ಯಮಕನಮರಡಿ(ಸೆ.09): ಡ್ರಗ್ಸ್‌ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಇಂದಿನ ಸರ್ಕಾರ ಮಾತ್ರವಲ್ಲದೆ ಹಿಂದಿನ ಸರ್ಕಾರಗಳೂ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ. ಜತೆಗೆ, ಡ್ರಗ್ಸ್‌ ಎಂಬುದು ಟೆರರಿಸ್ಟ್‌ಗಿಂತಲೂ ಅಪಾಯಕಾರಿ ಎಂದು ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಡಿಕಲ್‌ ಕಾಲೇಜು ಮತ್ತು ಎಂಜಿನಿಯರ್‌ ಕಾಲೇಜುಗಳ ವಿದ್ಯಾರ್ಥಿಗಳು ಡ್ರಗ್ಸ್‌ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಡ್ರಗ್ಸ್‌ ಎಂಬುದು ಟೆಟರಿಸ್ಟ್‌ಗಿಳಿಂತಲೂ ಅಪಾಯಕಾರಿ. ಇದು ಸಮಾಜವನ್ನು ಹಂತ ಹಂತವಾಗಿ ಬಲಿ ತೆಗೆದುಕೊಳ್ಳುತ್ತದೆ ಎಂದರು.

ಡ್ರಗ್ಸ್ ಮಾಫಿಯಾ ; ಸಂಜನಾ ರಿವೀಲ್ ಮಾಡಿದ ಆ 24 ಹೆಸರುಗಳ ಪಟ್ಟಿ ನೋಡಿ

ಇದೇ ವೇಳೆ ನಟಿ ಸಂಜನಾ ಜೊತೆ ಶಾಸಕ ಜಮೀರ್‌ ಅಹ್ಮದ್‌ ವಿಚಾರವಾಗಿ ಮಾತನಾಡಿದ ಅವರು, ಜಮೀರ್‌ ಜೊತೆ ಓಡಾಡಿದ್ದಕ್ಕೆ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಪೊಲೀಸರು ಈ ಕುರಿತು ತನಿಖೆ ನಡೆಸಲಿ ಎಂದರು.