ಸಾರಾ ಮಹೇಶ್‌ಗೆ ಕಾನೂನು ಸಂಕಷ್ಟ, ದೂರುದಾರ ಜೆಡಿಎಸ್ MLAಗೆಯೇ ಜಾಮೀನು ರಹಿತ ವಾರಂಟ್

* ಜೆಡಿಎಸ್ ಶಾಸಕ ಸಾ.ರಾ.ಮಹೇಶ್​ಗೆ ಕಾನೂನು ಸಂಕಷ್ಟ
* ಸಾ.ರಾ.ಮಹೇಶ್​ಗೆ  8ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸಮನ್ಸ್ 
* ಅಕ್ಟೋಬರ್ 27ರಂದು ನಡೆಯುವ ವಿಚಾರಣೆಗೆ ಸೂಚನೆ

mysuru court gives summons to JDS mla sa ra mahesh rbj

ಮೈಸೂರು, (ಅ.04): ಜೆಡಿಎಸ್ ಶಾಸಕ ಸಾ.ರಾ.ಮಹೇಶ್​ಗೆ ಕಾನೂನು ಸಂಕಷ್ಟ ಎದುರಾಗಿದ್ದು ಮೈಸೂರಿನ (Mysuru) 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಹುಣಸೂರು ತಾಲೂಕಿನ ಗ್ರಾಮದ ಹೊಸ ರಾಮೇನಹಳ್ಳಿಯ ಲೋಕೇಶ್ ಎಂಬ ವ್ಯಕ್ತಿಯ ವಿರುದ್ಧ ಕೊಲೆ ಬೆದರಿಕೆ, ಸಮಾಜದ ಶಾಂತಿ ಕದಡಿದ ಆರೋಪದಡಿ ಶಾಸಕ ಸಾ.ರಾ.ಮಹೇಶ್‌ (Sa Ra Mahesh) ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಸಾರಾ ಮಹೇಶ್ ಪದೇ ಪದೇ ಗೈರಾಗಿದ್ದರು. 

ಐಎಎಸ್‌ ಅಧಿಕಾರಿಗಳ ವಿರುದ್ಧ ದಾಳಿ ನಡೆಸುವ ತಾಕತ್ತಿದೆಯೇ?: ಸರ್ಕಾರಕ್ಕೆ ಸಾ.ರಾ. ಮಹೇಶ್‌ ಪ್ರಶ್ನೆ

ವಿಚಾರಣೆಗೆ ಆರೋಪಿ ಹಾಜರಾದರೂ ದೂರುದಾರರಾದ ಶಾಸಕ ಮಹೇಶ್​ ಹಾಜರಾಗುತ್ತಿರಲಿಲ್ಲ. ಹೀಗಾಗಿ ನ್ಯಾಯಾಲಯ ಅಕ್ಟೋಬರ್ 27ರಂದು ನಡೆಯುವ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಿ ಇಂದು (ಅ.4) ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.

ಎಚ್.ವಿಶ್ವನಾಥ್ ಆಪ್ತನಾಗಿರುವ ಲೋಕೇಶ್ ಕರೆ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ಶಾಸಕ ಮಹೇಶ್​ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ವಿಚಾರಣೆ ಭಾಗವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಶಾಸಕ ಪದೇ ಪದೇ ವಿಚಾರಣೆಗೆ ಗೈರಾಗಿದ್ದರಿಂದ ನ್ಯಾಯಾಲಯ ಸಾ.ರಾ.ಮಹೇಶ್​ಗೆ  8ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸಮನ್ಸ್ ನೀಡಿದೆ.

Latest Videos
Follow Us:
Download App:
  • android
  • ios