Asianet Suvarna News Asianet Suvarna News

ಜೆಡಿಎಸ್ ಶಾಸಕ ಸಾ ರಾ ವಿರುದ್ಧ ಅಸಮಾಧಾನ ಭುಗಿಲು

  • ನಮ್ಮ ಹಕ್ಕು ಚ್ಯುತಿಯಾಗಿದೆ ಎಂದು ವಿಧಾನಸೌಧದಲ್ಲಿ ಚರ್ಚೆ ಮಾಡುವ ಶಾಸಕ ಸಾ.ರಾ. ಮಹೇಶ್‌
  • ಆಡಳಿತ ಮಂಡಳಿ ಗಮನಕ್ಕೆ ತಾರದೆ ಮತ್ತು ದೂರಿಲ್ಲದೆ ಸಾರಾ ಅವರು ಪುರಸಭೆಗೆ ಬಂದು  ಹಕ್ಕು ಚ್ಯುತಿ ಮಾಡುವುದು ಸರಿಯಲ್ಲ
KR Nagar Municipality Leaders  Unhappy over JDS MLA Sa Ra mahesh snr
Author
Bengaluru, First Published Oct 25, 2021, 10:36 AM IST

  ಕೆ.ಆರ್‌. ನಗರ (ಅ.25):  ನಮ್ಮ ಹಕ್ಕು ಚ್ಯುತಿಯಾಗಿದೆ ಎಂದು ವಿಧಾನಸೌಧದಲ್ಲಿ ಚರ್ಚೆ ಮಾಡುವ ಶಾಸಕ ಸಾ.ರಾ. ಮಹೇಶ್‌ (Sa Ra mahesh) ಅವರು ಪುರಸಭೆ (Municipality) ಆಡಳಿತ ಮಂಡಳಿ ಗಮನಕ್ಕೆ ತಾರದೆ ಮತ್ತು ದೂರಿಲ್ಲದೆ ಪುರಸಭೆಗೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಲು ಅಧಿಕಾರ ಕೊಟ್ಟವರಾರು ಎಂದು ಪುರಸಭೆ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ (KG Subramanya) ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು (Nataraj) ಪ್ರಶ್ನಿಸಿದರು.

ಶಾಸಕರು ನಮ್ಮ ಅಧಿಕಾರವನ್ನು ಮೊಟಕುಗೊಳಿಸಿ ಹಕ್ಕುಚ್ಯುತಿಗೊಳಿಸಿದ್ದಾರೆ (Privilege Motion) ನಾವು ಇದನ್ನು ಯಾರ ಹತ್ತಿರ ಪ್ರಶ್ನೆ ಮಾಡಬೇಕು ಯಾರ ಬಳಿ ಹಕ್ಕುಚ್ಯುತಿ ಮಂಡಿಸಬೇಕು ಎಂದು  ಪ್ರಶ್ನಿಸಿದರು.

ಪುರಸಭೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಾತೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಿ ಅದಕ್ಕೆ ನಮ್ಮ ಸ್ವಾಗತ ಇದೆ ಆದರೆ ಪುರಸಭೆಗೆ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ (Tahasildar) ಜತೆ ನಮ್ಮ ಗಮನಕ್ಕೆ ತಾರದೇ ಪುರಸಭೆಗೆ ಬಂದು ಸಭೆ ನಡೆಸಿದ್ದು, ನಮಗೆ ಬೇಸರ ತರಿಸಿದೆ. ಸಭೆಗೆ ನಮ್ಮನ್ನು ಕರೆದು ಯಾವ ದಾಖಲೆ ಬೇಕು ಎಂದು ಕೇಳಿದಲ್ಲಿ ನಾವೆ ಸಹಕರಿಸುತ್ತಿದ್ದೆವು ಅಧಿಕಾರಿಗಳ ವಿರುದ್ದ ಹಕ್ಕುಚ್ಯುತಿ ಎನ್ನುವ ಶಾಸಕರು ನಮಗೂ ಹಕ್ಕುಚ್ಯುತಿ ಎಂಬುದಿದೆ ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದುಕೊಳ್ಳುತ್ತೇವೆ ಎಂದರು.

ಜಾತಿ ಒಲೈಕೆ ಮಾಡಿದ್ದರೆ ನಾನೂ ಸೋಲುತ್ತಿದ್ದೆ : ಶಾಸಕ ಸಾ.ರಾ. ಮಹೇಶ್‌

ವಿಧಾನಸೌಧ (Vidhan soudha) ಮತ್ತು ಹಲವೆಡೆ ಹಕ್ಕುಚ್ಯುತಿ ಆಗಿದೆ ಎಂದು ಜಿಲ್ಲಾಧಿಕಾರಿಗಳ (DC) ವಿರುದ್ಧ ಮಾತನಾಡುತ್ತಾರೆ. ಅಲ್ಲದೆ ತಾಲೂಕಿನಲ್ಲಿ ಹಕ್ಕುಚ್ಯುತಿ ಮಾಡಿದರು ಎಂದು ಬಿಇಒ (BEO) ಒಬ್ಬರನ್ನು ಅಡಿಗೆ ಮನೆ ಟೇಪ್‌ ಕಟ್‌ ಮಾಡಿದ ಮಾತ್ರಕ್ಕೆ ಸಸ್ಪೆಂಡ್‌ ಮಾಡಿಸುತ್ತಾರೆ. ಆದರೆ ಅವರು ಈಗ ನಮ್ಮ ಹಕ್ಕುಚ್ಯುತಿ ಮಾಡಿದ್ದಾರಲ್ಲ ನಾವು ಯಾರಿಗೆ ಕೇಳಬೇಕು ನಮಗಾಗಿರುವ ಹಕ್ಕುಚ್ಯುತಿಯನ್ನು ಎಲ್ಲಿ ಮಂಡನೆ ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರಾ ಮಹೇಶ್‌ಗೆ ಕಾನೂನು ಸಂಕಷ್ಟ, ದೂರುದಾರ ಜೆಡಿಎಸ್ MLAಗೆ ಜಾಮೀನು ರಹಿತ ವಾರಂಟ್

ಹೊಣೆ ಹೊರುವಿರಾ :  ಮಾಜಿ ಸಚಿವ ಎಸ್‌. ನಂಜಪ್ಪ ಮತ್ತು ಎಚ್‌. ವಿಶ್ವನಾಥ್‌ (H Vishwanath) ಅವರು ಶಾಸಕರಾಗಿದ್ದಾಗ ಮಾತ್ರ ಆಶ್ರಯ ನಿವೇಶನ ಹಂಚಿಕೆಯಾಗಿದೆ. ಆ ನಂತರ ಯಾವುದೇ ನಿವೇಶನ ಹಂಚಿಕೆ ಮಾಡಿಲ್ಲ. ಆದರೆ ಕಳೆದ ಎರಡು ವರ್ಷಗಳ ಹಿಂದೆ ಅಕ್ರಮ ಖಾತೆ ಮಾಡಲಾಗಿದೆ ಎಂದು ಪತ್ರಿಕೆಗಳಲ್ಲಿ ಹಲವು ಬಾರಿ ವರದಿಯಾದಾಗ ಮತ್ತು ಪತ್ರಕರ್ತರ ವಿರುದ್ಧ ದೂರು ದಾಖಲಾದಾಗ ಬಹಿರಂಗವಾಗಿ ಅಕ್ರಮ ಖಾತೆ ಬಗ್ಗೆ ಸಾರ್ವಜನಿಕರು ದೂರಿದಾಗ, ಗೋಮಾಳ, ರಾಜಕಾಲುವೆ ಹಾಗೂ ಸಾರ್ವಜನಿಕ ಆಸ್ತಿ ಅಕ್ರಮವಾಗಿ ಖಾತೆ ಆಗುತ್ತಿರುವ ಬಗ್ಗೆ ಅಲ್ಲದೆ, ಈ ಹಿಂದೆ ಜಾ.ದಳ ಮುಖಂಡರಿಗೆ ಪುರಸಭೆ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದ ವಿಚಾರ ಇದ್ಯಾವುದು ಶಾಸಕರ ಗಮನಕ್ಕೆ ಬಂದಿರಲಿಲ್ಲವೆ ಎಂದು ಕೇಳಿದರು.

ಹಳೆಯ ಆಶ್ರಯ ನಿವೇಶನದ ಪ್ರತಿಯನ್ನು ತೆಗೆಸಿ ಪರಿಶೀಲಿಸಿ ಹಂಚಿಕೆಯಾಗಿರುವುದನ್ನು ಬಿಟ್ಟು ಬೇರೆಯದನ್ನು ರದ್ದುಮಾಡುವುದಾಗಿ ಹೇಳಿದ್ದೀರಿ ಅದಕ್ಕೆ ನಮ್ಮ ಸಂಪೂರ್ಣ ಸ್ವಾಗತವಿದೆ ರದ್ದು ಮಾಡದಿದ್ದರೆ ನೈತಿಕತೆ ಹೊಣೆ ಹೊರುವಿರಾ ಎಂದು ಸಾ.ರಾ. ಮಹೇಶ್‌ಗೆ ಕೆ.ಜಿ. ಸುಬ್ರಹ್ಮಣ್ಯ ಪ್ರಶ್ನಿಸಿದರು.

Follow Us:
Download App:
  • android
  • ios