Hubballi Riots: ಆರಂಭದಲ್ಲೇ ಸಿಎಂ ಸುಮ್ಮನಿದ್ದುದೆ ಗಲಭೆ ಹೆಚ್ಚಲು ಕಾರಣ: ಡಿಕೆಶಿ

*    ಬಂಧಿತರೆಲ್ಲರೂ ಗಲಭೆಯಲ್ಲಿ ಭಾಗಿಯಾಗಿದ್ದರು ಎಂದು ಮುಖ್ಯಮಂತ್ರಿಗಳು ಕೂಡ ಹೇಳಲಾಗುವುದಿಲ್ಲ
*   ಮುಖ್ಯಮಂತ್ರಿಗಳು ಕೂಡ ಎಲ್ಲವನ್ನೂ ತೀರ್ಮಾನ ಮಾಡಲು ಆಗುವುದಿಲ್ಲ
*   ಅಧಿಕಾರಿಗಳು ಮಾಡಿದ್ದೆಲ್ಲವೂ ಸರಿ ಎನ್ನಲೂ ಆಗಲ್ಲ

KPCC President DK Shivakumar React on Hubballi Riots grg

ಹುಬ್ಬಳ್ಳಿ(ಏ.20):  ರಾಜ್ಯದಲ್ಲಿ ಕೋಮು ದ್ವೇಷದಂಥ ಘಟನೆಗಳು ನಡೆದ ಆರಂಭದಲ್ಲಿಯೇ ಮುಖ್ಯಮಂತ್ರಿಗಳು ಕಠಿಣ ಶಬ್ದ ಬಳಸಿದ್ದರೆ, ಕ್ರಮ ಕೈಗೊಂಡಿದ್ದರೆ ಹಳೆ ಹುಬ್ಬಳ್ಳಿ ಗಲಭೆಯಂತ(Hubballi Riot) ಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar), ಅಮಾಯಕರ ಬಂಧಿಸುವ, ಪ್ರಕರಣ ದಾಖಲಿಸುವುದು ನಿಲ್ಲಬೇಕು ಎಂದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರೆಲ್ಲರೂ ಗಲಭೆಯಲ್ಲಿ ಭಾಗಿಯಾಗಿದ್ದರು ಎಂದು ಮುಖ್ಯಮಂತ್ರಿಗಳು ಕೂಡ ಹೇಳಲಾಗುವುದಿಲ್ಲ. ಅವರಾಗಲಿ, ಗೃಹ ಸಚಿವರಾಗಲಿ, ನನಗಾಗಲಿ ಪೊಲೀಸ್‌(Police) ಅಧಿಕಾರಿಗಳಿಗೆ ಇರುವ ಅಧಿಕಾರ ಇಲ್ಲ. ತನಿಖೆ ಆಗಬೇಕು. ಮುಖ್ಯಮಂತ್ರಿಗಳು ಕೂಡ ಎಲ್ಲವನ್ನೂ ತೀರ್ಮಾನ ಮಾಡಲು ಆಗುವುದಿಲ್ಲ. ಅಧಿಕಾರಿಗಳು ಮಾಡಿದ್ದೆಲ್ಲವೂ ಸರಿ ಎನ್ನಲೂ ಆಗಲ್ಲ. ಗಲಭೆ ವೇಳೆ ಸುಮ್ಮನೆ ನಿಂತು ನೋಡುತ್ತಿದ್ದವರು, ಸಂಜೆ ಪ್ರಾರ್ಥನೆಗೆ ಬಂದವರನ್ನು ಕೂಡ ಬಂಧಿಸಿದರೆ ಹೇಗೆ ? ಎಂದು ಅವರು ಪ್ರಶ್ನಿಸಿದರು.

Hubli Violence ತಪ್ಪಿತಸ್ಥನ ಶಿರಚ್ಛೇದಕ್ಕೆ ಹುಬ್ಬಳ್ಳಿ ಉದ್ರಿಕ್ತರ ಘೋಷಣೆ ವೈರಲ್!

ತನಿಖೆ ಪ್ರಕ್ರಿಯೆಗೆ ಕಾಂಗ್ರೆಸ್‌(Congress) ಸಂಪೂರ್ಣ ಸಹಕಾರ ನೀಡುತ್ತದೆ. ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಗಲಭೆಯಲ್ಲಿದ್ದರೆ, ತಪ್ಪು ಮಾಡಿದ್ದು ಹೌದಾದರೆ ಅವರನ್ನು ಬಂಧಿಸಲಿ. ಆದರೆ, ಗಲಭೆ ವೇಳೆ ಅವರು ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದರು. ಪೊಲೀಸ್‌ ಅಧಿಕಾರಿಗಳ ಪರ್ಮಿಷನ್‌ ಪಡೆದು ಅವರಿಂದ ಮೈಕ್‌ ಪಡೆದು ಕಾರಿನ ಮೇಲೆ ಹತ್ತಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳದಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೂ ಪೆಟ್ಟಾಗಿದೆ. ಕೈ ಮುರಿದಿದೆ. ಅವರು ಎಲ್ಲಿಯೂ ಹೋಗಿಲ್ಲ. ತಪ್ಪು ಮಾಡಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ. ನಾವು ರಕ್ಷಣೆಗೆ ನಿಲ್ಲಲ್ಲ ಎಂದರು.

ಈಚೆಗೆ ಹುಬ್ಬಳ್ಳಿಯಲ್ಲಿ ಚರ್ಚ್‌ಗೆ ನುಗ್ಗಿ ಹಿಂದೂ(Hindu) ಕಾರ್ಯಕರ್ತರು ಪ್ರಾರ್ಥನೆ ಮಾಡಿದರು. ಧಾರವಾಡದಲ್ಲಿ(Dharwad) ಕಲ್ಲಂಗಡಿ ಒಡೆದು ರಾದ್ಧಾಂತವಾಯಿತು. ಜಾತ್ರೆಗಳಲ್ಲಿ ಒಂದು ಕೋಮಿನವರಿಗೆ ಅವಕಾಶ ನೀಡದಂತೆ ಅಭಿಯಾನ ನಡೆಯಿತು. ರೈತರಿಗೆ ಸಿಗಬೇಕಾದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಪೊಲೀಸರೇ ಕೇಶರಿ ಶಾಲು ಹಾಕಿಕೊಂಡರು. ಇವೆಲ್ಲದಕ್ಕೂ ಒಂದಕ್ಕೊಂದು ಸಂಬಂಧ ಇದ್ದಂತಿದೆ. ಆದರೆ ಈ ವೇಳೆ ಪೊಲೀಸ್‌ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಲಿಲ್ಲ. ಆಗಲೇ ಕಠಿಣ ಶಬ್ದ ವಹಿಸಿದ್ದರೆ ಈ ಪರಿಸ್ಥಿತಿ ಮುಂದುವರಿಯುತ್ತಿರಲಿಲ್ಲ ಎಂದರು.

ರಾಜ್ಯ ಶಾಂತಿಯ ತೋಟ. ಇಲ್ಲಿ ಹೊರರಾಜ್ಯ, ಮಲ್ಟಿನ್ಯಾಶನಲ್‌ ಕಂಪನಿಗಳಿಂದ ಬಂಡವಾಳ ಹೂಡಿಕೆ ಆಗುತ್ತಿದೆ. ಇದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಯಾವುದೇ ಧರ್ಮದವರು ಅಶಾಂತಿಗೆ ಅವಕಾಶ ನೀಡಬಾರದು. ಹುಬ್ಬಳ್ಳಿ -ಧಾರವಾಡದಲ್ಲಿ ಉದ್ಯೋಗ ಸೃಷ್ಟಿಆಗಬೇಕೆ ವಿನಃ ಈ ರೀತಿ ಗಲಾಟೆ ನಡೆಯಲು ಅವಕಾಶ ನೀಡಬಾರದು ಎಂದರು.

ದೇಶಾದ್ಯಂತ ಹಬ್ಬದ ವೇಳೆ ಕೋಮು ಗಲಭೆ ಆಗಿರುವ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಲಾಗುತ್ತಿದೆ. ಇದೆ ಮೊದಲ ಬಾರಿ ಬಿಜೆಪಿ ಮತ್ತು ಇತರ ಪಕ್ಷಗಳು ಸೇರಿ ಅಲ್ಪಸಂಖ್ಯಾತರನ್ನು ಟಾರ್ಗೆಟ್‌ ಮಾಡಿ ವೋಟ್‌ಬ್ಯಾಂಕ್‌ ದ್ರುವೀಕರಣ ಮಾಡುತ್ತಿವೆ. ನಾವು ಈ ದೇಶವನ್ನು ರಕ್ಷಿಸಬೇಕಿದೆ ಎಂದರು.

Hubli Violence ಹುಬ್ಬಳ್ಳಿ ಹಿಂಸಾಚಾರ ಪ್ರೀಪ್ಲಾನ್‌ ಆಗಿತ್ತಾ?ಸ್ಥಳದಲ್ಲಿ 3 ಟ್ರ್ಯಾಕ್ಟರ್‌ ಕಲ್ಲು ಪತ್ತೆ!

ಕಮೀಷನರ್‌ ಕಚೇರಿಗೆ ಭೇಟಿ

ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪೊಲೀಸ್‌ ಆಯುಕ್ತರ ಕಚೇರಿಗೆ ಭೇಟಿ ನೀಡಿ ಕಾಂಗ್ರೆಸ್‌ ನಿಯೋಗದೊಂದಿಗೆ ಸಭೆ ನಡೆಸಿದರು. ಹಳೆ ಹುಬ್ಬಳ್ಳಿ ಗಲಭೆ ಹಾಗೂ ಆರೋಪಿಗಳ ಬಂಧನ ವಿಚಾರವಾಗಿ ಕಮೀಷನರ್‌ ಜತೆಗೆ ಚರ್ಚಿಸಿದ ಅವರು, ನಿಜವಾದ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕ್ರಮ ವಹಿಸಿ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಶಾಸಕರಾದ ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ, ಮುಖಂಡರಾದ ಪ್ರಕಾಶಗೌಡ ಪಾಟೀಲ, ಅನೀಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ನಾಗರಾಜ ಛಬ್ಬಿ, ರಜತ ಉಳ್ಳಾಗಡ್ಡಿಮಠ, ರಾಬರ್ಚ್‌ ದದ್ದಾಪುರಿ, ಪ್ರಕಾಶ ಕ್ಯಾರಕಟ್ಟಿ, ಸದಾನಂದ ಡಂಗನವರ ಸೇರಿ ಇತರರಿದ್ದರು.
 

Latest Videos
Follow Us:
Download App:
  • android
  • ios