ಬಾಗಲಕೋಟೆ: ಒಂದೇ ದಿನ 17 ಕೊರೋನಾ ಸೋಂಕಿತರು ಗುಣಮುಖ
ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಗುಣಮುಖರಾದವರ ಸಂಖ್ಯೆ 62ಕ್ಕೆ ಏರಿಕೆ| ಬಾಗಲಕೋಟೆ ಜಿಲ್ಲೆಯಲ್ಲಿ ತಬ್ಲೀಘಿ, ಆಜ್ಮೀರ ನಂಟು, ಗುಜರಾತ, ಮುಂಬೈ ನಂಟಿನ ಪರಿಣಾಮ ಸೋಂಕಿತರ ಸಂಖ್ಯೆ 77ಕ್ಕೆ ಏರಿತ್ತು| ಗುಣಮುಖರಾದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾಧಿಕಾರಿ|
ಬಾಗಲಕೋಟೆ(ಮೇ.27): ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಮಂಗಳವಾರ ಒಂದೇ ದಿನ 17 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳುವ ಮೂಲಕ ಸೋಂಕಿತರ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಂತಾಗಿದೆ.
ಕೋವಿಡ್-19 ಮೊದಲ ಸೋಂಕು ಆರಂಭಗೊಂಡ ನಂತರ ಬಾಗಲಕೋಟೆ ಜಿಲ್ಲೆಯಲ್ಲಿ ತಬ್ಲೀಘಿ, ಆಜ್ಮೀರ ನಂಟು, ಗುಜರಾತ, ಮುಂಬೈ ನಂಟಿನ ಪರಿಣಾಮ ಸೋಂಕಿತರ ಸಂಖ್ಯೆ 77ಕ್ಕೆ ಏರುವ ಮೂಲಕ ಗಮನಸೆಳೆದಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಗುಣಮುಖರಾದವರ ಸಂಖ್ಯೆ 62ಕ್ಕೆ ಏರಿಕೆಯಾಗುವ ಮೂಲಕ ಸೋಂಕು ಗುಣಮುಖವಾಗಲಿದೆ ಎಂಬ ಧೈರ್ಯ ಕಾಣಲಾರಂಭಿಸಿದೆ.
ಡಾಣಕಶಿರೂರ ಗ್ರಾಮದ 19 ವರ್ಷದ ಯುವತಿ ಪಿ-704, ಜಮಖಂಡಿಯ 17 ವರ್ಷದ ಓರ್ವ ಬಾಲಕ ಪಿ-894, 22 ವರ್ಷದ ಯುವಕ ಪಿ-893, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸರಿತ್ತಿ ಗ್ರಾಮದ 32 ವರ್ಷದ ಪಿ-892 ಗುಣಮುಖರಾದವರು. ಮುಧೋಳದ ಓರ್ವ ಸಾರಿ ಕೇಸ್ ಸೇರಿದಂತೆ 13 ಜನರಿಗೆ ತಬ್ಲೀಘಿ ಜಮಾತ ನಂಟಿನಿಂದ ಸೋಂಕು ತಗಲಿದ್ದು, ಈಗ ಎಲ್ಲರು ಗುಣಮುಖರಾಗಿದ್ದಾರೆ. ಪಿ-870, ಪಿ-871, ಪಿ-872, ಪಿ-873, ಪಿ-874, ಪಿ-875, ಪಿ-876,ಪಿ-893, ಪಿ-894, ಪಿ-895, ಪಿ-896, ಪಿ-897,ಪಿ-899 ಇವರೇ ಕೋವಿಡ್‌ನಿಂದ ಗುಣಮುಖರಾದವರಾಗಿದ್ದಾರೆ.
ಸಿದ್ದರಾಮಯ್ಯ ಬಗ್ಗೆ ಫೇಸ್ಬುಕ್ನಲ್ಲಿ ಅಶ್ಲೀಲ ಪೋಸ್ಟ್; ಬಾದಾಮಿಯ ಯುವಕ ಅರೆಸ್ಟ್
ಜಿಲ್ಲಾಧಿಕಾರಿಗಳಿಂದ ಪ್ರಮಾಣ ಪತ್ರ:
ಏಕಕಾಲಕ್ಕೆ 17 ಜನ ಕೋವಿಡ್-19 ನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ ತೆರಳಿ ಗುಣಮುಖರಾದವರಿಗೆ ಚಪ್ಪಾಳೆ ತಟ್ಟಿ ಬಿಳ್ಕೋಟ್ಟರಲ್ಲದೆ ಗುಣಮುಖರಾದ ಕುರಿತು ಪ್ರಮಾಣ ಪತ್ರವನ್ನು ಸಹ ವಿತರಿಸಿದರು. ಜಿಲ್ಲಾ ಸರ್ಜನ ಪ್ರಕಾಶ ಬಿರಾದಾರ ನೇತೃತ್ವದ ವೈದ್ಯಕೀಯ ಸಿಬ್ಬಂದಿ ಸಹ ಉಪಸ್ಥಿತರಿದ್ದರು.
ನಗರದ ಮಾರುಕಟ್ಟೆ ಸಂಜೆಯವರೆಗೆ ಓಪನ್:
ಲಾಕ್‌ಡೌನ್ ನಂತರ ಹಾಗೂ ಸಡಲಿಕೆಯ ಪರಿಣಾಮ ಬಾಗಲಕೋಟೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶ ಬೆಳಗ್ಗೆ ಆರಂಭಗೊಂಡು ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ ಜಿಲ್ಲಾಡಳಿತ ಮಂಗಳವಾರದಿಂದ ಸಂಜೆ 5 ಗಂಟೆಯವರೆಗೆ ಮಾರುಕಟ್ಟೆ ತೆಗೆಯಲು ಅವಕಾಶ ನೀಡಿದೆ. ಇದರಿಂದ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಜೊತೆಗೆ ಹಳೆ ನಗರದ ಮಾರುಕಟ್ಟೆ ಪ್ರದೇಶಗಳಿಗೆ ತೆರಳಲು ಹಾಗೂ ಹೊರಡಲು ಟಂಟಂ ಸೇರಿದಂತೆ ಇತರ ವಾಹನಗಳಿಗೂ ಸಹ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.