಲಿ ಯುವರಾಜ' ನಾವು ಕಣ್ಣೀರು ಒರೆಸುತ್ತೇವೆ, ಕಣ್ಣೀರು ಹಾಕಲ್ಲ!...

ಕೆಆರ್‌ಪೇಟೆ ಕ್ಷೇತ್ರ ಸದ್ಯ ಅತ್ಯಂತ ಹಿಂದುಳಿದಿದೆ ಶೇ.80ರಷ್ಟುಹಳ್ಳಿಗಳಲ್ಲಿ ಸರಿಯಾದ ರಸ್ತೆ ಇಲ್ಲ. ಹಲವು ಭಾಗಗಳಲ್ಲಿ ನೀರಿನ ಹಾಹಾಕಾರವಿದೆ. ಯುವಕರು ಉದ್ಯೋಗಕ್ಕೆ ಬೇರೆ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆದು ಇಲ್ಲೇ ಉದ್ಯೋಗ ಸೃಷ್ಟಿಮಾಡಬೇಕು. ಮಂಡ್ಯ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಬೇಕು. ಮಹಿಳೆಯರಿಂದ ಉದ್ಯೋಗ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕು. ಕೋಡಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಎಲ್ಲರ ಕೂಗು ಇದೆ. ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

ಇಳಿಯಿತು ಈರುಳ್ಳಿ ಬೆಲೆ : ಈಗೆಷ್ಟು ?

ಡಿಸಿಎಂ ಅಶ್ವಥ್‌ ನಾರಾಯಣ ಮಾತನಾಡಿ, ಕೆ.ಆರ್‌.ಪೇಟೆ ಅಭಿವೃದ್ಧಿ ವಿಚಾರವಾಗಿ ಏನೇನು ಮಾಡುತ್ತೇವೆ ಎಂಬುದರ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಯಡಿಯೂರಪ್ಪ ಅಧಿಕಾರ ದೊರೆತಾಗಲೆಲ್ಲಾ ಕೆ.ಆರ್‌.ಪೇಟೆ ಅಭಿವೃದ್ಧಿ ಪಡಿಸಿದ್ದಾರೆ. 2008ರಲ್ಲಿ 800ರೂ ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದಾರೆ. ವಿಜಯೇಂದ್ರ ಈ ಕ್ಷೇತ್ರದಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ವಿಜಯೇಂದ್ರ ಹೆಸರಲ್ಲೂ ಬೂಕನಕೆರೆ ಎಂಬ ಇನಿಷಿಯಲ್‌ ಇದೆ. ತುಂಬಾ ಆಸಕ್ತಿಯಿಂದ ವಿಜಯೇಂದ್ರ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಹೊರತುಪಡಿಸಿ ವಿಜಯೇಂದ್ರ ಈ ಕ್ಷೇತ್ರದೊಂದಿಗೆ ಭಾವನಾತ್ಮಕ ಸಂಬಂಧ ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದಿದ್ದಾರೆ.

ಮತ್ತೆ ಚಂಡಮಾರುತ, ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ